For Quick Alerts
  ALLOW NOTIFICATIONS  
  For Daily Alerts

  ಕಪೂರ್ ಕುವರಿ ಸೋನಂ ಪೀ..ಪೀ..ಪೀ..ಡುಂ..ಡುಂಗೆ ರೆಡಿ.!

  By Harshitha
  |

  ಸಿನಿ ದುನಿಯಾದಲ್ಲಿ ನಿನ್ನೆ ಸಂಜೆಯಿಂದ ನಟಿ ಶ್ರಿಯಾ ಶರಣ್ ಮದುವೆ ಸುದ್ದಿ ಗಿರಕಿ ಹೊಡೆದಿದ್ದಾಯ್ತು. ತಮ್ಮ ಮದುವೆ ಸುದ್ದಿ ಶುದ್ಧ ಸುಳ್ಳು ಎಂದು ಶ್ರಿಯಾ ಸ್ಪಷ್ಟನೆ ನೀಡಿದ್ದೂ ಆಯ್ತು. ಈಗ ಬಾಲಿವುಡ್ ನ ಬ್ಯೂಟಿ ಕ್ವೀನ್.. ಸ್ಟೈಲ್ ಐಕಾನ್.. ಕಪೂರ್ ಕುವರಿ.. ಸೋನಂ ಸರದಿ.

  ಹೌದು, ಅನಿಲ್ ಕಪೂರ್ ಹಾಗೂ ಸುನೀತಾ ಪುತ್ರಿ ಆಗಿರುವ ಸೋನಂ ಕಪೂರ್ ವಿವಾಹ ಮಹೋತ್ಸವ ಸದ್ಯದಲ್ಲೇ ನಡೆಯಲಿದ್ಯಂತೆ.

  ಸದ್ಯ ಸೋನಂ ಕಪೂರ್ ಹಾಗೂ ಅಕ್ಷಯ್ ಕುಮಾರ್ ಅಭಿನಯದ 'ಪ್ಯಾಡ್ ಮ್ಯಾನ್' ಸಿನಿಮಾ ಬಿಡುಗಡೆಯ ಹೊಸ್ತಿಲಲ್ಲಿದೆ. 'ಪ್ಯಾಡ್ ಮ್ಯಾನ್' ಸಿನಿಮಾದ ಜೊತೆಜೊತೆಗೆ ಸೋನಂ ಕಪೂರ್ ಮದುವೆ ಮ್ಯಾಟರ್ ಕೂಡ ಸದ್ದು ಮಾಡುತ್ತಿದೆ. ಮುಂದೆ ಓದಿರಿ...

  ಸೋನಂ ಕಪೂರ್ ಮದುವೆ ಯಾವಾಗ.?

  ಸೋನಂ ಕಪೂರ್ ಮದುವೆ ಯಾವಾಗ.?

  32 ವರ್ಷ ವಯಸ್ಸಿನ ಸೋನಂ ಕಪೂರ್ ಅತಿ ಶೀಘ್ರದಲ್ಲೇ ಮದುವೆ ಆಗಲಿದ್ದಾರಂತೆ. ಇದೇ ವರ್ಷದ ಜೂನ್ ಅಥವಾ ಜುಲೈ ಹೊತ್ತಿಗೆ ಸೋನಂ ಕಪೂರ್ ದಾಂಪತ್ಯ ಗೀತೆ ಹಾಡಲಿದ್ದಾರಂತೆ. ಅದಕ್ಕೂ ಮುನ್ನ ನಿಶ್ಚಿತಾರ್ಥ ಸಮಾರಂಭ ನಡೆಯಲಿದ್ಯಂತೆ.

  ನಿಶ್ಚಿತಾರ್ಥಕ್ಕೆ ಸಜ್ಜಾದ ನಟಿ ಸೋನಮ್ ಕಪೂರ್: ಹುಡುಗ ಯಾರು?ನಿಶ್ಚಿತಾರ್ಥಕ್ಕೆ ಸಜ್ಜಾದ ನಟಿ ಸೋನಮ್ ಕಪೂರ್: ಹುಡುಗ ಯಾರು?

  ಸೋನಂ ಮದುವೆ ಆಗುವ ಹುಡುಗ ಯಾರು.?

  ಸೋನಂ ಮದುವೆ ಆಗುವ ಹುಡುಗ ಯಾರು.?

  ದೀರ್ಘ ಕಾಲದ ಗೆಳೆಯ ಆನಂದ್ ಅಹುಜಾ ಕೈಹಿಡಿಯಲಿದ್ದಾರೆ ಸೋನಂ ಕಪೂರ್. ಆನಂದ್ ಅಹುಜಾ ದೆಹಲಿ ಮೂಲದ ಬಿಸಿನೆಸ್ ಮ್ಯಾನ್ ಆಗಿದ್ದು, ಕೆಲ ಕಾಲದಿಂದ ಸೋನಂ ರನ್ನ ಪ್ರೀತಿಸುತ್ತಿದ್ದಾರೆ.

  ಒಪ್ಪಿಗೆ ನೀಡಿದೆ ಕುಟುಂಬ

  ಒಪ್ಪಿಗೆ ನೀಡಿದೆ ಕುಟುಂಬ

  ಸೋನಂ ಕಪೂರ್ ಹಾಗೂ ಆನಂದ್ ಅಹುಜಾ ಪ್ರೀತಿಗೆ ಕಪೂರ್ ಕುಟುಂಬ ಒಪ್ಪಿಗೆ ನೀಡಿದ್ಯಂತೆ. ಹಾಗಂತ ಕೆಲ ಪತ್ರಿಕೆಗಳು ವರದಿ ಮಾಡಿವೆ.

  ಸೋನಂ-ಆನಂದ್ ಫೋಟೋಗಳು

  ಸೋನಂ-ಆನಂದ್ ಫೋಟೋಗಳು

  ಆನಂದ್ ಅಹುಜಾ ಜೊತೆಗಿನ ಕೆಲ ಫೋಟೋಗಳನ್ನ ಸ್ವತಃ ಸೋನಂ ಕಪೂರ್ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.

  English summary
  Wedding Bells! Bollywood Actress Sonam Kapoor to get married to Anand Ahuja in June.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X