For Quick Alerts
  ALLOW NOTIFICATIONS  
  For Daily Alerts

  ಮೊದಲ ದಿನ ದಾಖಲೆ ಕಲೆಕ್ಷನ್ ಮಾಡಿದ 'ಕಳಂಕ್' ಸಿನಿಮಾ

  |

  ಬಾಲಿವುಡ್ ನ ಬಹು ನಿರೀಕ್ಷೆಯ 'ಕಳಂಕ್' ಸಿನಿಮಾ ರಿಲೀಸ್ ಆಗಿ ಎರಡು ದಿನಗಳು ಕಳೆದಿವೆ. ಈ ಎರಡು ದಿನಗಳಲ್ಲಿ 'ಕಳಂಕ್' ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದೆ. ಏಪ್ರಿಲ್ 16ರಂದು ತೆರೆಗೆ ಬಂದ 'ಕಳಂಕ್' ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಟ್ರೈಲರ್ ಮತ್ತು ಹಾಡುಗಳ ಮೂಲಕವೇ ಚಿತ್ರಾಭಿಮಾನಿಗಳ ಕುತೂಹಲ ಹೆಚ್ಚಿಸಿತ್ತು ಕಳಂಕ್.

  'ಕಳಂಕ್' ರಿಲೀಸ್ ಆದ ಎರಡು ದಿನಗಳಲ್ಲೇ 31 ಕೋಟಿ ಕಲೆಕ್ಷನ್ ಮಾಡಿದೆ. ಮೊದಲ ದಿನ 21 ಕೋಟಿ ಬಾಚಿಕೊಂಡು ದಾಖಲೆ ನಿರ್ಮಿಸಿದೆ. ಆದ್ರೆ ಎರಡನೇ ದಿನದ ಕಲೆಕ್ಷನ್ ಕಮ್ಮಿಯಾಗಿದ್ದು ಕೇವಲ 10 ಕೋಟಿ ಮಾತ್ರ ಗಳಿಕೆ ಮಾಡಿದೆ. ಒಟ್ಟು 31 ಕೋಟಿ ಗಳಿಸುವ ಮೂಲಕ ಈ ವರ್ಷದ ಮೊದಲ ದಿನದ ಗಳಿಕೆಯಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾವಾಗಿದೆ. ವಿಕೆಂಡ್ ನಲ್ಲಿ ಸುಮಾರು 85 ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆಯಲ್ಲಿದೆ ಚಿತ್ರತಂಡ.

  ಕಂಗನಾ ಮೇಲೆ ಚಪ್ಪಲಿ ಎಸೆದಿದ್ರಾ ಅಲಿಯಾ ಭಟ್ ತಂದೆ?

  'ಕಳಂಕ್' ಕರಣ್ ಜೋಹನ್ ನಿರ್ಮಾಣದ ಸಿನಿಮಾ. ಐತಿಹಾಸಿಕ 'ಕಳಂಕ್' ಚಿತ್ರದಲ್ಲಿ ಬಾಲಿವುಡ್ ನ ಸ್ಟಾರ್ ನಟರ ದಂಡೇ ಇತ್ತು. ಮಾಧುರಿ ದೀಕ್ಷಿತ್, ಸಂಜಯ್ ದತ್, ಆಲಿಯಾ ಭಟ್, ವರುಣ್ ಧವನ್, ಸಿದ್ಧಾರ್ತ್ ಮಲ್ಹೋತ್ರ ಸೇರಿದಂತೆ ದೊಡ್ಡ ತಾರಬಳಗವೆ ಚಿತ್ರದಲ್ಲಿದೆ. ಪ್ರತಿಯೊಬ್ಬರ ಪಾತ್ರವು ವಿಭಿನ್ನವಾಗಿದ್ದು ಸಿನಿಪ್ರಿಯರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದೆ.

  ವಿಶೇಷ ಅಂದ್ರೆ ಮಾಧುರಿ ದೀಕ್ಷಿತ್ ಮತ್ತು ಸಂಜಯ್ ದತ್ 25 ವರ್ಷಗಳ ಬಳಿಕ 'ಕಳಂಕ್' ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಸಾಕಷ್ಟು ವಿಶೇಷತೆಗಳಿಂದ ಕೂಡಿರುವ 'ಕಳಂಕ್' ಮುಂದಿನ ಮೂರು ದಿನಗಳಲ್ಲಿ ಇನ್ನೂ ಹೆಚ್ಚು ಕಲೆಕ್ಷನ್ ಮಾಡುವ ನಿರೀಕ್ಷೆಯಲ್ಲಿದೆ.

  English summary
  Bollywood actress Varun Dhawan and Alia Bhatt film Kalank crosses the Rs 30-crore mark. Varun -Alia's film becomes 2019 highest opener. collects Rs 21.60 crores.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X