Don't Miss!
- Automobiles
ಶೀಘ್ರವೇ ಕಡಿಮೆ ಬೆಲೆಯಲ್ಲಿ ಸಿಗಲಿದೆ ಮಾರುತಿ ಸುಜುಕಿ ಆಲ್ಟೊ ಕೆ10 ಎಕ್ಸ್ಟ್ರಾ ಎಡಿಷನ್
- News
ಡಿಕೆಶಿ ಪತ್ನಿ ನನಗೆ ಕಾಂಗ್ರೆಸ್ ತೊರೆಯದಂತೆ ಕೋರಿದ್ದರು: ರಮೇಶ್ ಜಾರಕಿಹೊಳಿ
- Technology
MusicLM :ಗೂಗಲ್ನಿಂದ ಹೊಸ ಟೂಲ್; ಇದು ಪಠ್ಯವನ್ನು ಸಂಗೀತವಾಗಿ ಪರಿವರ್ತಿಸಲಿದೆ!
- Finance
ಅದಾನಿ ಗ್ರೂಪ್ನ 413 ಪುಟಗಳ ಪ್ರತಿಕ್ರಿಯೆ: ಹಿಂಡನ್ಬರ್ಗ್ ಹೇಳುವುದೇನು?
- Lifestyle
ಫೆಬ್ರವರಿ ತಿಂಗಳಿನಲ್ಲಿ ಜನಿಸಿದವರ ಕುರಿತ ಆಸಕ್ತಿಕರ ಸಂಗತಿಗಳಿವು
- Sports
ನೀವೇ ನಮಗೆ ಸ್ಪೂರ್ತಿ: ಕಿರಿಯರ ಸಾಧನೆಗೆ ಹರ್ಮನ್ಪ್ರೀತ್ ಕೌರ್ ಮುಕ್ತಕಂಠದ ಶ್ಲಾಘನೆ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಬಹುಅಂಗಾಂಗ ವೈಫಲ್ಯದಿಂದ ಬಾಲಿವುಡ್‌ನ ಹಿರಿಯ ನಟ ವಿಕ್ರಂ ಗೋಖಲೆ ನಿಧನ
ಭಾರತೀಯ ಚಿತ್ರರಂಗದಲ್ಲಿ ಸಾಲು ಸಾಲು ಸಾವುಗಳಿಂದ ವಿಷಾದ ಮನೆ ಮಾಡಿದೆ. ಇತ್ತೀಚೆಗೆ ತೆಲುಗು ನಟರಾದ ಕೃಷ್ಣಂರಾಜು, ಸೂಪರ್ ಸ್ಟಾರ್ ಕೃಷ್ಣ, ಕನ್ನಡದ ಹಿರಿಯ ನಟ ಲೋಹಿತಾಶ್ವ ಕೊನೆಯುಸಿರೆಳೆದಿದ್ದರು. ಈ ನೋವಿನಿಂದ ಹೊರ ಬರುವ ಮುನ್ನವೇ ಮತ್ತೊಂದು ಆಘಾತ ಎದುರಾಗಿದೆ, ಬಾಲಿವುಡ್‌ನ ಖ್ಯಾತ ನಟ ವಿಕ್ರಂ ಗೋಖಲೆ(77) ನಿಧನರಾಗಿದ್ದಾರೆ.
ಪುಣೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಟ ವಿಕ್ರಂ ಗೋಖಲೆ ಬಹು ಅಂಗಾಂಗ ವೈಫಲ್ಯದಿಂದ ಚಿಕಿತ್ಸೆ ಫಲಕಾರಿ ಆಗದೇ ಕೊನೆಯುಸಿರೆಳೆದಿದ್ದಾರೆ. ಆಪ್ತರು, ಚಿತ್ರರಂಗದ ಗಣ್ಯರು ಸಂತಾಪ ಸೂಚಿಸುತ್ತಿದ್ದಾರೆ. 15 ದಿನಗಳಿಂದ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ವಿಕ್ರಂ ಗೋಖಲೆ ನಿಧನರಾಗಿದ್ದಾಗಿ ಅವರ ಪತ್ನಿ ಕೂಡ ತಿಳಿಸಿದ್ದಾರೆ. ವಿಕ್ರಂ ಗೋಖಲೆ ಪತ್ನಿ ವೈಶಾಲಿ ಗೋಖಲೆ ಹಾಗೂ ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ. 1971ರಲ್ಲಿ ಅಮಿತಾಬ್ ಬಚ್ಚನ್ ನಟನೆಯ 'ಪರ್ವಾನ' ಚಿತ್ರದಲ್ಲಿ ಮೊದಲ ಬಾರಿಗೆ ವಿಕ್ರಂ ಗೋಖಲೆ ನಟಿಸಿದ್ದರು. ಅದಕ್ಕೂ ಮುನ್ನು ಮರಾಠಿ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದರು.

ಸಂಜೆ 4 ಗಂಟೆಯವರೆಗೂ ವಿಕ್ರಂ ಗೋಖಲೆ ಅವರ ಪಾರ್ಥೀವ ಶರೀರವನ್ನು ಬಾಲಗಂಧರ್ವ ರಂಗಮಂದಿರಲ್ಲಿ ಅಂತಿಮ ದರ್ಶನಕ್ಕೆ ಇಡಲಾಗಿತ್ತು. 6 ಗಂಟೆಯ ವೇಳೆಗೆ ಪುಣೆಯ ವೈಕುಂಠ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಸಂಜಯ್ ಲೀಲಾ ಭನ್ಸಾಲಿ ನಿರ್ದೇಶನದ 'ಹಮ್ ದಿಲ್ ದೇ ಚುಕೆ ಸನಮ್' (1999) ಚಿತ್ರದಲ್ಲಿ ಐಶ್ವರ್ಯ ರೈ ತಂದೆ ಪಾತ್ರದಲ್ಲಿ ವಿಕ್ರಂ ಗೋಖಲೆ ನಟಿಸಿದ್ದರು. ಆ ನಂತರ 'ಹೇ ರಾಮ್', 'ತುಮ್ ಬಿನ್', 'ಭೂಲ್ ಭುಲಯ್ಯ', 'ಅಗ್ನಿಪಥ್', 'ಹಿಚ್ಕಿ' ಮತ್ತು 'ಮಿಷನ್ ಮಂಗಲ್' ಚಿತ್ರಗಳಲ್ಲಿ ನಟಿಸಿ ಗೆದ್ದಿದ್ದರು. ಪುಣೆಯಲ್ಲಿ ವಿಕ್ರಮ್ ಗೋಖಲೆ ಅವರ ಆಕ್ಟಿಂಗ್ ಅಕಾಡೆಮಿ ಕೂಡ ಇದೆ.
ಅಕ್ಷಯ್
ಕುಮಾರ್‌ನ
ಕೆಣಕಿ
ರಿಚಾ
ಚಡ್ಡಾ
ಪರ
ಬ್ಯಾಟ್
ಬೀಸಿದ
ಪ್ರಕಾಶ್
ರಾಜ್!