»   » 'ಕಾರ್ಬನ್' ದುಷ್ಪರಿಣಾಮ ಕಿರುಚಿತ್ರದಲ್ಲಿ ನವಾಜುದ್ದೀನ್! ಟ್ರೈಲರ್ ನೋಡಿ..

'ಕಾರ್ಬನ್' ದುಷ್ಪರಿಣಾಮ ಕಿರುಚಿತ್ರದಲ್ಲಿ ನವಾಜುದ್ದೀನ್! ಟ್ರೈಲರ್ ನೋಡಿ..

Posted By:
Subscribe to Filmibeat Kannada

ಬಾಲಿವುಡ್ ನಟ ನವಾಜುದ್ದೀನ್ ಸಿದ್ದಿಕಿ ಒಂದು ಚಿತ್ರಕ್ಕಿಂತ ಮತ್ತೊಂದು ಚಿತ್ರದಲ್ಲಿ ವಿಭಿನ್ನ ಪಾತ್ರಗಳಲ್ಲಿ ನಟಿಸುವಲ್ಲಿ ಮುಂಚೂಣಿ. ಈಗ ಅವರು ಪ್ರಪಂಚದ ಪ್ರತಿಯೊಬ್ಬರ ಜೀವಗಾಳಿ ಮೇಲೆ ಪರಿಣಾಮ ಬೀರುವ ಕಥೆಯಾಧಾರಿತ ಕಿರುಚಿತ್ರದಲ್ಲಿ ನಟಿಸಿದ್ದಾರೆ.

ದಿನದಿಂದ ದಿನಕ್ಕೆ ಕಾರ್ಬನ್ ಡೈ ಆಕ್ಸೈಡ್ ಪ್ರಮಾಣ ವಾತಾವರಣದಲ್ಲಿ ಹೆಚ್ಚುತ್ತಿದೆ. ಆದರೆ ಇದಕ್ಕೆ ಕಡಿವಾಣ ಹಾಕುವ ಪ್ರಯತ್ನ ಆಗುತ್ತಿಲ್ಲ. ಇತ್ತ ಪರಿಸರ ಅಭಿವೃದ್ದಿ ಕಾರ್ಯಗಳು ಅಧಿಕೃತವಾಗಿ ನಡೆಯುತ್ತಿಲ್ಲ. ವಾತಾವರಣದಲ್ಲಿ ಕಾರ್ಬನ್ ಪ್ರಮಾಣ ಹೆಚ್ಚಾಗುವುದರಿಂದ ನಮ್ಮೆಲ್ಲರ ಮೇಲೆ ಯಾವ ರೀತಿ ದುಷ್ಫರಿಣಾಮ ಬೀರಲಿದೆ ಎಂಬುದರ ಕುರಿತು ಈಗ ಬಾಲಿವುಡ್ ನಲ್ಲಿ 'ಕಾರ್ಬನ್' ಟೈಟಲ್ ನ ಕಿರುಚಿತ್ರವೊಂದು ಮೂಡಿಬರುತ್ತಿದೆ. ಈ ಕಿರುಚಿತ್ರದ ಟೈಲರ್ ಇಂದು ಬಿಡುಗಡೆ ಆಗಿದೆ.

watch 'Carbon' short film

ತಾಂತ್ರಿಕವಾಗಿ 'ಕಾರ್ಬನ್' ಕಿರುಚಿತ್ರವನ್ನು ದೊಡ್ಡ ಸಿನಿಮಾಗಳ ರೀತಿಯಲ್ಲೇ ನಿರ್ಮಾಣ ಮಾಡಿರುವುದು ಟ್ರೈಲರ್‌ನಲ್ಲಿ ಕಂಡುಬಂದಿದೆ. ಕತೆ ಬರೆದು ಮೈತ್ರಿ ಬಾಜ್ಪೆಯಿ ರವರು ನಿರ್ದೇಶನ ಮಾಡಿದ್ದಾರೆ. ದೀಪ್ಶಿಖಾ ದೇಶ್‌ಮುಖ್‌ ಮತ್ತು ಇತರರು ಜಂಟಿಯಾಗಿ ಈ ಕಿರುಚಿತ್ರ ನಿರ್ಮಾಣ ಮಾಡಿದ್ದಾರೆ.

'ಕಾರ್ಬನ್' ಕಿರುಚಿತ್ರದಲ್ಲಿ ನವಾಜುದ್ಧೀನ್ ಸಿದ್ದಿಕಿ ಹೊರತು ಪಡಿಸಿ, ಪ್ರಚಿ ದೇಸಾಯ್, ಜಾಕಿ ಭಗ್ನಾನಿ, ಯಶ್‌ಪಾಲ್ ಶರ್ಮಾ ಮತ್ತು ಇತರರು ಅಭಿನಯಿಸಿದ್ದಾರೆ. ಪ್ರಪಂಚದ ನಾಳೆಯ ದುಷ್ಪರಿಣಾಮವನ್ನು ತಿಳಿಸುವ 'ಕಾರ್ಬನ್' ಕಿರುಚಿತ್ರದ ಟ್ರೈಲರ್ ಈ ಕೆಳಗಿನಂತಿದೆ ನೋಡಿ.

English summary
Nawazuddin Siddiqui starrer short film 'Carbon' trailer released.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada