ವಿರಾಟ್ ಪತ್ನಿ ಅನುಷ್ಕಾ ಯಾವುದೇ ಹೊಸ ಸಿನಿಮಾ ಒಪ್ಪುತ್ತಿಲ್ಲ ಯಾಕೆ?
Recommended Video
ಶಾರೂಖ್ ಖಾನ್ ಜೊತೆ ಜೀರೋ ಸಿನಿಮಾ ಮಾಡಿದ್ದ ಅನುಷ್ಕಾ ನಂತರ ಯಾವ ಹೊಸ ಚಿತ್ರವನ್ನ ಒಪ್ಪಿಕೊಳ್ಳುತ್ತಿಲ್ಲವಂತೆ. ಬಹುಶಃ ಇಂಡಸ್ಟ್ರಿಯಿಂದ ಅನುಷ್ಕಾ ದೂರುವಾಗುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
'ಜೀರೋ' ಸಿನಿಮಾ ಅಷ್ಟಾಗಿ ಯಶಸ್ಸು ಕಾಣಲಿಲ್ಲ. ಈ ಚಿತ್ರದ ಬಳಿಕ ಸಿನಿಮಾ ಮಾಡುತ್ತಿಲ್ಲ. ಇದಕ್ಕೆ ಕಾರಣ ಏನು ಎಂಬುದು ಈಗ ಚರ್ಚೆಯಾಗ್ತಿದೆ. ಇದಕ್ಕೆ ಕಾರಣ ವಿರಾಟ್ ಪತ್ನಿ ಈಗ ಗರ್ಭಿಣಿಯಾಗಿದ್ದಾರೆ, ಅದಕ್ಕೆ ಯಾವ ಪ್ರಾಜೆಕ್ಟ್ ಗೂ ಸಹಿ ಮಾಡುತ್ತಿಲ್ಲ ಎನ್ನಲಾಗುತ್ತಿದೆ.
ಈ ವದಂತಿಗಳಿಗೆ ಸ್ವತಃ ಅನುಷ್ಕಾ ಶರ್ಮಾ ಬ್ರೇಕ್ ಹಾಕಿದ್ದಾರೆ. ಯಾಕೆ ತಾನು ಹೊಸ ಸಿನಿಮಾಗಳನ್ನ ಮಾಡುತ್ತಿಲ್ಲ ಎಂಬುದಕ್ಕೆ ಸ್ಪಷ್ಟನೆ ನೀಡಿದ್ದಾರೆ.

''ನಾನು ನಟಿಯಾಗಿ ಏನೂ ಮಾಡಬೇಕಿತ್ತು ಅದನ್ನ ಮಾಡಿದ್ದೇನೆ. ಈಗ ಸುರಕ್ಷತೆಯಲ್ಲಿದ್ದೇನೆ. ಸದ್ಯ ಬೇರೆ ಕೆಲಸಗಳಲ್ಲಿ ಬ್ಯುಸಿಯಾಗಿದ್ದೇನೆ. ಹಾಗಾಗಿ, ಯಾವ ಸಿನಿಮಾ ಮಾಡುತ್ತಿಲ್ಲ'' ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
''ನಾನು ಹಿಂತಿರುಗಿ ನೋಡಿದಾಗ ನನ್ನ ಕೆಲಸದ ಬಗ್ಗೆ ತೃಪ್ತಿ ಹೊಂದಿದ್ದೇನೆ. ವಿಭಿನ್ನವಾದ ಪಾತ್ರಗಳನ್ನ ಆಯ್ಕೆ ಮಾಡಿಕೊಂಡು ನಟಿಸಿದ್ದೇನೆ. ಈ ಬಗ್ಗೆ ನನಗೆ ಸಮಾಧಾನವಿದೆ. ಈಗ ಸ್ವಲ್ಪ ಬೇರೆ ಕೆಲಸಗಳು ನಡೆಯುತ್ತಿದೆ'' ಎಂದು ಹೇಳಿದ್ದಾರೆ.
ಅಲ್ಲಿಗೆ ಸಿನಿಮಾರಂಗದಿಂದ ಅನುಷ್ಕಾ ಶರ್ಮಾ ಸ್ವಲ್ಪ ಮಟ್ಟಿಗೆ ದೂರ ಉಳಿದಿರುವುದು ಖಾತ್ರಿಯಾಗಿದೆ. ಮುಂದಿನ ದಿನಗಳಲ್ಲಿ ಯಾವ ರೀತಿ ಮಾಡ್ತಾರೆ ಅಥವಾ ಮಾಡುವುದಿಲ್ಲವೋ ಕಾದುನೋಡಬೇಕಿದೆ.


Click it and Unblock the Notifications











