For Quick Alerts
  ALLOW NOTIFICATIONS  
  For Daily Alerts

  ನೀರ್ಜಾಳ ಯಶಸ್ಸು: ಮಗಳ ಬಗ್ಗೆ ಅಪ್ಪ ಹೇಳಿದ್ದಾದರೂ ಏನು

  By ಸೋನು ಗೌಡ
  |

  ಬಾಲಿವುಡ್ ನ ಸ್ಟಾರ್ ನಟ ಅನಿಲ್ ಕಪೂರ್ ಅವರ ಮಗಳು ಸೋನಂ ಕಪೂರ್ ಅವರು ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದ 'ನೀರ್ಜಾ' ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನ ಕಾಣುತ್ತಾ, ಬಾಕ್ಸಾಫೀಸ್ ನಲ್ಲಿ ಒಳ್ಳೆ ಕಲೆಕ್ಷನ್ ಮಾಡುತ್ತಿದೆ.

  ಬಾಲಿವುಡ್ ಸಿನಿ ಕ್ಷೇತ್ರದಲ್ಲಿ ಒಂದೊಳ್ಳೆ ಬ್ರೇಕ್ ಗಾಗಿ ಕಾಯುತ್ತಿದ್ದ ನಟಿ ಸೋನಂ ಕಪೂರ್ ಅವರಿಗೆ 'ನೀರ್ಜಾ' ಸಿನಿಮಾ ವರದಾನ ಆಗಿದೆ. ಎಲ್ಲರೂ ನಟಿ ಸೋನಂ ಅವರ ನಟನೆಯ ಬಗ್ಗೆ ಹೊಗಳುತ್ತಿದ್ದಾರೆ.

  ಆದರೆ ಯಾರೇನು ಅಂದರೇನಂತೆ ತನ್ನ ತಂದೆಯೇ ಮಗಳ ನಟನೆಯಲ್ಲಿ ಪರಿಪಕ್ವತೆ ಇಲ್ಲ ಆಕೆ ನಟನೆಯಲ್ಲಿ ಈಗಷ್ಟೇ ಅಂಬೆಗಾಲಿಕ್ಕುವ ಕೂಸು, ಆಕೆ ಇನ್ನೂ ಬೆಳೆಯಬೇಕಾಗಿದೆ, ಅಭಿನಯದಲ್ಲಿ ಇನ್ನೂ ಹೆಚ್ಚಿನ ಸುಧಾರಣೆ ಬೇಕಿದೆ ಎಂದು ಬಾಲಿವುಡ್ ನ ಹಿರಿಯ ನಟ ಅನಿಲ್ ಕಪೂರ್ ಅವರು 'ನೀರ್ಜಾ' ಸಿನಿಮಾ ನೋಡಿ ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.['ನೀರ್ಜಾ'ಳ ಫಸ್ಟ್ ಡೇ ಬಾಕ್ಸಾಫೀಸ್ ಕಲೆಕ್ಷನ್ ಎಷ್ಟು ಗೊತ್ತಾ?]

  1986ರಲ್ಲಿ ಪಾಕಿಸ್ತಾನದ ಕರಾಚಿಯಲ್ಲಿ ಉಗ್ರಗಾಮಿಗಳಿಂದ ಹೈಜಾಕ್ ಆದ ಪ್ಯಾನ್ ಆಮ್ 73 ವಿಮಾನದ ಪ್ರಯಾಣಿಕರ ಜೀವ ರಕ್ಷಣೆಗಾಗಿ ತಾನೇ ಉಗ್ರರ ಗುಂಡಿಗೆ ಬಲಿಯಾದ ನೀರ್ಜಾ ಭಾನೊಟ್ ಎಂಬ ದಿಟ್ಟ ಹುಡುಗಿಯ ನಿಜ ಬದುಕಿನ ಸಾಹಸ ಮತ್ತು ಸೈರಣೆಯ ಕಥೆಯನ್ನು ಯಥಾವತ್ತಾಗಿ ತೆರೆಯ ಮೇಲೆ ನಿರ್ದೇಶಕ ರಾಮ್ ಮಧ್ವಾನಿ ಅವರು ತಂದಿದ್ದರು. ಮುಂದೆ ಓದಿ.....

  ನಟನೆ ಎಂಬುದು ಕಲಿಕೆಯ ಸಾಗರ

  ನಟನೆ ಎಂಬುದು ಕಲಿಕೆಯ ಸಾಗರ

  'ನಟ ಅಥವಾ ನಟಿ ಎಂದೆಂದಿಗೂ ವಿದ್ಯಾರ್ಥಿ. ನಟನೆ ಎಂಬುದು ಕಲಿಕೆಯ ಸಾಗರ. ಅದರ ಸಾರವನ್ನು ಸಂಪೂರ್ಣವಾಗಿ ಹೀರಿಕೊಳ್ಳಲು ಸಾಧ್ಯವೇ ಇಲ್ಲ. ಸದಾ ಕಲಿಯುತ್ತಲೇ ಇರಬೇಕು ಮತ್ತು ಮುಂದಿನ ಬಾರಿ ಇನ್ನೂ ಹೆಚ್ಚಿನ ಶ್ರಮವಹಿಸಬೇಕು' ಎಂದು ಸೋನಂ ಅವರ ತಂದೆ ಅನಿಲ್ ಕಪೂರ್ ಅವರು ತಿಳಿಸಿದ್ದಾರೆ.

  'ನೀರ್ಜಾ' ಸಿನಿಮಾದ ಬಗ್ಗೆ

  'ನೀರ್ಜಾ' ಸಿನಿಮಾದ ಬಗ್ಗೆ

  ನೀರ್ಜಾ ಸಿನಿಮಾ ನೋಡಿದ ನಟ ಅನಿಲ್ ಕಪೂರ್ ಅವರು 'ಇಡೀ ಕುಟುಂಬ ಸಿನಿಮಾದ ಬಗ್ಗೆ ಭಾವನಾತ್ಮಕ ಸಂಬಂಧ ಹೊಂದಿದೆ. ಈ ಸಿನಿಮಾವನ್ನು ಸಾಕ್ಷತ್ ನೀರ್ಜಾ ಭಾನೊಟ್ ಅವರೇ ಆಶೀರ್ವದಿಸಿದ್ದಾರೆ ಎಂದೆನಿಸುತ್ತಿದೆ. ಒಂದರ್ಥದಲ್ಲಿ ಸಿನಿಮಾಗೆ ಒಳ್ಳೆ ಹೆಸರು ಬರಲು ಕಾರಣ ಅವರೇ ಆಗಿರಬಹುದು ಎಂದು ನುಡಿದಿದ್ದಾರೆ.

  'ನೀರ್ಜಾ' ಮೊದಲ ದಿನದ ಕಲೆಕ್ಷನ್

  'ನೀರ್ಜಾ' ಮೊದಲ ದಿನದ ಕಲೆಕ್ಷನ್

  ನಟಿ ಸೋನಂ ಕಪೂರ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದ 'ನೀರ್ಜಾ' ಚಿತ್ರದ ಫಸ್ಟ್ ಡೇ ಕಲೆಕ್ಷನ್, ಬರೋಬ್ಬರಿ 4.70 ಕೋಟಿ ರೂಪಾಯಿ. ಸುಮಾರು 700 ಚಿತ್ರಮಂದಿರಗಳಲ್ಲಿ ಕೇವಲ ಲಿಮಿಟೆಡ್ ಪ್ರದರ್ಶನ ಕಂಡು ಫಸ್ಟ್ ಡೇ ಇಷ್ಟು ಕಲೆಕ್ಷನ್ ಮಾಡಿತ್ತು.

  ವೀಕೆಂಡ್ ಕಲೆಕ್ಷನ್

  ವೀಕೆಂಡ್ ಕಲೆಕ್ಷನ್

  ಬಾಲಿವುಡ್ ನಟಿ ಸೋನಂ ಕಪೂರ್, ನಟಿ ಶಬಾನಾ ಅಜ್ಮಿ ಮತ್ತು ಬಾಲಿವುಡ್ ನಟ ಯೋಗೇಂದ್ರರ ಟಿಕ್ಕು ಅವರು ಮುಖ್ಯ ಭೂಮಿಕೆಯಲ್ಲಿ ನಟಿಸಿರುವ 80ರ ದಶಕದ 'ನೀರ್ಜಾ' ಸಿನಿಮಾ ವೀಕೆಂಡ್ ನಲ್ಲಿ ಮಾಡಿದ ಕಲೆಕ್ಷನ್ ಬರೋಬ್ಬರಿ 25.71 ಕೋಟಿ ರೂಪಾಯಿ. ಶುಕ್ರವಾರ 4.70, ಶನಿವಾರ 7.60, ಭಾನುವಾರ 9.71, ಸೋಮವಾರ 3.70. ಒಟ್ಟು 25.71 ಕೋಟಿ ರೂಪಾಯಿ ಭರ್ಜರಿ ಕಲೆಕ್ಷನ್ ಮಾಡಿದೆ.

  English summary
  Bollywood actor Anil Kapoor thinks that his daughter Actress Sonam Kapoor still needs to "improve" a lot.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X