For Quick Alerts
  ALLOW NOTIFICATIONS  
  For Daily Alerts

  ಅಕ್ಷಯ್ ಕುಮಾರ್ ಮೊದಲ ಸಂಬಳವೆಷ್ಟು? ನಟನಾಗದಿದ್ದರೆ ಏನಾಗಬೇಕು ಅಂದುಕೊಂಡಿದ್ದರು ಖಿಲಾಡಿ?

  |

  ಭಾರತೀಯ ಸಿನಿಮಾರಂಗದ ಖ್ಯಾತ ನಟರಲ್ಲಿ ಖಿಲಾಡಿ ಅಕ್ಷಯ್ ಕುಮಾರ್ ಕೂಡ ಒಬ್ಬರು. ಅತೀ ಹೆಚ್ಚು ಸಂಭಾವನೆ ಪಡೆಯುವ ಅಕ್ಷಯ್ ಕುಮಾರ್ ಸದ್ಯ ಬಾಲಿವುಡ್ ನ ಬೇಡಿಕೆಯ ನಟನಾಗಿದ್ದಾರೆ. ಸಿನಿಮಾದ ಒಂದು ದೃಶ್ಯಕ್ಕೆ ಕೋಟಿ ಕೋಟಿ ಜೇಬಿಗೆ ಇಳಿಸುವ ಅಕ್ಷಯ್ ಕುಮಾರ್ ಮೊದಲು ಪಡೆದ ಸಂಬಳದ ಬಗ್ಗೆ ಮಾತನಾಡಿದ್ದಾರೆ.

  ನಟ ಅಕ್ಷಯ್ ಕುಮಾರ್ ಇತ್ತೀಚಿಗೆ 'ಇನ್ ಟು ದಿ ವೈಲ್ಡ್ ವಿತ್ ಬೇರ್ ಗ್ರಿಲ್ಸ್' ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಕರ್ನಾಟಕದ ಬಂಡೀಪುರ ಅಭಯಾರಣ್ಯದಲ್ಲಿ ಸೆರೆ ಹಿಡಿಯಲಾಗಿದ್ದ ಈ ಕಾರ್ಯಕ್ರಮದಲ್ಲಿ ಅಕ್ಷಯ್ ಮೊದಲ ಸಂಭಾವನೆ ಮತ್ತು ಮೊದಲ ಮಾಡೆಲಿಂಗ್ ಅನುಭವವನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ..

  ಆಯುರ್ವೇಧ ಚಿಕಿತ್ಸೆಗಾಗಿ ಗೋಮೂತ್ರ ಕುಡಿದಿದ್ದ ಅಕ್ಷಯ್ ಕುಮಾರ್!

  ಬೇರ್ ಗ್ರಿಲ್ಸ್ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್

  ಬೇರ್ ಗ್ರಿಲ್ಸ್ ಕಾರ್ಯಕ್ರಮದಲ್ಲಿ ಅಕ್ಷಯ್ ಕುಮಾರ್

  ರೋಚಕವಾದ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವ ಅಕ್ಷಯ್ ಕುಮಾರ್, ರೋಚಕ ಸಿನಿ ಜರ್ನಿಯ ಬಗ್ಗೆಯೂ ಮಾತನಾಡಿದ್ದಾರೆ. ಅಕ್ಷಯ್ ಸಿನಿಮಾ ನಟನಾಗಬೇಕೆಂದು ಅಂದುಕೊಂಡಿರಲಿಲ್ಲವಂತೆ. ಮಾರ್ಷಲ್ ಆರ್ಟ್ಸ್ ಟೀಚರ್ ಆಗಬೇಕೆಂದುಕೊಂಡಿದ್ದ ಅಕ್ಷಯ್ ಈಗ ದೊಡ್ಡ ನಟನಾಗಿ ಗುರುತಿಸಿಕೊಂಡಿದ್ದಾರೆ. ಈ ಬಗ್ಗೆ ಅಕ್ಷಯ್, ಬೇರ್ ಗ್ರಿಲ್ಸ್ ಜೊತೆ ಹಂಚಿಕೊಂಡಿದ್ದಾರೆ.

  ಮೊದಲ ಮಾಡೆಲಿಂಗ್ ಅನುಭವ ಬಿಚ್ಚಿಟ್ಟ ಅಕ್ಷಯ್

  ಮೊದಲ ಮಾಡೆಲಿಂಗ್ ಅನುಭವ ಬಿಚ್ಚಿಟ್ಟ ಅಕ್ಷಯ್

  ಒಬ್ಬ ವಿದ್ಯಾರ್ಥಿಯ ತಂದೆ ಹೇಳಿದ ಕಾರಣಕ್ಕೆ ಅಕ್ಷಯ್ ಕುಮಾರ್ ಮಾಡೆಲಿಂಗ್ ಮಾಡಲು ಒಪ್ಪಿಕೊಳ್ಳುತ್ತಾರಂತೆ. ಅಲ್ಲದೆ ಅವರ ಶಿಫಾರಸ್ಸಿನ ಮೇರೆಗೆ ಮಾಡೆಲಿಂಗ್ ನಲ್ಲಿ ಕ್ಯಾಮರಾ ಮುಂದೆ ಪೋಸ್ ನೀಡಲು ಮುಂದಾಗುತ್ತಾರೆ. ಮೊದಲ ಮಾಡೆಲಿಂಗ್ ಗೆ ಅಕ್ಷಯ್, ಆ ಕಾಲಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ.

  21 ಸಾವಿರ ಸಂಭಾವನೆ ಪಡೆದಿದ್ದ ಅಕ್ಷಯ್ ಕುಮಾರ್

  21 ಸಾವಿರ ಸಂಭಾವನೆ ಪಡೆದಿದ್ದ ಅಕ್ಷಯ್ ಕುಮಾರ್

  ಅಕ್ಷಯ್ ಕುಮಾರ್ ಮೊದಲ ಮಾಡೆಲಿಂಗ್ ನಲ್ಲಿ 21 ಸಾವಿನ ರೂಪಾಯಿ ಗಳಿಸುತ್ತಾರೆ. ಇದರಿಂದ ಅಚ್ಚರಿಗೊಂಡ ಅಕ್ಷಯ್ ಕುಮಾರ್ "ಮಾರ್ಷಲ್ ಆರ್ಟ್ಸ್ ಟೀಚರ್ ಆಗಿದ್ದರೆ ಒಂದು ದಿನಕ್ಕೆ 5 ಸಾವಿರ ಗಳಿಸುತ್ತಿದ್ದೆ. ಆದರೆ ಕ್ಯಾಮರಾ ಮುಂದೆ ಪೋಸ್ ನೀಡಿದ್ದಕ್ಕಾಗಿ 21 ಸಾವಿರ ಗಳಿಸಿದೆ. ಹಾಗಾಗಿ ಮಾಡೆಲಿಂಗ್ ನಲ್ಲಿ ಮುಂದುವರೆಯಲು ಬಯಸಿದೆ" ಎಂದು ನಟ ಅಕ್ಷಯ್ ಕುಮಾರ್ ಹೇಳಿದ್ದಾರೆ.

  'ಪಬ್ಜಿ' ಹೋದ್ರೇನಂತೆ, 'ಫೌಜಿ' ಇದೆ ಅಂತಿದ್ದಾರೆ ನಟ ಅಕ್ಷಯ್ ಕುಮಾರ್

  5 ನಿಮಿಷಕ್ಕೆ ಮೊದಲ ಸಿನಿಮಾಗೆ ಸಹಿ ಮಾಡಿದ್ದ ಅಕ್ಷಯ್

  5 ನಿಮಿಷಕ್ಕೆ ಮೊದಲ ಸಿನಿಮಾಗೆ ಸಹಿ ಮಾಡಿದ್ದ ಅಕ್ಷಯ್

  ಮೊದಲ ಸಿನಿಮಾದ ಬಗ್ಗೆಯೂ ಅಕ್ಷಯ್ ಕುಮಾರ್ ಬಹಿರಂಗಪಡಿಸಿದ್ದಾರೆ. ಅಕ್ಷಯ್ ಮೊದಲ ಸಿನಿಮಾ ಒಪ್ಪಿಕೊಂಡು ಸಹಿ ಮಾಡಲು ಕೇವಲ 5 ನಿಮಿಷ ತೆಗೆದುಕೊಂಡಿದ್ದರಂತೆ. ಚೊಚ್ಚಲ ಸಿನಿಮಾ ಮಾಡಲು ಸಾಕಷ್ಟು ಯೋಚಿಸಿ, ಅಳೆದು ತೂಗಿ ಪಾತ್ರಗಳನ್ನು ಆಯ್ಕೆ ಮಾಡುತ್ತಾರೆ. ಆದರೆ ಅಕ್ಷಯ್ ಕುಮಾರ್ ಕೇವಲ 5 ನಿಮಿಷದಲ್ಲಿ ಚಿತ್ರಕ್ಕೆ ಸಹಿ ಮಾಡಿದ್ದಾರೆ. ನಿರ್ದೇಶಕರೊಬ್ಬರು ಅಕ್ಷಯ್ ಕುಮಾರ್ ಬಳಿ ಬಂದು ನಾಯಕನಾಗಲು ಬಯಸುತ್ತೀರಾ ಎಂದು ಕೇಳಿದರಂತೆ. ಅಕ್ಷಯ್ ಯೋಚಿಸದೆ ಕೇವಲ 5 ನಿಮಿಷದಲ್ಲಿ ಚಿತ್ರಕ್ಕೆ ಸಹಿ ಮಾಡಿರುವುದಾಗಿ ಹೇಳಿದ್ದಾರೆ.

  English summary
  Bollywood Actor Akshay Kumar revealed how much Was Paid For His First Modelling Assignment.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X