For Quick Alerts
  ALLOW NOTIFICATIONS  
  For Daily Alerts

  ಬರೀ ಒಂದು ಫೋಟೋ ಶೂಟ್ ಗಾಗಿ ಸನ್ನಿಗೆ ಇಷ್ಟೊಂದು ದುಡ್ಡಾ.?

  By ಸೋನು ಗೌಡ
  |

  ನೀಲಿತಾರೆ ಎಂಬ ಹಣೆಪಟ್ಟಿಯನ್ನು ಕಿತ್ತು ಹಾಕಿ ಇದೀಗ ಮಾಜಿ ನೀಲಿತಾರೆಯಾಗಿ, ಬಾಲಿವುಡ್ ನಲ್ಲಿ ಬಹು ಬೇಡಿಕೆಯುಳ್ಳ ನಟಿಯಾಗಿ ಹೊರಹೊಮ್ಮಿರುವ ಮಾದಕ ಬೆಡಗಿ ಸನ್ನಿ ಲಿಯೋನ್ ಅವರು ಸದ್ಯಕ್ಕೆ ಮುಟ್ಟಿದ್ದೆಲ್ಲಾ ಚಿನ್ನ ಆಗುತ್ತಿದೆ.

  ಈಗಾಗಲೇ ಸನ್ನಿ ನಟಿಸಿದ ಕೆಲವು ಸಿನಿಮಾಗಳು ಹಿಟ್ ಆದರೆ, ಕೆಲವು ಸಿನಿಮಾಗಳು ಮಕಾಡೆ ಮಲಗಿವೆ. ಆದರೂ ಭಾರಿ ಬೇಡಿಕೆ ಗಿಟ್ಟಿಸಿಕೊಂಡಿರುವ ಸನ್ನಿ ಲಿಯೋನ್ ಆಗಲೇ ಕೆಲವು ಪ್ರಾಜೆಕ್ಟ್ ಗಳಿಗೆ ಸಹಿ ಹಾಕಿದ್ದಾರೆ.

  ಅದೆಲ್ಲಾ ಓಕೆ, ಆದ್ರೆ ಇದೀಗ ಮಾದಕ ಚೆಲುವೆ ಸನ್ನಿ ಲಿಯೋನ್ ಅವರು ಬರೀ ಜಾಹೀರಾತಿಗಾಗಿ ಮಾಡಿರುವ ಫೋಟೋ ಶೂಟ್ ಗಾಗಿ ಪಡೆದುಕೊಂಡಿರುವ ಸಂಭಾವನೆ ನೋಡಿ, ಇಡೀ ಬಿಟೌನ್ ನ ಸ್ಟಾರ್ ನಟಿಯರು ಬಾಯಿ-ಬಾಯಿ ಬಿಟ್ಟು ನೋಡುತ್ತಿದ್ದಾರೆ.[ಹಾಟ್ ಫೊಟೋ ಶೂಟ್ ನಲ್ಲಿ ಸನ್ನಿಯ ಸೊಬಗು ನೋಡ್ರಲ್ಲಾ..]

  ಸಿನಿಮಾಕ್ಕಾಗಿ ಅಲ್ಲ, ಬರೀ ಜಾಹೀರಾತಿಗಾಗಿ, ಅದ್ರಲ್ಲೂ ವಿಶೇಷವಾಗಿ ಕ್ಯಾಲೆಂಡರ್ ಒಂದರ ಫೋಟೋ ಶೂಟ್ ಗೆ ಫೋಸ್ ಕೊಟ್ಟಿದ್ದಕ್ಕೆ, ಕೋಟಿ ರೂಪಾಯಿ ಸಂಭಾವನೆ ಪಡೆದಿರುವ ಸನ್ನಿ ಅವರನ್ನು ಕಂಡ ಬಾಲಿವುಡ್ ಬೆಡಗಿಯರು ಹೊಟ್ಟೆ ಉರ್ಕೊಂಡ್ರು ಅಚ್ಚರಿ ಇಲ್ಲ.

  ಅಷ್ಟಕ್ಕೂ ಸನ್ನಿ ಅವರು ಯಾವ ಜಾಹೀರಾತಿಗೆ ಹಾಗೂ ಇದಕ್ಕಾಗಿ ಎಷ್ಟು ಕೋಟಿ ದುಡ್ಡು, ತಮ್ಮ ಬ್ಯಾಗಿಗೆ ಇಳಿಸಿದ್ದಾರೆ ಅನ್ನೋದನ್ನ ನೋಡಿ ಕೆಳಗಿನ ಸ್ಲೈಡ್ಸ್ ಗಳಲ್ಲಿ.....(ಎಲ್ಲಾ ಚಿತ್ರಕೃಪೆ: ಡಬ್ಬೂ ರತ್ನಾನಿ)

  ಯಾವ ಜಾಹೀರಾತು.?

  ಯಾವ ಜಾಹೀರಾತು.?

  ಅಂದಹಾಗೆ ಹಾಟ್ ಬೆಡಗಿ ಸನ್ನಿ ಲಿಯೋನ್ ಅವರು ಭರ್ಜರಿ ಸಂಭಾವನೆ ಪಡೆದಿದ್ದು, ಕಾಂಡೋಮ್ ಜಾಹೀರಾತು ಒಂದರ ಕ್ಯಾಲೆಂಡರ್ ಫೋಟೋ ಶೂಟ್ ಗಾಗಿ. ಪ್ರತಿಷ್ಟಿತ 'ಮ್ಯಾನ್ ಫೋರ್ಸ್' ಕಾಂಡೋಮ್ ಕಂಪನಿಗೆ ರಾಯಭಾರಿಯಾಗಿ ನಟಿ ಸನ್ನಿ ಲಿಯೋನ್ ಅವರು ಆಯ್ಕೆಯಾಗಿದ್ದಾರೆ.[ಸನ್ನಿ ಕಾಂಡೋಮ್ ಜಾಹೀರಾತಲ್ಲಿ ಕಾಣಿಸಿಕೊಂಡ್ರೆ ರೇಪ್ ಹೆಚ್ಚತ್ತಾ?]

  ಎಷ್ಟು ಕೋಟಿ.?

  ಎಷ್ಟು ಕೋಟಿ.?

  ಪ್ರತಿಷ್ಟಿತ ಮ್ಯಾನ್ ಫೋರ್ಸ್ ಕಾಂಡೋಮ್ ಕಂಪೆನಿಯು ರಾಯಭಾರಿಯಾಗಿ ನಟಿ ಸನ್ನಿ ಲಿಯೋನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದು, ಇದಕ್ಕಾಗಿ ಸನ್ನಿ ಅವರಿಗೆ ಬರೋಬ್ಬರಿ 3 ಕೋಟಿ ರೂಪಾಯಿ ಸಂಭಾವನೆ ನೀಡಿದೆ.[ಸುಖಿ ಸಂಸಾರದ ಸೀಕ್ರೆಟ್ ಬಿಚ್ಚಿಟ್ಟ ಬೇಬಿ ಡಾಲ್ ಸನ್ನಿ ಲಿಯೋನ್]

  ಫೇಮಸ್ ಕಾಂಡೋಮ್ ಕಂಪನಿ

  ಫೇಮಸ್ ಕಾಂಡೋಮ್ ಕಂಪನಿ

  ನಟಿ ಸನ್ನಿ ಲಿಯೋನ್ ಅವರು ರಾಯಭಾರಿಯಾದ ಈ ಕಾಂಡೋಮ್ ಕಂಪನಿಯಿಂದ ಅತೀ ಹೆಚ್ಚು ಕಾಂಡೋಮ್ ಖರೀದಿ ಆಗುತ್ತಿದ್ದು, ಭಾರತದಲ್ಲಿ ಅತೀ ಹೆಚ್ಚು ಕಾಂಡೋಮ್ಸ್ ಖರೀದಿಗೆ ಒಳಪಟ್ಟ ಕಾಂಡೋಮ್ಸ್ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.[ತೆರೆ ಮೇಲೆ ಮಾದಕ ಬೆಡಗಿ ಸನ್ನಿಯ ಪ್ರೇಮಕಥೆ-ವ್ಯಥೆ.?]

  ಫೋಟೋ ಶೂಟ್

  ಫೋಟೋ ಶೂಟ್

  ಈ ಕಂಪನಿಯ ಜಾಹೀರಾತಿಗಾಗಿ ಇತ್ತೀಚೆಗಷ್ಟೇ ನಟಿ ಸನ್ನಿ ಲಿಯೋನ್ ಅವರ ಕ್ಯಾಲೆಂಡರ್ ಫೋಟೋ ಶೂಟ್ ನಡೆಸಿದ್ದು, ಸನ್ನಿ ಅವರು ಮೈ ಚಳಿ ಬಿಟ್ಟು ಸಖತ್ ಹಾಟ್ ಆಗಿ ಮಾದಕತೆಯಿಂದ ಫೋಟೋ ಶೂಟ್ ನಲ್ಲಿ ಪಾಲ್ಗೊಂಡಿದ್ದಾರೆ. ಈ ಹಾಟ್ ಅಂಡ್ ಸೆಕ್ಸಿ ಫೋಟೋಗಳು ಇನ್ನೇನು ಸದ್ಯದಲ್ಲೇ ಮಾಗಜೀನ್ ಕವರ್ ಪೇಜ್ ಗಳಲ್ಲಿ ರಾರಾಜಿಸಲಿದ್ದು, ಸನ್ನಿಯ ದೇಹ ಸಿರಿ ಮಗದೊಮ್ಮೆ ಅನಾವರಣಗೊಳ್ಳಲಿದೆ.

  ಫೋಟೋ ಶೂಟ್ ಕ್ರೆಡಿಟ್

  ಫೋಟೋ ಶೂಟ್ ಕ್ರೆಡಿಟ್

  ಅಂದಹಾಗೆ ನಟಿ ಸನ್ನಿ ಲಿಯೋನ್ ಅವರ ಈ ವಿಶೇಷ ಫೋಟೋ ಶೂಟ್ ಮಾಡಿದ್ದು, ಬಾಲಿವುಡ್ ನ ಖ್ಯಾತ ಛಾಯಾಗ್ರಾಹಕ ಡಬ್ಬೂ ರತ್ನಾನಿ ಅವರು. ಒಟ್ನಲ್ಲಿ ಸನ್ನಿ ಅವರ ಮಾದಕ ಮೈಮಾಟವನ್ನು ಮತ್ತಷ್ಟು ಸೆಕ್ಸಿಯಾಗಿ ತಮ್ಮ ಕ್ಯಾಮರಾ ಕಣ್ಣಲ್ಲಿ ಡಬ್ಬೂ ಸೆರೆಹಿಡಿದಿದ್ದಾರೆ.

  English summary
  Bollywood Actress Sunny Leone Hot In Bikini For Manforce Condom Photoshoot. According to reports, Sunny grabbed Rs 3 Crores for just one pose.
  Sunday, August 7, 2016, 14:21
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X