»   » 'ಉಡ್ತಾ ಪಂಜಾಬ್' ಚಿತ್ರತಂಡಕ್ಕೆ ಮತ್ತೆ ಆಘಾತ

'ಉಡ್ತಾ ಪಂಜಾಬ್' ಚಿತ್ರತಂಡಕ್ಕೆ ಮತ್ತೆ ಆಘಾತ

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ 'ಉಡ್ತಾ ಪಂಜಾಬ್' ಸಿನಿಮಾದ ಸಮಸ್ಯೆ ಒಂದು ಹಂತಕ್ಕೆ ಬಗೆಹರಿಯಿತು ಅಂತ ಚಿತ್ರತಂಡ ನಿಟ್ಟುಸಿರು ಬಿಡುತ್ತಿರುವಾಗಲೇ ಇದೀಗ ಆಘಾತಕಾರಿ ಘಟನೆ ನಡೆದಿದೆ.

ಹೌದು 89 ಕಟ್ ಗಳಿಂದ ಸುದ್ದಿಯಾಗಿದ್ದ 'ಉಡ್ತಾ ಪಂಜಾಬ್' ಚಿತ್ರ ಇದೀಗ ಬಿಡುಗಡೆಗೆ ಮುನ್ನವೇ ಆನ್ ಲೈನ್ ನಲ್ಲಿ ಲೀಕಾಗಿದ್ದು, ಚಿತ್ರದ ನಿರ್ಮಾಪಕರು ಬಾಂದ್ರಾ ಸೈಬರ್ ಪೊಲೀಸರಿಗೆ ದೂರು ದಾಖಲಿಸಿರುವ ಬಗ್ಗೆ ವರದಿಯಾಗಿದೆ.[ಉಡ್ತಾ ಪಂಜಾಬ್ ಉಡಾವಣೆಗೆ ಎನ್ ಜಿಒ ಅಡ್ಡಿ]

'Udta Punjab' leaked online, Producer's file complaint

ನೈಜ ಕಥೆಯಾಧರಿತ 'ಉಡ್ತಾ ಪಂಜಾಬ್' ಸಿನಿಮಾ ಬಿಟ್ಟೊರೆಂಟ್ ಗಳಲ್ಲಿ ಲಭ್ಯವಾಗಿದ್ದು, ಕೆಲವರು ಅಕ್ರಮವಾಗಿ ಚಿತ್ರವನ್ನು ಡೌನ್ ಲೋಡ್ ಮಾಡಿದ್ದಾರೆ. ಸಿನಿಮಾ ಲೀಕ್ ಆದ ವಿಷಯ ತಿಳಿಯುತ್ತಿದ್ದಂತೆ, ಆಘಾತಗೊಂಡ ಚಿತ್ರತಂಡ ತಕ್ಷಣ ಡೌನ್ ಲೋಡ್ ಲಿಂಕ್ ತೆಗೆದು ಹಾಕಿದ್ದಾರೆ.

ಅಂದಹಾಗೆ ಸೆನ್ಸಾರ್ ಕಾಪಿ ಎಂದು ಲೋಗೋ ಇರುವ 'ಉಡ್ತಾ ಪಂಜಾಬ್' ಸುಮಾರು 2 ಘಂಟೆ 20 ನಿಮಿಷಗಳ ಕಾಲ ಆನ್ ಲೈನ್ ನಲ್ಲಿ ಓಡಾಡಿದ್ದು, ಸೈಬರ್ ಪೊಲೀಸರು ಸಿನಿಮಾ ಅಪ್ ಲೋಡ್ ಮಾಡಲಾಗಿರುವ ಐಪಿ ಅಡ್ರೆಸ್ ಪತ್ತೆ ಹಚ್ಚುವ ತನಿಖೆ ಕಾರ್ಯದಲ್ಲಿ ನಿರತರಾಗಿದ್ದಾರೆ.['ಉಡ್ತಾ ಪಂಜಾಬ್' ಚಿತ್ರದ ವಿವಾದ ಎಲ್ಲಿಯವರೆಗೆ ಬಂತು?]

ನಿರ್ದೇಶಕ ಅಭಿಷೇಕ್ ಚೌಬೆ ನಿರ್ದೇಶನ ಮಾಡಿರುವ ಚಿತ್ರದಲ್ಲಿ ನಟಿ ಅಲಿಯಾ ಭಟ್, ನಟ ಶಾಹೀದ್ ಕಪೂರ್ ಮತ್ತು ನಟಿ ಕರೀನಾ ಕಪೂರ್ ಅವರು ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಜೂನ್ 17, ಶುಕ್ರವಾರದಂದು 'ಉಡ್ತಾ ಪಂಜಾಬ್' ಎಲ್ಲಾ ಕಡೆ ತೆರೆಕಾಣುತ್ತಿದೆ.

-
-
-
-
-
-
-
-
-
-
-
-
English summary
Producers of drug-themed drama “Udta Punjab”, Friday release. But today (June 16th) lodged a complaint with cyber police alleging that the film was leaked online. Hindi Actor Shahid Kapoor, Bollywood Actress Alia Bhatt, Bollywood Actress Kareena Kapoor in the lead role. The movie is directed by Abhishek Chaubey.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada