»   » ಬ್ರೇಕಿಂಗ್ ನ್ಯೂಸ್: ಮೇ 8 ರಂದು ನಡೆಯಲಿದೆ ಸೋನಂ ಕಪೂರ್ ವಿವಾಹ

ಬ್ರೇಕಿಂಗ್ ನ್ಯೂಸ್: ಮೇ 8 ರಂದು ನಡೆಯಲಿದೆ ಸೋನಂ ಕಪೂರ್ ವಿವಾಹ

Posted By:
Subscribe to Filmibeat Kannada

ವಿರಾಟ್ ಕೋಹ್ಲಿ-ಅನುಷ್ಕಾ ಶರ್ಮಾ, ನಟಿ ಶ್ರಿಯಾ ಸರಣ್, ಮಾಡೆಲ್ ಮಿಲಿಂದ್ ಸೋಮನ್ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಬಾಲಿವುಡ್ ನಟಿ ಸೋನಂ ಕಪೂರ್ ಕೂಡ ವೈವಾಹಿಕ ಬದುಕಿಗೆ ಅಡಿಯಿಡಲಿದ್ದಾರೆ. ಉದ್ಯಮಿ ಆನಂದ್ ಅಹುಜಾ ಜೊತೆಗೆ ಸೋನಂ ಕಪೂರ್ ವಿವಾಹ ಸದ್ಯದಲ್ಲೇ ನಡೆಯಲಿದೆ ಎಂಬ ಗುಸುಗುಸು ಬಾಲಿವುಡ್ ಅಂಗಳದಲ್ಲಿ ಅನೇಕ ದಿನಗಳಿಂದ ಕೇಳಿಬರುತ್ತಲೇ ಇತ್ತು. ಈಗ ಈ ಸುದ್ದಿ ಅಧಿಕೃತವಾಗಿದೆ.

ಕಪೂರ್ ಕುಟುಂಬದಿಂದ ಇಂದು ಬ್ರೇಕಿಂಗ್ ನ್ಯೂಸ್ ಹೊರಬಿದ್ದಿದೆ. ಬಾಲಿವುಡ್ ನ ಸ್ಟೈಲ್ ಐಕಾನ್ ಸೋನಂ ಕಪೂರ್ ವಿವಾಹ ಮಹೋತ್ಸವ ಮೇ 8 ರಂದು ಮುಂಬೈನಲ್ಲಿ ನಡೆಯಲಿದೆ.

Wedding Bells: Sonam Kapoor to get married to Anand Ahuja

ಕಪೂರ್ ಕುವರಿ ಸೋನಂ ಪೀ..ಪೀ..ಪೀ..ಡುಂ..ಡುಂಗೆ ರೆಡಿ.!

ಇಷ್ಟು ದಿನ ಮದುವೆ ಬಗ್ಗೆ ಅನಿಲ್ ಕಪೂರ್ ಹಾಗೂ ಸೋನಂ ಕಪೂರ್ ತುಟಿ ಬಿಚ್ಚಿರಲಿಲ್ಲ. ಆದ್ರೆ, ಇಂದು ಮಾಧ್ಯಮಗಳಿಗೆ ಕಪೂರ್ ಹಾಗೂ ಅಹುಜಾ ಕುಟುಂಬ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ಅದರಲ್ಲಿ ''ಸೋನಂ ಕಪೂರ್-ಆನಂದ್ ಅಹುಜಾ ಮದುವೆ ಮೇ 8 ರಂದು ನಡೆಯಲಿದೆ'' ಎಂಬುದು ಸ್ಪಷ್ಟವಾಗಿದೆ.

ಸೋನಂ ಕಪೂರ್-ಆನಂದ್ ಅಹುಜಾ ಮದುವೆಗೆ ಕುಟುಂಬಸ್ಥರು ಹಾಗೂ ಸ್ನೇಹಿತರಿಗೆ ಮಾತ್ರ ಆಹ್ವಾನ ನೀಡಲಾಗಿದೆ. ಈಗಾಗಲೇ ಅನಿಲ್ ಕಪೂರ್ ನಿವಾಸದಲ್ಲಿ ಸಡಗರ-ಸಂಭ್ರಮ ಮನೆ ಮಾಡಿದೆ. ಈ ವಾರಂತ್ಯದ ಹೊತ್ತಿಗೆ ಮೆಹಂದಿ ಹಾಗೂ ಸಂಗೀತ ಕಾರ್ಯಕ್ರಮ ನಡೆಯಲಿದೆ.

English summary
Wedding Bells! Bollywood Actress Sonam Kapoor and Anand Ahuja is all set for their big fat wedding which is scheduled on May 8th.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X