»   » ಸಲ್ಮಾನ್ ಖಾನ್ 'ಟ್ಯೂಬ್ ಲೈಟ್' ಬೆಳಗುವ ಟೈಂ ಬಂತು.!

ಸಲ್ಮಾನ್ ಖಾನ್ 'ಟ್ಯೂಬ್ ಲೈಟ್' ಬೆಳಗುವ ಟೈಂ ಬಂತು.!

Posted By: Naveen
Subscribe to Filmibeat Kannada

ಸಲ್ಮಾನ್ ಖಾನ್ 'ಟ್ಯೂಬ್ ಲೈಟ್' ಅಂತ ಸಿನಿಮಾ ಮಾಡುತ್ತಿರುವ ಬಗ್ಗೆ ಬಾಲಿವುಡ್ ಪ್ರಿಯರಿಗೆಲ್ಲಾ ಗೊತ್ತಿರುತ್ತೆ. ಇಷ್ಟು ದಿನ ಈ ಸಿನಿಮಾದ ಚಿಕ್ಕ ಪುಟ್ಟ ಪೋಸ್ಟರ್ ಗಳೂ ಸಹ ಸಿಕ್ಕಾಪಟ್ಟೆ ಸುದ್ದಿ ಮಾಡ್ತಿದ್ವು. ಇದೀಗ ಈ 'ಟ್ಯೂಬ್ ಲೈಟ್' ಬೆಳಕು ಜೋರಾಗಲಿದೆ. [ಸಲ್ಮಾನ್ ಖಾನ್ ಚಿತ್ರದಲ್ಲಿ ಸುದೀಪ್ ವಿಲನ್! ಸಾಕ್ಷಿ ಇಲ್ಲಿದೆ]

'ಟ್ಯೂಬ್ ಲೈಟ್' ಸಿನಿಮಾದ ಟೀಸರ್ ಇದೇ ಮೇ 4 ರಂದು ರಿಲೀಸ್ ಆಗಲಿದೆ. ಸಿನಿಮಾದ ನಿರ್ದೇಶಕ ಕಬೀರ್ ಖಾನ್ ಈ ವಿಷಯವನ್ನ ಟ್ವೀಟ್ ಮಾಡುವ ಮೂಲಕ ತಿಳಿಸಿದ್ದಾರೆ.

ಬಾಲಿವುಡ್ ನ ಈ ವರ್ಷದ ಬಹುನಿರೀಕ್ಷಿತ ಚಿತ್ರವಾಗಿರುವ 'ಟ್ಯೂಬ್ ಲೈಟ್' ಚಿತ್ರದಲ್ಲಿ ಸಿಕ್ಕಾಪಟ್ಟೆ ವಿಶೇಷತೆಗಳಿವೆ. ಮುಂದೆ ಓದಿ...

ಮೇ 4ಕ್ಕೆ ಟೀಸರ್ ರಿಲೀಸ್

ಸಲ್ಮಾನ್ ಖಾನ್ ಅಭಿನಯದ 'ಟ್ಯೂಬ್ ಲೈಟ್' ಸಿನಿಮಾದ ಮೊದಲ ಟೀಸರ್ ಮೇ 4 ರಂದು ಬಿಡುಗಡೆಯಾಗಲಿದೆ. 'ಟ್ಯೂಬ್ ಲೈಟ್' ಚಿತ್ರ ಭಾರತ ಮತ್ತು ಚೀನಾ ನಡುವೆ 1962 ರಲ್ಲಿ ನಡೆದ ಯುದ್ಧದ ಕಥೆಯನ್ನ ಹೊಂದಿದೆ.[ಸಲ್ಮಾನ್ ಜೊತೆ ಸಿನಿಮಾ ಮಾಡುವ ಬಗ್ಗೆ ರಾಜಮೌಳಿ ಹೇಳಿದ್ದೇನು?]

'ಖಾನ್' ಜುಗಲ್ ಬಂದಿ

ಈ ಹಿಂದೆ 'ಏಕ್ ತಾ ಟೈಗರ್', 'ಭಜರಂಗಿ ಭಾಯ್ ಜಾನ್' ಸಿನಿಮಾಗಳು ಸಲ್ಮಾನ್ ಖಾನ್ ಮತ್ತು ಕಬೀರ್ ಖಾನ್ ಕಾಂಬಿನೇಷನ್ ನಲ್ಲಿ ಮೂಡಿ ಬಂದಿತ್ತು. ಇದೀಗ 'ಟ್ಯೂಬ್ ಲೈಟ್' ಇವರಿಬ್ಬರ ಹ್ಯಾಟ್ರಿಕ್ ಸಿನಿಮಾ.[ಸಲ್ಮಾನ್ ಬಗ್ಗೆ ಬೇಸರಗೊಂಡ ಕತ್ರಿನಾ ಕೈಫ್: ಏಕೆ ಗೊತ್ತಾ?]

ಚಿತ್ರದಲ್ಲಿ 'ಸಲ್ಮಾನ್ ಬ್ರದರ್ಸ್'

ಚಿತ್ರದಲ್ಲಿ 'ಸಲ್ಮಾನ್ ಖಾನ್' ಜೊತೆಗೆ ಅವ್ರ ಸಹೋದರ 'ಸೊಹೈಲ್ ಖಾನ್' ಸಹ ಅಭಿನಯಿಸಿದ್ದಾರೆ. ಚಿತ್ರದ ಕಥೆಯಲ್ಲಿ ಬರುವ ಮುಖ್ಯ ಪಾತ್ರವನ್ನ ಅವರು ನಿರ್ವಹಿಸಿದ್ದಾರಂತೆ.

'ಸಲ್ಲು ಜೊತೆ ಶಾರೂಖ್'

'ಟ್ಯೂಬ್ ಲೈಟ್' ಸಿನಿಮಾದ ವಿಶೇಷ ಪಾತ್ರವೊಂದರಲ್ಲಿ ನಟ ಶಾರೂಖ್ ಖಾನ್ ಕೂಡ ನಟಿಸುತ್ತಿದ್ದಾರೆ. ಇದು ಈ ಸಿನಿಮಾದ ಅತಿ ದೊಡ್ಡ ಹೈಲೈಟ್.

ಚೀನಿ 'ಚೆಲುವೆ'

ಸಲ್ಲುಗೆ ಇಲ್ಲಿ ಚೀನಿ ಚೆಲುವೆ ಜೊತೆಯಾಗಿದ್ದಾರೆ. ನಟಿ 'ಝು ಝು' ಇದೇ ಮೊದಲ ಬಾರಿಗೆ ಭಾರತದ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. [ಚೀನಾ ಬೆಡಗಿಗೆ ಸಂಥಿಂಗ್ ಸ್ಪೆಷಲ್ ಉಡುಗೊರೆ ಕೊಟ್ಟ ಸಲ್ಮಾನ್!]

'ಈದ್' ಗೆ ರಿಲೀಸ್

ಸಾಮಾನ್ಯವಾಗಿ ಸಲ್ಮಾನ್ ಸಿನಿಮಾಗಳು ಈದ್ ಗೆ ಬಿಡುಗಡೆಯಾಗುತ್ತೆ. ಇನ್ನೂ 'ಟ್ಯೂಬ್ ಲೈಟ್' ಸಹ ಈದ್ ಹಬ್ಬಕ್ಕೆ ಅಭಿಮಾನಿಗಳ ಮುಂದೆ ಬರಲಿದೆ.[ಸಲ್ಮಾನ್ ಜೊತೆ ಸಿನಿಮಾ ಮಾಡುವ ಬಗ್ಗೆ ರಾಜಮೌಳಿ ಹೇಳಿದ್ದೇನು?]

English summary
Bollywood Actor Salman khan starrer 'Tubelight' first teaser will release on May 4th

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada