»   » ಹೆಸರು ಬದಲಿಸಿಕೊಂಡಿರುವ ಸಲ್ಲು, ಸನ್ನಿ, ಕ್ಯಾಟ್, ಬಿಗ್-ಬಿಯ ಮೂಲ ಹೆಸರುಗಳೇನು.?

ಹೆಸರು ಬದಲಿಸಿಕೊಂಡಿರುವ ಸಲ್ಲು, ಸನ್ನಿ, ಕ್ಯಾಟ್, ಬಿಗ್-ಬಿಯ ಮೂಲ ಹೆಸರುಗಳೇನು.?

Posted By:
Subscribe to Filmibeat Kannada

ಸಿನಿಮಾದಲ್ಲಿ ಹೀರೋ ಅಥವಾ ಹೀರೋಯಿನ್ ಆಗಬೇಕು ಅಂದ್ರೆ ಒಳ್ಳೆ ಹೈಟು, ಒಳ್ಳೆ ಪರ್ಸನಾಲಿಟಿ, ಸಿಕ್ಸ್ ಪ್ಯಾಕ್ ಹೀಗೆ ಎಲ್ಲವೂ ಮುಖ್ಯ. ಅದೇ ರೀತಿ ಹೆಸರು ಕೂಡ ಎಲ್ಲರ ಗಮನ ಸೆಳೆಯುವಂತಿರಬೇಕು. ಅದಕ್ಕಾಗಿಯೇ ಸಿನಿಮಾ ಮಂದಿ ಬಣ್ಣದ ಲೋಕಕ್ಕೆ ಬರುತ್ತಿದ್ದಂತೆ ತಮ್ಮ ಹೆಸರುಗಳನ್ನ ಬದಲಾಯಿಸಿಕೊಳ್ಳುವುದು.

ಇದು ಎಲ್ಲ ಇಂಡಸ್ಟ್ರಿಯಲ್ಲೂ ಸಾಮಾನ್ಯ. ಕನ್ನಡದಲ್ಲಿ ಡಾ ರಾಜ್ ಕುಮಾರ್, ಡಾ.ವಿಷ್ಣುವರ್ಧನ್, ದರ್ಶನ್, ಶಿವಣ್ಣ, ಪುನೀತ್ ರಾಜ್ ಕುಮಾರ್ ಹೀಗೆ ಎಲ್ಲರೂ ಹೆಸರು ಬದಲಿಸಿಕೊಂಡವರೇ.

ಹೀಗೆ ತಮ್ಮ ಮೂಲ ಹೆಸರನ್ನ ಬದಲಿಸಿಕೊಂಡಿರುವ ನಟರ ಪಟ್ಟಿ ಬಾಲಿವುಡ್ ಇಂಡಸ್ಟ್ರಿಯಲ್ಲೂ ದೊಡ್ಡದಿದೆ. ಅಮಿತಾಬ್ ಬಚ್ಚನ್, ಮಿಥುನ್ ಚಕ್ರವರ್ತಿ, ಕತ್ರಿನಾ ಕೈಫ್ ಇವರ ಹೆಸರಲ್ಲ ಸಿನಿಮಾ ಪ್ರಪಂಚಕ್ಕೆ ಬಂದಮೇಲೆ ಬದಲಾಯಿಸಿಕೊಂಡಿರುವುದೇ. ಹಾಗಿದ್ರೆ, ಹಿಂದಿ ಇಂಡಸ್ಟ್ರಿಯ ಯಾವ ನಟರ ಹೆಸರು ಬದಲಾಗಿದೆ ಎಂದು ಮುಂದೆ ಓದಿ.....

ಅಮಿತಾಬ್ ಬಚ್ಚನ್ ಮೂಲ ಹೆಸರೇನು.?

ಭಾರತೀಯ ಸಿನಿಲೋಕದಲ್ಲಿ ಬಿಗ್ ಬಿ ಅಂತಾಲೆ ಕರೆಸಿಕೊಳ್ಳುವ ನಟ ಅಮಿತಾಬ್ ಬಚ್ಚನ್ ಮೂಲ ಹೆಸರು 'ಇಂಕ್ವಿಲಾಬ್ ಶ್ರೀವಾಸ್ತವ್'. ಚಿತ್ರರಂಗಕ್ಕೆ ಬಂದ ನಂತರ ತಮ್ಮ ಹೆಸರು ಬದಲಾಯಿತು. ಹಾಗೆ ಅದೃಷ್ಟವೂ ಬದಲಾಯಿತು. ಮತ್ತೊಬ್ಬ ಹಿರಿಯ ನಟ ದಿಲೀಪ್ ಕುಮಾರ್ ಅವರ ಮೂಲ ಹೆಸರು ಮಹಮ್ಮದ್ ಯೂಸೂಫ್ ಖಾನ್.

ಅಮಿತಾಬ್ ಬಚ್ಚನ್ ಆಸ್ಪತ್ರೆಗೆ ದಾಖಲು: ಆರೋಗ್ಯದಲ್ಲಿ ಚೇತರಿಕೆ

ಸಲ್ಮಾನ್ ಖಾನ್ ಮೊದಲ ಹೆಸರೇನು.?

ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅವರಿಗೂ ಮೊದಲ ಹೆಸರು ಬೇರೆ ಇದೆ. ಮನೆಯವರು ಸಲ್ಲುಗೆ ಇಟ್ಟಿದ್ದ ಹೆಸರು 'ಅಬ್ದುಲ್ ರಶೀದ್ ಸಲೀಮ್ ಖಾನ್'. ನಟ ಸನ್ನಿ ಡಿಯೋಲ್ ಅವರ ಮೊದಲ ಹೆಸರು ಅಜಯ್ ಸಿಂಗ್ ಡಿಯೋಲ್.

ಸಲ್ಮಾನ್ ಮನೆ ಮುಂದೆ ಹೈಡ್ರಾಮಾ: ಆತ್ಮಹತ್ಯೆಗೆ ಮುಂದಾದ 'ಪಾಗಲ್' ಅಭಿಮಾನಿ

ಸನ್ನಿ ಲಿಯೋನ್ ಹೆಸರೇನು.?

ಮಾಜಿ ನೀಲಿ ತಾರೆ, ಬಾಲಿವುಡ್ ನ ಹಾಟ್ ಬಾಂಬ್ ನಟಿ ಸನ್ನಿ ಲಿಯೋನ್ ಹೆಸರು ಕೇಳಿದ್ರೆ ಯುವಜನಾಂಗ ಖುಷಿಯಾಗುತ್ತಾರೆ. ಈ ಸನ್ನಿಯ ಹೆಸರು ಮೊದಲು 'ಕರನ್ಜಿತ್ ಕೌರ್ ವೋಹ್ರಾ'. ಬಾಲಿವುಡ್ ನ ಇನ್ನೊಬ್ಬ ನಟಿ ಮಹಿಮಾ ಚೌಧರಿಯ ಮೊದಲು ಹೆಸರು ರಿತು ಚೌಧರಿ.

ಅಕ್ಷಯ್-ಜಾನ್ ಅಬ್ರಾಹಂ ಹೆಸರೇನು.?

ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಅವರ ಮೊದಲ ಹೆಸರು 'ರಾಜೀವ್ ಹರಿ ಓಂ ಭಾಟಿಯಾ'. ಜಾನ್ ಅಬ್ರಾಹಂ ಅವರ ಮೂಲ ಹೆಸರು 'ಫಾರಾನ್ ಅಬ್ರಾಹಂ'. ಇನ್ನು ಮಿಥುನ್ ಚಕ್ರವರ್ತಿಯ ಮೊದಲ ಹೆಸರು 'ಗೌರಂಗ್ ಚಕ್ರವರ್ತಿ'.

ಕತ್ರಿನಾ-ಮಲ್ಲಿಕಾ ಹೆಸರೇನು.?

ಬಾಲಿವುಡ್ ನಟಿ ಕತ್ರಿನಾ ಕೈಫ್ ಅವರ ಮೂಲ ಹೆಸರು ಕೇಟ್ ಟರ್ಕುಟ್ಟೆ ಆಗಿದ್ದರೇ, ಮಲ್ಲಿಕಾ ಶರಾವತ್ ಅವರ ಮೊದಲ ಹೆಸರು ರೀಮಾ ಲಾಂಬ್. ಇನ್ನು ಪ್ರೀತಿ ಜಿಂಟಾ ಅವರ ಮೊದಲ ಹೆಸರು ಪ್ರೀತಮ್ ಜಿಂಟಾ ಸಿಂಗ್ ಎಂದಿತ್ತು.

ಐಟಂ ಹಾಡಿಗೆ ಹೆಜ್ಜೆ ಹಾಕಿದ 'ಬಿಗ್ ಬಾಸ್' ನಿವೇದಿತಾ ಗೌಡ.!

English summary
From Dilip Kumar To Katrina Kaif, these Bollywood stars have changed their orginal names and adapted attractive screen names. Here is a list of few Bollywood celebrities who changed their birth names after coming into films.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X