»   » 3 ದಿನ ಹೋಟೆಲ್ ರೂಮ್ ನಲ್ಲೇ ಲಾಕ್ ಆಗಿದ್ರಾ ಶ್ರೀದೇವಿ? ಇದೇನಿದು ಆಘಾತಕಾರಿ ಸುದ್ದಿ?

3 ದಿನ ಹೋಟೆಲ್ ರೂಮ್ ನಲ್ಲೇ ಲಾಕ್ ಆಗಿದ್ರಾ ಶ್ರೀದೇವಿ? ಇದೇನಿದು ಆಘಾತಕಾರಿ ಸುದ್ದಿ?

Posted By:
Subscribe to Filmibeat Kannada
3 ದಿನ ಹೋಟೆಲ್ ರೂಮ್ ನಲ್ಲೇ ಲಾಕ್ ಆಗಿದ್ರಾ ಶ್ರೀದೇವಿ | Filmibeat Kannada

'ಅತಿಲೋಕ ಸುಂದರಿ' ಶ್ರೀದೇವಿ ನಿಧನದ ಸುದ್ದಿ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಶ್ರೀದೇವಿ ಹೃದಯಾಘಾತದಿಂದ ಮೃತಪಟ್ಟರು ಎಂದು ಮೊದಲು ವರದಿ ಆಗಿತ್ತು. ಆದ್ರೀಗ, ಫೋರೆನ್ಸಿಕ್ ವರದಿಯಲ್ಲಿ ಶ್ರೀದೇವಿ ಆಕಸ್ಮಿಕವಾಗಿ ಬಾತ್ ಟಬ್ ನಲ್ಲಿ ಮುಳುಗಿ ಸತ್ತಿದ್ದಾರೆ ಎಂದು ಸ್ಪಷ್ಟ ಪಡಿಸಲಾಗಿದೆ. ಅಲ್ಲದೇ, ಪೋಸ್ಟ್ ಮಾರ್ಟಂ ವರದಿಯಲ್ಲಿ 'ಹೃದಯಾಘಾತ'ದ ಬಗ್ಗೆ ಉಲ್ಲೇಖವೇ ಮಾಡಿಲ್ಲ.

ಶ್ರೀದೇವಿ ರಕ್ತದ ಮಾದರಿಯಲ್ಲಿ ಮದ್ಯ ಸೇವನೆ ಮಾಡಿರುವುದು ಕೂಡ ಕಂಡು ಬಂದಿದೆ. ಹೀಗಾಗಿ, ಮದ್ಯದ ಅಮಲಿನಲ್ಲಿ ಬಾತ್ ಟಬ್ ಗೆ ಬಿದ್ದು, ನೀರಲ್ಲಿ ಮುಳುಗಿ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ.

ದುಬೈ ಆಸ್ಪತ್ರೆ ನೀಡಿರುವ ಈ ರಿಪೋರ್ಟ್ ನೋಡಿ ಟ್ವೀಟಿಗರು ಅನುಮಾನ ವ್ಯಕ್ತಪಡಿಸಿದ್ದಾರೆ. ಬಾತ್ ಟಬ್ ನಲ್ಲಿ ಶ್ರೀದೇವಿ ಮುಳುಗಿ ಸಾಯಲು, ಅವರೇನು ಚಿಕ್ಕ ಮಗುವೇ.? ಅಥವಾ ಬಾತ್ ಟಬ್ ಸಾಗರದಷ್ಟು ಆಳವಾಗಿತ್ತೇ.? ಎಂಬೆಲ್ಲ ಪ್ರಶ್ನೆಗಳು ಸಹಜವಾಗಿ ಉದ್ಭವವಾಗಿದೆ. ಹೀಗಿರುವಾಗಲೇ, ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದೆ. ಅದೇನು ಅಂತ ತಿಳಿಯಲು ಫೋಟೋ ಸ್ಲೈಡ್ ಗಳಲ್ಲಿ ಓದಿರಿ...

ಮೂರು ದಿನ ರೂಮ್ ನಲ್ಲಿ ಲಾಕ್ ಆಗಿದ್ರಾ ಶ್ರೀದೇವಿ.?

ದುಬೈನ ಹೋಟೆಲ್ ರೂಮ್ ನಲ್ಲಿ ಸಾವನ್ನಪ್ಪುವ ಮುನ್ನ, ಮೂರು ದಿನಗಳ ಕಾಲ ಆ ರೂಮ್ ನಿಂದ ಶ್ರೀದೇವಿ ಹೊರಗೆ ಬಂದೇ ಇರಲಿಲ್ಲ ಎನ್ನುವ ಮಾಹಿತಿ ರಿಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

ನಟಿ ಶ್ರೀದೇವಿ ಪೋಸ್ಟ್ ಮಾರ್ಟಂ ರಿಪೋರ್ಟ್ ಸುತ್ತ ಅನುಮಾನದ ಹುತ್ತ.!

ಮುಂಚೆ 48 ಗಂಟೆ ಎನ್ನಲಾಗಿತ್ತು.!

ದುಬೈನ ಹೋಟೆಲ್ ರೂಮ್ ನಿಂದ 48 ಗಂಟೆಗಳ ಕಾಲ ಶ್ರೀದೇವಿ ಹೊರಗೆ ಬಂದಿರಲಿಲ್ಲ ಎಂದು ಈ ಹಿಂದೆ ಸುದ್ದಿ ಆಗಿತ್ತು. ಆದ್ರೀಗ, ಮೂರು ದಿನಗಳ ಕಾಲ ರೂಮ್ ಬಿಟ್ಟು ಶ್ರೀದೇವಿ ಕದಲಿರಲಿಲ್ಲ ಎನ್ನಲಾಗಿದೆ.

ಶ್ರೀದೇವಿ ಮೃತಪಟ್ಟಿದ್ದು ಹೃದಯಾಘಾತದಿಂದಲ್ಲ.! ಮತ್ತೆ.?

ಒಬ್ಬೊಬ್ಬರು ಒಂದೊಂದು ತರಹ ಹೇಳ್ತಿದ್ದಾರೆ.!

ಮೋಹಿತ್ ಮಾರ್ವಾ ಮದುವೆ ಮುಗಿದ್ಮೇಲೆ, ಬೋನಿ ಕಪೂರ್ ಭಾರತಕ್ಕೆ ವಾಪಸ್ ಬಂದಿದ್ದರು. ಶ್ರೀದೇವಿ ಅಲ್ಲೇ ಉಳಿದುಕೊಂಡಿದ್ದರು. ಶ್ರೀದೇವಿಗೆ ಸರ್ ಪ್ರೈಸ್ ನೀಡಲು ಬೋನಿ ಕಪೂರ್ ಪುನಃ ದುಬೈಗೆ ತೆರಳಿದಾಗ, ಬಾತ್ ಟಬ್ ನಲ್ಲಿ ಶ್ರೀದೇವಿ ಬಿದ್ದಿದ್ದರು ಎಂಬುದು ಒಂದು ಮೂಲದಿಂದ ಬಂದಿರುವ ಮಾಹಿತಿ. ಆದ್ರೆ, ಹೋಟೆಲ್ ಸಿಬ್ಬಂದಿ ಹೇಳುವುದೇ ಬೇರೆ. ನೀರು ಬೇಕು ಅಂತ ರೂಮ್ ಸರ್ವೀಸ್ ಗೆ ಶ್ರೀದೇವಿ ಫೋನ್ ಮಾಡಿದ್ದರು. ನೀರು ತಗೊಂಡು ಹೋಟೆಲ್ ಸಿಬ್ಬಂದಿ ರೂಮ್ ತಟ್ಟಿದಾಗ, ಶ್ರೀದೇವಿ ಬಾಗಿಲು ತೆಗೆಯಲಿಲ್ಲ. ಬಳಿಕ ಹೋಟೆಲ್ ಸಿಬ್ಬಂದಿ ಬಾಗಿಲು ತೆರೆದು ನೋಡಿದಾಗ, ಶ್ರೀದೇವಿ ಬಾತ್ ರೂಮ್ ನಲ್ಲಿ ಬಿದ್ದಿದ್ದರು.

ಯಾವುದನ್ನ ನಂಬಬೇಕು.?

ಮೊದಲು ಹೃದಯಾಘಾತ, ಈಗ ಬಾತ್ ಟಬ್.. ಹೀಗೆ ದಿನದಿಂದ ದಿನಕ್ಕೆ ಒಂದೊಂದು ತಿರುವು ಪಡೆದುಕೊಳ್ಳುತ್ತಿರುವುದರಿಂದ ಶ್ರೀದೇವಿ ಸಾವಿನ ಸುತ್ತ ಅನುಮಾನ ಹುತ್ತ ಬೆಳೆಯಲು ಆರಂಭವಾಗಿದೆ.

English summary
According to the latest reports, Bollywood Actress Sridevi was room-bound for 3 days before she was found dead.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada