»   » ಸನ್ನಿ ಲಿಯೋನ್ ನೃತ್ಯಕ್ಕೆ ಹುಚ್ಚೆದ್ದು ಕುಣಿದಾಡಿದ ಪ್ರೇಕ್ಷಕರು!

ಸನ್ನಿ ಲಿಯೋನ್ ನೃತ್ಯಕ್ಕೆ ಹುಚ್ಚೆದ್ದು ಕುಣಿದಾಡಿದ ಪ್ರೇಕ್ಷಕರು!

Posted By:
Subscribe to Filmibeat Kannada

ಮುಂಬೈ, ಜನವರಿ 25: ನಿರೀಕ್ಷೆಯಂತೆ ಶಾರೂಖ್ ಖಾನ್ ಅಭಿನಯದ 'ರಯೀಸ್' ಚಿತ್ರ ಭರ್ಜರಿ ಓಪನಿಂಗ್ ಕಂಡಿದೆ. ಚಿತ್ರ ಬಿಡುಗಡೆಯಾದ ಎಲ್ಲೆಲ್ಲೂ ಪಕ್ಕಾ ಶಾರೂಖ್ ಖಾನ್ ಮಸಾಲೆ ಚಿತ್ರವೆಂದೇ ಹೇಳಲಾಗುತ್ತಿದೆ.

ಚಿತ್ರದ ಕಲೆಕ್ಷನ್ನೂ ಸಖತ್ತಾಗೇ ಇದೆ. ಆದರೆ, ಚಿತ್ರದಲ್ಲಿನ ಎಲ್ಲಾ ಕಮರ್ಷಿಯಲ್ ಅಂಶಗಳಿಗೆ ಹೋಲಿಸಿದರೆ, ಬಾಲಿವುಡ್ ನ ರಂಗಿನ ಬೆಡಗಿ ಸನ್ನಿ ಲಿಯೋನ್ ಅವರದ್ದೊಂದು ಐಟಂ ಸಾಂಗು ಪ್ರೇಕ್ಷಕರಿಗೆ ಹುಚ್ಚು ಹಿಡಿಸಿದೆಯಂತೆ. 'ಲೈಲಾ ಮೇ ಲೈಲಾ' ಎಂಬ ಈ ಹಾಡನ್ನು ನೋಡಲು ಮುಗಿಬೀಳುತ್ತಿದ್ದಾರಂತೆ.

Sunny Leone's item song became added advantage for 'Raees'

ಮುಂಬೈ, ನವದೆಹಲಿ, ಉತ್ತರ ಭಾರತದ ಹಿಂದಿ ಪ್ರಾಂತ್ಯಗಳೂ ಸೇರಿದಂತೆ ದಕ್ಷಿಣ ಭಾರತದ ಆಂಧ್ರ, ಕರ್ನಾಟಕಗಳಲ್ಲಿ ಈ ಹಾಡು ಬಂತೆಂದರೆ, ಪ್ರೇಕ್ಷಕರು ಹುಚ್ಚೆದ್ದು ಕುಣಿಯುತ್ತಿದ್ದಾರಂತೆ. ಜನವರಿ 25ರಂದು ಚಿತ್ರ ಬಿಡುಗಡೆಯಾಗಿ ಮಧ್ಯಾಹ್ನದ ಹೊತ್ತಿಗೆ ಎರಡು ಷೋಗಳು ಮುಕ್ತಾಯವಾಗಿವೆ.

ಇನ್ನು, ಮುಂಬೈನ ಶಾರೂಖ್ ಅಭಿಮಾನಿಗಳ ಸಂಘಗಳು ದಟ್ಟವಾಗಿರುವ ಪ್ರಾಂತ್ಯಗಳಲ್ಲಿ ಶುಕ್ರವಾರ ಮಧ್ಯಾಹ್ನದ ವೇಳೆಗೆ ಮೂರು ಷೋಗಳು ನಡೆದಿವೆಯಂತೆ.

ಅದೆಷ್ಟೋ ಕಡೆ, ಸನ್ನಿ ಹಾಡಿನಿಂದ ಹುಚ್ಚೆದ್ದಿರುವ ಅಭಿಮಾನಿಗಳು ಮೊದಲ ಷೋ ಮುಗಿಸಿಕೊಂಡು ಚಿತ್ರಮಂದಿರಗಳಿಂದ ಹೊರಬರುತ್ತಿದ್ದಂತೆ, ಮಧ್ಯಾಹ್ನದ ಷೋಗಾಗಿ ಟಿಕೆಟ್ ಕ್ಯೂನಲ್ಲಿ ನಿಂತಿದ್ದಾರೆ.

ಇತ್ತ, ಆಂಧ್ರಪ್ರದೇಶದ ಕರ್ನೂಲಿನಲ್ಲಂತೂ ಹುಚ್ಚೆದ್ದ ಅಭಿಮಾನಿಗಳು ಸಿನಿಮಾ ಸ್ಕ್ರೀನ್ ನ ಮೇಲೆ ಹಣ ತೂರುತ್ತಿದ್ದಾರಂತೆ. ಹೀಗೆ, ಸನ್ನಿ ಲಿಯೋನ್ ಹುಚ್ಚು ಹಿಡಿಸಿದ್ದಾಳೆ ಎನ್ನಲಾಗಿದೆ. ಇದು ಚಿತ್ರದ ವೇಯ್ಟೇಜ್ ಹೆಚ್ಚಿಸಿದೆಯಂತೆ.

English summary
The item song of Sunny Leone in Shahrukh's new flick Raees attracting the mob very greatly. In few theaters of Kurnool, AP, people are throwing the money to the screen when Sunny appears in the song.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X