For Quick Alerts
  ALLOW NOTIFICATIONS  
  For Daily Alerts

  ನಿರುದ್ಯೋಗಿಯಾಗಿದ್ದೇನೆ, ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದೇನೆ: ಖ್ಯಾತ ನಟಿ ಶುಮೋನಾ

  |

  ಕಪಿಲ್ ಶರ್ಮಾ ಶೋನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವ ನಟಿ ಶುಮೊನಾ ಚಕ್ರವರ್ತಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳಿಗಾಗಿ ಪತ್ರ ಬರೆದಿದ್ದು ತಾವು ವಿಚಿತ್ರ ಕಾಯಿಲೆಯೊಂದರಿಂದ ಬಳಲುತ್ತಿರುವುದಾಗಿ ಹೇಳಿದ್ದಾರೆ.

  ಹಲವು ಧಾರಾವಾಹಿಗಳು, ಕೆಲವು ಸಿನಿಮಾಗಳಲ್ಲಿ ನಟಿಸಿರುವ ಶುಮೋನಾಗೆ ಹೆಚ್ಚು ಖ್ಯಾತಿ ತಂದುಕೊಟ್ಟಿದ್ದು ಕಪಿಲ್ ಶರ್ಮಾ ಶೊ. ಆದರೆ ಲಾಕ್‌ಡೌನ್ ಕಾರಣದಿಂದ ತಾವು ನಿರುದ್ಯೋಗಿ ಆಗಿರುವುದಾಗಿ ಹೇಳಿದ್ದಾರೆ ಶುಮೋನಾ.

  'ನಾನು ನಿರುದ್ಯೋಗಿ ಆಗಿದ್ದೇನೆ. ಆದರೂ ಹೇಗೋ ನನ್ನ ಕುಟುಂಬದವರನ್ನು ಹಾಗೂ ನನ್ನನ್ನು ನಾನು ಸಾಕಿಕೊಳ್ಳುತ್ತಿದ್ದೇನೆ' ಎಂದಿದ್ದಾರೆ ಶುಮೋನಾ.

  'ಕೆಲವೊಮ್ಮೆ ನನಗೆ ಬಹಳ ಬೇಸರವಾಗುತ್ತದೆ. ಅದರಲ್ಲೂ ನನ್ನ ಋತುಚಕ್ರದ ದಿನಗಳಲ್ಲಿಯಂತೂ ಮಾನಸಿಕವಾಗಿ ಕುಗ್ಗಿರುತ್ತೇನೆ. ಅತಿಯಾದ 'ಮೂಡ್‌ ಸ್ವಿಂಗ್‌'ಗಳಿಂದ ಭಾವುಕವಾಗಿ ಬಹಳ ಕುಗ್ಗುತ್ತೇನೆ' ಎಂದಿದ್ದಾರೆ ಶುಮೋನಾ.

  'ಎಂದೂ ಹೇಳಿಕೊಳ್ಳದಿದ್ದ ವಿಷಯವೊಂದನ್ನು ನಿಮ್ಮ ಬಳಿ ಹೇಳಿಕೊಳ್ಳುತ್ತೇನೆ. ನಾನು 2011 ರಿಂದಲೂ ಎಂಡೋಮೆಟ್ರಿಯೋಸಿಸ್ ಎಂಬ ಕಾಯಿಲೆಯಿಂದ ಬಳಲುತ್ತಿದ್ದೇನೆ. ಈಗ ನಾನು 7ನೇ ಸ್ಟೇಜ್‌ನಲ್ಲಿ ಇದ್ದೇನೆ' ಎಂದಿದ್ದಾರೆ. ಎಂಡೋಮೆಟ್ರಿಯೋಸಿಸ್ ಗುಪ್ತಾಂಗಕ್ಕೆ ಸಂಬಂಧಿಸಿದ ಖಾಯಿಲೆ.

  'ಒಳ್ಳೆಯ ಆಹಾರ ಪದ್ಧತಿ, ಒಳ್ಳೆಯ ವ್ಯಾಯಾಮ ಹಾಗೂ ಒತ್ತಡ ರಹಿತ ಜೀವನ ಇವುಗಳಿಂದಷ್ಟೆ ನಾನು ಆರೋಗ್ಯವಾಗಿರಲು ಸಾಧ್ಯ. ಬಹಳ ದಿನಗಳ ಬಳಿಕ ಇಂದು ನಾನು ವ್ಯಾಯಾಮ ಮಾಡಿದೆ. ನನಗೆ ಖುಷಿ ಎನಿಸಿತು' ಎಂದಿದ್ದಾರೆ ಶುಮೋನಾ.

  ಪತಿಗೆ ಕಿಡ್ನಿ ಕೊಟ್ಟ ನೋವನ್ನು ಹೇಳಿಕೊಂಡ ದರ್ಶನ್ ತಾಯಿ | Filmibeat Kannada

  'ನನ್ನ ಖಾಸಗಿ ವಿಷಯಗಳನ್ನು ಹಂಚಿಕೊಳ್ಳುವುದು ಸುಲಭವಾಗಿರಲಿಲ್ಲ. ಆದರೆ ಓದಿದ ಕೆಲವರಿಗಾದರೂ ಉಪಯೋಗವಾಗಬಹುದು ಎಂಬ ಕಾರಣಕ್ಕೆ ನಾನು ಈ ಪೋಸ್ಟ್ ಶೇರ್ ಮಾಡಿದೆ' ಎಂದಿದ್ದಾರೆ ಶುಮೋನಾ.

  English summary
  Kapil Sharma Show actress Sumona Chakravarti said i have been unemployed and also suffering from rare disease from 2011.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X