For Quick Alerts
  ALLOW NOTIFICATIONS  
  For Daily Alerts

  ಶುಭ್ಮನ್ ಗಿಲ್‌ನಿಂದ ವಿರಾಟ್‌ ಕೊಹ್ಲಿವರೆಗೂ ಬಾಲಿವುಡ್‌ ನಟಿಯರ ರೊಮ್ಯಾಂಟಿಕ್ ಕಹಾನಿ!

  |

  ನಟಿಯರಿಗೂ ಕ್ರಿಕೆಟ್ ಆಟಗಾರರಿಗೂ ಇರೋ ಸಂಬಂಧ ಇಂದಿನದಲ್ಲ. ಹಿಂದಿನಿಂದಲೂ ಬಾಲಿವುಡ್‌ ನಟಿಯರು ಕ್ರಿಕೆಟ್ ಆಟಗಾರರಿಗೆ ಮನಸೋತಿರುವ ಉದಾಹರಣೆಗಳು ಸಾಕಷ್ಟಿವೆ. ಶರ್ಮಿಳಾ ಟಾಗೋರ್‌ನಿಂದ ಹಿಡಿದು ಇತ್ತೀಚೆಗಿನ ಬ್ರೇಕ್ ಆಗಿರೋ ಸಾರಾ ಅಲಿ ಖಾನ್ ಲವ್ ಸ್ಟೋರಿವರೆಗೂ ಉದಾಹರಣೆಗಳು ಹಲವು ಸಿಗುತ್ತೆ.

  ಬಾಲಿವುಡ್‌ ನಟಿಯರಿಗೆ ಕ್ರಿಕೆಟಿಗರು ಮನಸೋತಿದ್ದೂ ಇದೆ. ಕ್ರಿಕೆಟಿಗರ ಆಟ ನೋಡಿ ಬಾಲಿವುಡ್ ಹೀರೊಯಿನ್‌ಗಳು ಮನ ಸೋತಿದ್ದೂ ಇದೆ. ಇವುಗಳಲ್ಲಿ ಕೆಲವು ಅರ್ಧಕ್ಕೆ ಬ್ರೇಕಪ್ ಆಗಿವೆ. ಮತ್ತೆ ಕೆಲವು ವೈವಾಹಿಕ ಜೀವನಕ್ಕೂ ಕಾಲಿಟ್ಟಿದೆ. ಹೊಸ ಪೀಳಿಗೆಯ ಕ್ರಿಕೆಟ್ ಹಾಗೂ ಬಾಲಿವುಡ್ ಜೋಡಿಯ ರೊಮ್ಯಾಂಟಿಕ್ ಕನೆಕ್ಷನ್‌ನ ಡಿಟೈಲ್ಸ್ ಇಲ್ಲಿದೆ.

  ಅತಿಥಿ ಪಾತ್ರಕ್ಕೆ ಅತೀ ಹೆಚ್ಚು ಕೋಟಿ ಕೋಟಿ ಕೇಳುವ ಬಾಲಿವುಡ್ ಸ್ಟಾರ್‌ಗಳು ಇವರೇ: ಸಂಭಾವನೆ ಎಷ್ಟು?ಅತಿಥಿ ಪಾತ್ರಕ್ಕೆ ಅತೀ ಹೆಚ್ಚು ಕೋಟಿ ಕೋಟಿ ಕೇಳುವ ಬಾಲಿವುಡ್ ಸ್ಟಾರ್‌ಗಳು ಇವರೇ: ಸಂಭಾವನೆ ಎಷ್ಟು?

  ಶುಭ್ಮನ್ ಗಿಲ್- ಸಾರಾ ಅಲಿಖಾನ್

  ಶುಭ್ಮನ್ ಗಿಲ್- ಸಾರಾ ಅಲಿಖಾನ್

  ಶುಭ್ಮನ್ ಗಿಲ್ ಭಾರತೀಯ ಕ್ರಿಕೆಟ್ ತಂಡದ ಉದಯೋನ್ಮುಕ ಆಟಗಾರ. ಭಾರತದ ಭವಿಷ್ಯದ ಆಟಗಾರ ಅಂತಲೇ ಜನಪ್ರಿಯ. ಈತ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಬಾಲಿವುಡ್ ನಟಿಯೊಂದಿಗೆ ಡೇಟಿಂಗ್ ಮಾಡುತ್ತಿರುವ ಸಂಗತಿಯನ್ನುಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ. ಕೆಲವು ದಿನಗಳಿಂದ ಶುಭ್ಮನ್ ಗಿಲ್ ಹಾಗೂ ಸಾರಾ ಅಲಿ ಖಾನ್ ನಡುವೆ ಏನೋ ನಡೀತಿದೆ ಅನ್ನೋ ಗುಸು ಗುಸು ಹಬ್ಬಿತ್ತು. ಆ ಸಂಗತಿಯನ್ನು ಪಂಜಾಬಿ ಚಾಟ್ ಶೋನಲ್ಲಿ ರಿವೀಲ್ ಮಾಡಿದ್ದಾರೆ. ಈ ಮೂಲಕ ಕ್ರಿಕೆಟ್ ಬಾಲಿವುಡ್ ಕನೆಕ್ಷನ್‌ಗೆ ಹೊಸ ಜೋಡಿ ಸಿಕ್ಕಂತಾಗಿದೆ.

  ಅಥಿಯಾ ಶೆಟ್ಟಿ- ಕೆಎಲ್ ರಾಹುಲ್!

  ಅಥಿಯಾ ಶೆಟ್ಟಿ- ಕೆಎಲ್ ರಾಹುಲ್!

  ಭಾರತೀಯ ಕ್ರಿಕೆಟ್ ತಂಡದ ಉಪನಾಯಕ ಕೆಎಲ್ ರಾಹುಲ್ ಹಾಗೂ ನಟ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ ಜೋಡಿ ಬಗ್ಗೆನೂ ಚರ್ಚೆಯಾಗುತ್ತಿದೆ. ಇಬ್ಬರೂ ಸೋಶಿಯಲ್ ಮೀಡಿಯಾದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳುತ್ತಲೇ ಇರುತ್ತಾರೆ. ಬಾಲಿವುಡ್ ಮೂಲಗಳ ಪ್ರಕಾರ, ಅಥಿಯಾ ಶೆಟ್ಟಿ ಹಾಗೂ ಕೆ ಎಲ್ ರಾಹುಲ್ ಇಬ್ಬರೂ 2023ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ. ಆದರೆ, ಇದೂವರೆಗೂ ಇಬ್ಬರೂ ಲವ್‌ನಲ್ಲಿ ಬಿದ್ದಿರೋ ವಿಚಾರದ ಬಗ್ಗೆ ಮಾಹಿತಿ ಹಂಚಿಕೊಂಡಿಲ್ಲ.

  ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ

  ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ

  ಟೀಂ ಇಂಡಿಯಾದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಹಲವು ವರ್ಷ ಡೇಟಿಂಗ್ ನಡೆಸಿದ್ದರು. 2017ರಲ್ಲಿ ವಿರಾಟ್ ಹಾಗೂ ಅನುಷ್ಕಾ ಶರ್ಮಾ ವೈವಾಹಿಕ ಜೀವನಕ್ಕೆ ಕಾಲಿಟ್ಟು ತಮ್ಮ ಪ್ರೀತಿಯನ್ನು ಮತ್ತಷ್ಟು ಗಟ್ಟಿಗೊಳಿಸಿದ್ದರು.

  ಹಾರ್ದಿಕ್ ಪಾಂಡ್ಯ-ನತಾಶಾ

  ಹಾರ್ದಿಕ್ ಪಾಂಡ್ಯ-ನತಾಶಾ

  ಟೀಂ ಇಂಡಿಯಾದ ಆಲ್‌ ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ಬಾಲಿವುಡ್ ನಟಿ ನತಾಶಾ ಸ್ಟಾಂಕೊವಿಕ್‌ ಇಬ್ಬರೂ ಮುಂಬೈನ ಪಾರ್ಟಿಯೊಂದರಲ್ಲಿ ಭೇಟಿಯಾಗಿದ್ದರು. ಅಲ್ಲಿ ಆದ ಪರಿಚಯ ಸ್ನೇಹಕ್ಕೆ ತಿರುಗಿತ್ತು. ಆ ಸ್ನೇಹ ಪ್ರೀತಿಗೆ ತಿರುಗಿ, ಲಿವ್ ಇನ್‌ ರಿಲೇಷನ್‌ಶಿಪ್‌ನಲ್ಲಿತ್ತು. 2020ರಲ್ಲಿ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಇಬ್ಬರೂ ಪ್ರೆಗ್ನೆನ್ಸಿ ಹಾಗೂ ಮದುವೆ ಎರಡನ್ನೂ ಒಟ್ಟಿಗೆ ಅನೌನ್ಸ್ ಮಾಡಿದ್ದರು. ಈಗ ಇಬ್ಬರಿಗೂ ಅಗಸ್ತ್ಯ ಅನ್ನೋ ಮಗನಿದ್ದಾನೆ.

  ಯುವರಾಜ್‌ ಸಿಂಗ್-ಹಝೇಲ್ ಕೀಚ್

  ಯುವರಾಜ್‌ ಸಿಂಗ್-ಹಝೇಲ್ ಕೀಚ್

  ಟೀಂ ಇಂಡಿಯಾದ ಮಾಜಿ ಆಟಗಾರ ಯುವರಾಜ್ ಸಿಂಗ್ ಬಾಲಿವುಡ್‌ ನಟಿ ಹಝೇಲ್ ಕೀಚ್ ಲವ್‌ನಲ್ಲಿ ಬಿದ್ದಿದ್ದರು. ಕೆಲವು ವರ್ಷಗಳ ಬಳಿಕ ಇಬ್ಬರೂ 2016ರಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು.

  ಹರ್ಭಜನ್ ಸಿಂಗ್-ಗೀತಾ ಬಸ್ರಾ

  ಹರ್ಭಜನ್ ಸಿಂಗ್-ಗೀತಾ ಬಸ್ರಾ

  ಟೀ ಇಂಡಿಯಾದ ಮಾಜಿ ಸ್ಲಿನ್ನರ್ ಹರ್ಭಜನ್ ಸಿಂಗ್ ಕೂಡ ಲವ್‌ನಲ್ಲಿ ಬಿದ್ದಿದ್ದರು. ಪಂಜಾಬಿ ನಟಿ ಗೀತಾ ಬಸ್ರಾ ಜೊತೆ ಕೆಲವು ವರ್ಷ ಡೇಟಿಂಗ್ ನಡೆಸಿದ ಬಳಿಕ ವೈವಾಹಿಕ ಜೀವನಕ್ಕೆ ಕಾಲಿಡಲು ನಿರ್ಧರಿಸಿದ್ದರು. 2015ರಲ್ಲಿ ಈ ಜೋಡಿ ವೈವಾಹಿಕ ಜೀವನಕ್ಕೆ ಎಂಟ್ರಿ ಕೊಟ್ಟಿತ್ತು.

  English summary
  Team Indian Cricketers And Their Bollywood Connection With Actress, Know More.
  Wednesday, November 16, 2022, 20:55
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X