For Quick Alerts
  ALLOW NOTIFICATIONS  
  For Daily Alerts

  ಹೇಟ್ ಸ್ಟೋರಿ 2 ಕಾಮೋನ್ಮಾದ ಟ್ರೇಲರ್ ಹಿಟ್

  By ಜೇಮ್ಸ್ ಮಾರ್ಟಿನ್
  |

  ಹೇಟ್ ಸ್ಟೋರಿ 2 ಚಿತ್ರದ ಟ್ರೇಲರ್ ಸಾಮಾಜಿಕ ಜಾಲ ತಾಣ ಯೂಟ್ಯೂಬ್ ನಲ್ಲಿ ಭರ್ಜರಿ ಹಿಟ್ ಆಗಿದೆ ಟೀ ಸೀರಿಸ್ ಹೊರ ತಂದಿರುವ ಈ ಟ್ರೇಲರ್ ನಲ್ಲಿ ಹಸಿ ಬಿಸಿ ರೋಮಾಂಚನಕಾರಿ ದೃಶ್ಯಗಳು ಸಿನಿರಸಿಕರನ್ನು ಪುಳಕಿತಗೊಳಿಸಿದೆ. ಈ ಸಮಯಕ್ಕೆ ಸರಿ ಸುಮಾರು 47ಲಕ್ಷಕ್ಕೂ ಅಧಿಕ (4,743,586) ಹಿಟ್ಸ್ ಪಡೆದುಕೊಂಡಿದ್ದು, ಟ್ರೇಲರ್ ಬಿಡುಗಡೆಯಾಗಿ ಇನ್ನೂ ನಾಲ್ಕು ದಿನ ಕಳೆದಿಲ್ಲ.

  ಹೇಟ್ ಸ್ಟೋರಿ 2 ಚಿತ್ರದ ಕಥೆ ಏನೇ ಇರಬಹುದು ಆದರೆ, ಕಿರುತೆರೆಯ ತಾರೆಗಳಾದ ಸುರ್ವೀನ್ ಚಾವ್ಲಾ ಹಾಗೂ ಜೇ ಭಾನುಶಾಲಿ ಅವರಿಗಂತೂ ಈ ಚಿತ್ರ ಮಹತ್ವದ್ದಾಗಿದೆ. ಚಿತ್ರದ ಯಶಸ್ಸಿನಿಂದ ಬಾಲಿವುಡ್ ನಲ್ಲಿ ಎತ್ತರಕ್ಕೆ ಬೆಳೆಯುವ ಉತ್ಸಾಹ ಈ ಪ್ರತಿಭಾವಂತದಲ್ಲಿದೆ. ಮೊದಲ ಚಿತ್ರದಲ್ಲೇ ಬಟ್ಟೆ ವ್ಯಾಮೋಹ ಕಳಚಿ ಬೆಡ್ ರೂಮ್ ಸೀನ್ ಗಳಲ್ಲಿ ಪ್ರಣಯೋನ್ಮಾದ ದೃಶ್ಯಗಳಲ್ಲಿ ಕಾಣಿಸಿಕೊಂಡಿರುವ ಸುರ್ವೀನ್ ಟ್ರೇಲರ್ ನಲ್ಲೇ ಪಡ್ಡೆಗಳ ನಿದ್ದೆಗೆಡಿಸಿದ್ದಾಳೆ.

  ಸುರ್ವೀನ್ ಹಾಗೂ ಜೇ ನಡುವಿನ ಕಿಸ್ಸಿಂಗ್, ಕಾಮೋನ್ಮಾದ ಸನ್ನಿವೇಶಗಳು, ಪ್ರಣಯದ ಪರಾಕಾಷ್ಠೆ ತಲುಪಿಸುವ ಹಂತ ಮುಟ್ಟಿಸುವಂತಿದೆ. ಪ್ರೇಕ್ಷಕರು ದೊಡ್ಡ ಪರದೆಯಲ್ಲಿ ಪ್ರೇಮ ಲಹರಿಯಲ್ಲಿ ತೇಲಲು ಹಾತೊರೆಯುತ್ತಿದ್ದಾರೆ.

  2012ರಲ್ಲಿ ತೆರೆ ಕಂಡ ಹೇಟ್ ಸ್ಟೋರಿ ಚಿತ್ರದ ಮುಂದುವರೆದ ಭಾಗ ಎನ್ನಬಹುದಾದ ಈ ಚಿತ್ರ ಮೊದಲ ಚಿತ್ರಕ್ಕಿಂತ ಸಕತ್ ಹಾಟ್ ಆಗಿದೆಯಂತೆ. ಟ್ರೇಲರ್ ನೋಡಿದ ಜನ ಕೂಡಾ ಇಡೀ ಚಿತ್ರ ಹೀಗೆ ಇರಬಹುದೇ ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನುತ್ತಿದ್ದಾರೆ.

  ಹಸಿ ಬಿಸಿ ದೃಶ್ಯಗಳ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿ ಚಿತ್ರ ಯಶಸ್ವಿ ಮಾಡುವುದಷ್ಟೇ ನಮ್ಮ ಕೆಲಸವಲ್ಲ, ಚಿತ್ರದಲ್ಲಿ ಪ್ರೀತಿ ಪ್ರೇಮ ಕಾಮದ ಜತೆಗೆ ರಾಜಕೀಯ, ಪರಸ್ಪರ ಸಂಬಂಧಗಳ ಬಗ್ಗೆ ಕೂಡಾ ಕಥೆ ಹೊಂದಿದೆ ಎಂದು ನಿರ್ಮಾಪಕ ವಿಕ್ರಮ್ ಭಟ್ ಹೇಳುತ್ತಾರೆ.

  <iframe width="640" height="360" src="//www.youtube.com/embed/1JY8rA7fVnU" frameborder="0" allowfullscreen></iframe>

  ಹೇಟ್ ಸ್ಟೋರಿ 2 ಚಿತ್ರದಲ್ಲಿ ಸುರ್ವೀನ್ ಹಾಗೂ ಜೇ ಗೆ ಕಾಟ ಕೊಡಲು ಅನುಭವಿ ವಿಲನ್ ಸುಶಾಂತ್ ಸಿಂಗ್ ಇದ್ದಾನೆ. ಹಿಂದೂ ಪರ ಸಂಘಟನೆಯೊಂದರ ಮುಖ್ಯಸ್ಥನ ಪಾತ್ರದಲ್ಲಿ ಸುಶಾಂತ್ ಕಾಣಿಸಿಕೊಳ್ಳುತ್ತಿದ್ದು, ಆತನನ್ನು ಫೋಟೋ ಜರ್ನಲಿಸ್ಟ್ ಸುರ್ವೀನ್ ಹೇಗೆ ಬಳಸಿಕೊಳ್ಳುತ್ತಾಳೆ. ಇದರಿಂದ ಆಕೆಗೆ ಆಗುವ ತೊಂದರೆ ಏನು? ಎಂಬುದನ್ನು ತೆರೆಯ ಮೇಲೆ ನೋಡಿ... ವಿಕ್ರಮ್ ಭಟ್ ನಿರ್ಮಾಣದ ಈ ಚಿತ್ರವನ್ನು ವಿಶಾಲ್ ಪಾಂಡ್ಯ ನಿರ್ದೇಶಿಸಿದ್ದಾರೆ.ಅಂದಹಾಗೆ, ಚಿತ್ರ ಜುಲೈ 18ಕ್ಕೆ ವಿಶ್ವದೆಲ್ಲೆಡೆ ಬಿಡುಗಡೆಯಾಗಲಿದೆ.

  English summary
  Makers of the movie Hate Story 2 launched its official trailer recently and the trailer has crossed over 4 million Youtube views in just four days of its launch.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X