»   » ಪೊಲೀಸರ ಆತಂಕದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್

ಪೊಲೀಸರ ಆತಂಕದಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್

Posted By:
Subscribe to Filmibeat Kannada

ಬಾಲಿವುಡ್ ನಟಿ ಸನ್ನಿ ಲಿಯೋನ್ 'ರಯೀಸ್' ನಲ್ಲಿ ಐಟಂ ಸಾಂಗ್ ವೊಂದಕ್ಕೆ ಸೊಂಟ ಬಳುಕಿಸುವ ಮೂಲಕ ಚಿತ್ರಕ್ಕೆ ಹೈ ವೋಲ್ಟೇಜ್ ನೀಡಿದ್ದರು. ಸದ್ಯಕ್ಕೆ ಕಾಶ್ಮೀರದಲ್ಲಿ ಶೂಟಿಂಗ್ ಬಿಜಿಯಲ್ಲಿರುವ ಹಾಟ್ ಬ್ಯೂಟಿ ಗೆ ಸಮಸ್ಯೆಯೊಂದು ಎದುರಾಗಿದೆ.[ಸನ್ನಿ ಲಿಯೋನ್ ನೃತ್ಯಕ್ಕೆ ಹುಚ್ಚೆದ್ದು ಕುಣಿದಾಡಿದ ಪ್ರೇಕ್ಷಕರು!]

ಮಾಸ್ಟರ್ ಮೈಂಡ್ ಅನುಭವ್ ಮಿತ್ತಲ್ ಅವರ ಪಾರ್ಟಿಯೊಂದರಲ್ಲಿ ಸನ್ನಿ ಲಿಯೋನ್ ಪಾಲ್ಗೊಂಡಿದ್ದೇ ಈಗ ಅವರಿಗೆ ಕಂಟಕವಾಗಿದೆ. ಸನ್ನಿ ಲಿಯೋನ್ ಪಾರ್ಟಿಗೆ ಹೋಗಿದ್ದಕ್ಕೆ, ಅದ್ ಹೇಗೆ ಆಪತ್ತಿನಲ್ಲಿ ಸಿಕ್ಕಿಬಿದ್ದರೂ ಅಂತಿರಾ? ಅದಕ್ಕೆ ಕಾರಣ ಇಲ್ಲಿದೆ...

ಬ್ಲೇಡ್ ಸ್ಕೀಮ್ ರೂವಾರಿ ಇಂದ ಸನ್ನಿಗೆ ಆಪತ್ತು

ಸನ್ನಿ ಲಿಯೋನ್ ಬ್ಲೇಡ್ ಸ್ಕೀಮ್ ರೂವಾರಿ ಅನುಭಬ್ ಮಿತ್ತಲ್ ಆಯೋಜಿಸಿದ್ದ ಪಾರ್ಟಿಯೊಂದರಲ್ಲಿ ಪಾಲ್ಗೊಂಡು ತೊಂದರೆಗೆ ಸಿಲುಕಿದ್ದಾರೆ.[ಬರೀ ಒಂದು ಫೋಟೋ ಶೂಟ್ ಗಾಗಿ ಸನ್ನಿಗೆ ಇಷ್ಟೊಂದು ದುಡ್ಡಾ.?]

ಪಂಗನಾಮ ಕ್ಕೆ ಹೆಸರುವಾಸಿ ಅನುಭವ್ ಮಿತ್ತಲ್

ಸೋಶಿಯಲ್ ಮೀಡಿಯಾಗಳಲ್ಲಿ ಜನರಿಗೆ ಮೋಸ ಮಾಡುವ ಸ್ಕೀಮ್ ಗಳಲ್ಲಿ ಅನುಭವ್ ಮಿತ್ತಲ್ ಕುಖ್ಯಾತಿ. ಇತ್ತೀಚೆಗೆ ಇವರ ಪಾರ್ಟಿಯಲ್ಲಿ ಸನ್ನಿ ಮೇಡಂ ಭಾಗವಹಿಸಿದ್ದೇ ಅವರಿಗೆ ಕಂಟಕವಾಗಿದೆ.

ಅಂತರ್ಜಾಲದಿಂದ ಹೂಡಿಕೆದಾರರಿಗೆ ಮೋಸ

ಅನುಭವ್ ಮಿತ್ತಲ್, ಸನ್ನಿ ಲಿಯೋನ್ ಕೈಯಲ್ಲಿ intmaart.com ಹೆಸರಿನ ಇ ಕಾಮರ್ಸ್ ವೆಬ್ ಸೈಟ್ ಉದ್ಘಾಟನೆ ಮಾಡಿಸಿದ್ದರು. ಇತ್ತೀಚೆಗೆ ಅದೇ ಆನ್ ಲೈನ್ ವೇದಿಕೆಯಿಂದಲೇ 6.5 ಲಕ್ಷ ಹೂಡಿಕೆದಾರರಿಗೆ 3700 ಕೋಟಿ ರೂಪಾಯಿ ವಂಚಿಸಿದ್ದು, ಈಗ ಸನ್ನಿಲಿಯೋನ್ ಸಹ ಪೊಲೀಸ್ ತನಿಖೆಯನ್ನು ಎದುರಿಸಬೇಕಾದ ಸಂದರ್ಭ ಬಂದಿದೆ.

ವೆಬೈಸೈಟ್ ಉದ್ಘಾಟನೆಯಲ್ಲಿ ಸನ್ನಿಲಿಯೋನ್

ಸನ್ನಿ ಲಿಯೋನ್ ಕಳೆದ ನವೆಂಬರ್ ನಲ್ಲಿ intmaart.com ಹೆಸರಿನ ಇ ಕಾಮರ್ಸ್ ವೆಬ್ ಸೈಟ್ ಉದ್ಘಾಟನೆಗೆಗಾಗಿ ಭೇಟಿ ನೀಡಿದ್ದರು. ಈ ಪಾರ್ಟಿಯಲ್ಲಿ ತೆಗೆದ ಅವರ ಫೋಟೋಗಳು ಈಗ ಪೊಲೀಸರಿಗೆ ಸಿಕ್ಕಿದ್ದು, ಮಿತ್ತಲ್ ವಂಚನೆ ಹಿನ್ನೆಲೆಯಲ್ಲಿ ಅವಶ್ಯಕವಿದ್ದಲ್ಲಿ ಸನ್ನಿ ಲಿಯೋನ್ ಅವರನ್ನು ತನಿಖೆಗೆ ಒಳಪಡಿಸುವುದಾಗಿ ಹೇಳಿದ್ದಾರೆ.

English summary
UP Police likely to question Sunny Leone over Anubhav Mittal Rs 3,700 crore online scam

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X