»   » ದೀಪಾವಳಿ ಧಮಾಕ, ಪಿಕೆ ಟ್ರೇಲರ್ ಬೊಂಬಾಟ್

ದೀಪಾವಳಿ ಧಮಾಕ, ಪಿಕೆ ಟ್ರೇಲರ್ ಬೊಂಬಾಟ್

Posted By: ಜೇಮ್ಸ್ ಮಾರ್ಟಿನ್
Subscribe to Filmibeat Kannada

ಹಿಂದಿ ಚಿತ್ರರಂಗದ ಸಕಲಕಲಾವಲ್ಲಭ ಅಮೀರ್ ಖಾನ್ ಹೊಸಬಗೆ ಪಾತ್ರದಲ್ಲಿ ಕಾಣಿಸಿಕೊಂಡಿರುವ ಅಮೀರ್ ಖಾನ್ ಅವರ ಬಹುನಿರೀಕ್ಷಿತ 'ಪಿಕೆ' ಚಿತ್ರದ ಟ್ರೇಲರ್ ಗುರುವಾರ ಬಿಡುಗಡೆಗೊಂಡಿದೆ. ಶಾರುಖ್ ಖಾನ್ ಅವರ ಹ್ಯಾಪಿ ನ್ಯೂ ಇಯರ್ ಚಿತ್ರದ ಬಿಡುಗಡೆ ಜೊತೆಗೆ ಬರಬೇಕಿದ್ದ ಪಿಕೆ ಟ್ರೇಲರ್ ಅವಧಿಗೆ ಮುನ್ನ ಬಂದರೂ ಭರ್ಜರಿಯಾಗಿ ಪ್ರತಿಕ್ರಿಯೆ ಪಡೆದುಕೊಂಡಿದೆ.

ಈಗಾಗಲೇ ಲಂಗ ತೊಟ್ಟ, ನಗ್ನವಾಗಿ ಟ್ರಾನ್ಸಿಸ್ಟರ್ ಹಿಡಿದುಕೊಂಡ, ಲೂಸು ಉಡುಗೆ ತೊಟ್ಟ ಅಮೀರ್ ಖಾನ್ ಪೋಸ್ಟರ್ ಗಳು ಜನಪ್ರಿಯಗೊಂದಿವೆ. ಈಗ ಟ್ರೇಲರ್ ರಿಲೀಸ್ ಆಗುತ್ತಿದ್ದಂತೆ ಪಿಕೆ ಚಿತ್ರದಲ್ಲಿನ ಅಮೀರ್ ಖಾನ್ ಪಾತ್ರದ ಬಗ್ಗೆ ಇದ್ದ ಗುಟ್ಟು ರಟ್ಟಾಗಿದೆ. ಹೌದು ಈ ಚಿತ್ರದಲ್ಲಿ ಅಮೀರ್ ನಿಮ್ಮೆಲ್ಲರನ್ನು ರಂಜಿಸಲು ಅನ್ಯಗ್ರಹ ಜೀವಿಯಾಗಿ ಬೆಳ್ಳಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. [PK ಕಥೆ ಲೀಕ್ ಆಯ್ತಂತೆ!]

Aamir Khan in PK

ಪಿಕೆ ಚಿತ್ರದಲ್ಲಿ ಅಮೀರ್ ಖಾನ್, ಬೆಂಗಳೂರು ಬೆಡಗಿ ಅನುಷ್ಕಾ ಶರ್ಮ ಅಲ್ಲದೆ ಸುಶಾಂತ್ ಸಿಂಗ್ ರಜಪೂತ್, ಸಂಜಯ್ ದತ್, ಬೋಮನ್ ಇರಾನಿ, ಸೌರಭ್ ಶುಕ್ಲಾ ಮುಖ್ಯ ಪಾತ್ರದಲ್ಲಿದ್ದಾರೆ. [ಮಿ.ಪರ್ಫೆಕ್ಟ್ ಆಲ್ಲ, ಕಾಪಿ ಕ್ಯಾಟ್?]

ರಾಜಕುಮಾರ್ ಹಿರಾನಿ ನಿರ್ದೇಶನದ ಈ ಚಿತ್ರ ಡಿಸೆಂಬರ್ 19ಕ್ಕೆ ನಿಮ್ಮ ನೆಚ್ಚಿನ ಚಿತ್ರಮಂದಿರದಲ್ಲಿ ಬರಲಿದೆ. 3 ಈಡಿಯಟ್ಸ್, ಮುನ್ನಾಭಾಯಿ ಸರಣಿ ಚಿತ್ರಗಳ ಯಶಸ್ಸಿನ ನಂತರ ವಿದು ವಿನೋದ್ ಚೋಪ್ರಾ ನಿರ್ಮಾಣದಲ್ಲಿ ಬರುತ್ತಿರುವ ಈ ಚಿತ್ರದಲ್ಲಿ ಅಮೀರ್ ನಿಮ್ಮನ್ನು ನಕ್ಕು ನಲಿಸಲಿದ್ದಾರೆ. [ಖಾನ್ ಬೆತ್ತಲಾದ ಮೇಲೆ ಅನುಷ್ಕಾ ಸರದಿ]

ಅನಾಮಿಕನೊಬ್ಬ ನಗರಕ್ಕೆ ಬರುತ್ತಾನೆ, ಯಾರೂ ಕೇಳದಂಥ ಪ್ರಶ್ನೆಗಳನ್ನು ಕೇಳುತ್ತಾನೆ. ಪಿ.ಕೆ ಎಂಬ ಇನಿಶಿಯಲ್ ಅಷ್ಟೇ ಅವನ ಹೆಸರು. ಅವನ ಮುಗ್ಧ ಪ್ರಶ್ನೆಗಳು ಮಗುವಿನಂಥ ಕುತೂಹಲ ಅವನ ಪ್ರೇಮ, ಹಾಸ್ಯಭರಿತ ಪ್ರಯಾಣ ನಿಮ್ಮ ಮುಂದಿದೆ ಎಂದು ಟ್ರೇಲರ್ ನಲ್ಲಿ ಕಥೆ ಬಿಚ್ಚಿಡಲಾಗಿದೆ. ಸದ್ಯಕ್ಕೆ ಚಿತ್ರದ ಟ್ರೇಲರ್ ನೋಡಿ ನಕ್ಕು ಬಿಡಿ....

English summary
Watch PK Trailer: From the time Aamir Khan made headlines with his PK poster sans clothes, the film has been talked about a lot with all curiosity. Today, PK team launched their trailer.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X