For Quick Alerts
  ALLOW NOTIFICATIONS  
  For Daily Alerts

  ಬಾಲ್ಯದ ಗೆಳತಿ ನತಾಶಾ ದಲಾಲ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ವರುಣ್ ಧವನ್

  |

  ಬಾಲಿವುಡ್ ನಟ ವರುಣ್ ಧವನ್ ಬಹುಕಾಲದ ಗೆಳತಿ ನತಾಶಾ ದಲಾಲ್ ಜೊತೆ ಭಾನುವಾರ (ಜನವರಿ 24) ಹಸೆಮಣೆ ಏರಿದ್ದಾರೆ. ವರುಣ್ ಮದುವೆ ಮಹಾರಾಷ್ಟ್ರದ ಅಲಿಬಾಗ್ ನಲ್ಲಿರುವ ಐಷಾರಾಮಿ ಹೋಟೆಲ್ ದಿ ಮ್ಯಾನ್ಷನ್ ಹೌಸ್ ನಲ್ಲಿ ನೆರವೇರಿತು.

  ಸಾರ್ಥಕತೆಯ ಕ್ಷಣಕ್ಕೆ ಸಾಕ್ಷಿಯಾದ ಅಮೂಲ್ಯ ದಂಪತಿ | Filmibeat Kannada

  ಕುಟುಂಬದವರು ಮತ್ತು ತೀರ ಆಪ್ತರ ಸಮ್ಮುಖದಲ್ಲಿ ವರುಣ್ ಮತ್ತು ನತಾಶಾ ದಾಂಪತ್ಯ ಜೇವನಕ್ಕೆ ಕಾಲಿಟ್ಟಿದ್ದಾರೆ. ಕೇವಲ 150 ರಿಂದ 200 ಮಂದಿ ಮಾತ್ರ ಮದುವೆಯಲ್ಲಿ ಹಾಜರಾಗಿ ನವಜೋಡಿಗೆ ಶುಭಹಾರೈಸಿದ್ದಾರೆ ಎನ್ನಲಾಗುತ್ತಿದೆ. ವರುಣ್ ಮತ್ತು ನತಾಶಾ ಹಿಂದೂ ಸಂಪ್ರದಾಯದಂತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

  ವರುಣ್ ಧವನ್ ಮದುವೆಯಾಗುತ್ತಿರುವ ನತಾಶಾ ದಲಾಲ್ ಯಾರು? ಹಿನ್ನೆಲೆ ಏನು?ವರುಣ್ ಧವನ್ ಮದುವೆಯಾಗುತ್ತಿರುವ ನತಾಶಾ ದಲಾಲ್ ಯಾರು? ಹಿನ್ನೆಲೆ ಏನು?

  ನತಾಶಾ ಜೊತೆ ವರುಣ್ ಮದುವೆ

  ನತಾಶಾ ಜೊತೆ ವರುಣ್ ಮದುವೆ

  ಕಳೆದ ಎರಡು ಮೂರು ದಿನಗಳಿಂದ ವರುಣ್ ಮತ್ತು ನತಾಶಾ ಮದುವೆ ಶಾಸ್ತ್ರಗಳು ಜೋರಾಗಿ ನಡೆಯುತ್ತಿದೆ. ಆದರೆ ಯಾವುದೇ ಫೋಟೋಗಳು ಮತ್ತು ವಿಡಿಯೋವನ್ನು ಎಲ್ಲಿಯೂ ಲೀಕ್ ಆಗದಂತೆ ನೋಡಿಕೊಂಡಿದ್ದರು. ನಿನ್ನ ಭಾನುವಾರ ಮದುವೆ ದಿನ ವರುಣ್ ಮತ್ತು ನತಾಶಾ ಜೋಡಿ ಕ್ಯಾಮರಾ ಮುಂದೆ ಹಾಜರಾಗಿದ್ದರು. ಅಲ್ಲದೆ ವರುಣ್ ಸುಂದರ ಕ್ಷಣಗಳ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಜೊತೆಗೆ, 'ಜೀವನ ಪರ್ಯಂತ ಪ್ರೀತಿಯು ಅಧಿಕೃತವಾಯಿತು' ಎಂದು ಬರೆದುಕೊಂಡಿದ್ದಾರೆ.

  ಬಾಲಿವುಡ್ ಗಣ್ಯರು ವಿಶ್

  ಬಾಲಿವುಡ್ ಗಣ್ಯರು ವಿಶ್

  ಈ ಸುಂದರ ಜೋಡಿಗೆ, ದೀಪಿಕಾ ಪಡುಕೋಣೆ, ಪರಿಣೀತಿ ಚೋಪ್ರಾ, ನೇಹಾ ದೂಪಿಯಾ, ಶಾಹಿದ್ ಕಪೂರ್, ಕರಿಶ್ಮಾ ಕಪೂರ್ ಸೇರಿದಂತೆ ಬಾಲಿವುಡ್ ಅನೇಕ ಗಣ್ಯರು ಸಾಮಾಜಿಕ ಜಾಲತಾಣದ ವಿಶ್ ಮಾಡತ್ತಿದ್ದಾರೆ.

  ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?ದುಬಾರಿ ವಿವಾಹ; ವರುಣ್ ಧವನ್ ಮದುವೆ ನಡೆಯುತ್ತಿರುವ ಐಷಾರಾಮಿ ಹೋಟೆಲ್ ಗೆ ಇಷ್ಟೊಂದು ಖರ್ಚು ಮಾಡುತ್ತಿದ್ದಾರಾ?

  ಬಳಿ ಬಣ್ಣದ ಉಡುಪಿನಲ್ಲಿ ನವ ಜೋಡಿ ಮಿಂಚಿಂಗ್

  ಬಳಿ ಬಣ್ಣದ ಉಡುಪಿನಲ್ಲಿ ನವ ಜೋಡಿ ಮಿಂಚಿಂಗ್

  ನಟ ವರುಣ್ ಧವನ್ ನೀಲಿ ಮತ್ತು ಬಿಳಿ ಬಣ್ಣದ ಶೇರ್ವಾನಿ ಧರಿಸಿದ್ದರು. ವರುಣ್ ಪತ್ನಿ ನತಾಶಾ ಬಳಿ ಬಣ್ಣದ ಹೆಚ್ಚು ಎಂಬ್ರಾಯಿಡರಿ ವರ್ಕ್ ಇರುವ ಲೆಹೆಂಗಾದಲ್ಲಿ ಕಂಗೊಳಿಸುತ್ತಿದ್ದರು. ಮೂರ್ನಾಲ್ಕು ದಿನಗಳ ಮುಂಚಿತವಾಗಿಯೆ ವರುಣ್ ಮತ್ತು ನತಾಶಾ ಕುಟುಂಬ ಅಲಿಬಾಗ್ ಗೆ ತೆರಳಿದ್ದರು.

  ನತಾಶಾ ದಲಾಲ್ ಯಾರು?

  ನತಾಶಾ ದಲಾಲ್ ಯಾರು?

  ನತಾಶಾ ದಲಾಲ್ ಖ್ಯಾತ ಉದ್ಯಮಿ ರಾಜೇಶ್ ದಲಾಲ್ ಪುತ್ರಿ. ನತಾಶಾ ತಾಯಿ ಗೌರಿ ದಲಾಲ್, ಅವರೂ ಸಹ ಉದ್ಯಮಿ. ನತಾಶಾ ಅವರದ್ದು ಉದ್ಯಮಿಗಳ ಕುಟುಂಬ. ನತಾಶಾ ಸಹ ಸ್ವಂತ ಫ್ಯಾಷನ್ ಬ್ರ್ಯಾಂಡ್ ಅನ್ನು ಹೊಂದಿದ್ದಾರೆ. ಅದರ ಹೆಸರು 'ನತಾಶಾ ದಲಾಲ್ ಲೇಬಲ್'. ನತಾಶಾ ಮತ್ತು ವರುಣ್ ಇಬ್ಬರು ಬಾಲ್ಯದ ಗೆಳೆಯರು. 6ನೇ ತರಗತಿಯಲ್ಲಿ ಪರಿಚಯವಾದ ಇಬ್ಬರು ಈಗ ಪತಿ-ಪತ್ನಿಯಾಗಿದ್ದಾರೆ.

  English summary
  Bollywood Actor Varun Dhawan ties the knot with his sweetheart Natasha Dalal.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X