For Quick Alerts
  ALLOW NOTIFICATIONS  
  For Daily Alerts

  ಈ ಪುಟಾಣಿ ಇದ್ದಿದ್ದರೆ ಮತ್ತೊಬ್ಬ ಶ್ರೀದೇವಿ ಆಗುತ್ತಿದ್ದಳು

  By Rajendra
  |

  ಈ ಪುಟಾಣಿ ಬದುಕಿದ್ದಿದ್ದರೆ ಮತ್ತೊಬ್ಬ ಶ್ರೀದೇವಿ ಆಗುತ್ತಿದ್ದಳು. ಆದರೆ ವಿಧಿ ಆಕೆಯನ್ನು ಬಿಡಲಿಲ್ಲ. ವಿಮಾನ ಅಪಘಾತದಲ್ಲಿ ತರುಣಿ ಸಚ್‌ದೇವ್ (14) ಸಾವಪ್ಪಿದರು. 'ರಸ್ನಾ' ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದ ಈ ಚಿನ್ನಾರಿ ಅಮಿತಾಬ್ ಜೊತೆ 'ಪಾ' ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.

  "ಈ ಪುಟಾಣಿ ತಾರೆ ಶ್ರೀದೇವಿ ಇದ್ದಂತೆ. ಭಾವನೆಗಳನ್ನು ವ್ಯಕ್ತಪಡಿಸುವಲ್ಲಿ ಶ್ರೀದೇವಿ ಅವರನ್ನೇ ಹೋಲುತ್ತಿದ್ದಳು. ವಿಧಿವಶಳಾಗದಿದ್ದರೆ ಮತ್ತೊಬ್ಬ ಶ್ರೀದೇವಿ ಆಗುತ್ತಿದ್ದರು" ಎಂದಿದ್ದಾರೆ ಹಿಂದಿ ಚಿತ್ರರಂಗದ ಆರ್ ಬಾಲ್ಕಿ ಹಾಗೂ ಗೌರಿ ಶಿಂಧೆ ದಂಪತಿಗಳು. ಸೋಮವಾರ (ಮೇ15) ನೇಪಾಳದಲ್ಲಿ ನಡೆದ ವಿಮಾನ ಅಪಘಾತದಲ್ಲಿ ಸಾವಪ್ಪಿದ 13 ಮಂದಿ ಭಾರತೀಯರಲ್ಲಿ ತರುಣಿ ಸಹ ಒಬ್ಬರಾಗಿದ್ದರು.

  ತರುಣಿ ಸಚ್‌ದೇವ್ ಬಗ್ಗೆ ಬಾಲಿವುಡ್ ಕಂಬನಿ ಮಿಡಿದಿದೆ. "ದೇವರೇ ಈ ಸುದ್ದಿ ಸುಳ್ಳಾಗಲಿ" ಎಂದಿದ್ದಾರೆ ಅಮಿತಾಬ್. ತರುಣಿ ಸಾವನ್ನು ಅರಗಿಸಿಕೊಳ್ಳಲು ಆಗುತ್ತಿಲ್ಲ ಎಂದು ಅಮಿತಾಬ್‌ರ ಪುತ್ರ ಅಭಿಷೇಕ್ ಬಚ್ಚನ್ ಕಂಬನಿ ಮಿಡಿದಿದ್ದಾರೆ. (ಏಜೆನ್ಸೀಸ್)

  English summary
  Filmmaker R Balki said that "Taruni Sachdev was like Sridevi." She was the queen of expressions like Sridevi. He recalls how the 14-year-old would come up with new expressions for every scene.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X