For Quick Alerts
  ALLOW NOTIFICATIONS  
  For Daily Alerts

  ಒಂದೇ ದಿನ ಎರಡು ಚಿತ್ರ ಬಿಡುಗಡೆ, ಸ್ಪಷ್ಟನೆ ನೀಡಿದ ಅಕ್ಷಯ್ ಕುಮಾರ್

  |

  ಕೊರೊನಾ ವೈರಸ್ ಪರಿಸ್ಥಿತಿ ಗಮನಿಸಿದರೆ ಸದ್ಯಕ್ಕೆ ಚಿತ್ರಮಂದಿರಗಳು ತೆರೆಯುವುದು ದೂರದ ಮಾತು. ಮೊದಲಿನಂತೆ ಸಹಜ ಸ್ಥಿತಿಗೆ ಮರಳಿದರೆ ಮಾತ್ರ ಥಿಯೇಟರ್‌ನಲ್ಲಿ ಸಿನಿಮಾ ಪ್ರದರ್ಶನ ಕಾಣಲಿದೆ. ಇಲ್ಲವಾದಲ್ಲಿ ಬಹುತೇಕ ಚಿತ್ರಗಳು ಒಟಿಟಿ ಮೊರೆ ಹೋಗಲಿದೆ.

  ಇಂತಹ ಸಂಕಷ್ಟ ಸಂದರ್ಭದಲ್ಲಿ ಅಕ್ಷಯ್ ಕುಮಾರ್ ನಟಿಸಿರುವ ಎರಡು ನಿರೀಕ್ಷೆಯ ಚಿತ್ರಗಳು ಒಂದೇ ದಿನ ತೆರೆಗೆ ಬರಲು ತಯಾರಾಗಿದೆ ಎಂಬ ಸುದ್ದಿ ಬಿಟೌನ್ ಅಂಗಳದಲ್ಲಿ ಚರ್ಚೆಗೆ ಕಾರಣವಾಗಿದೆ. ಅಕ್ಷಯ್ ಪೊಲೀಸ್ ಆಫೀಸರ್ ಆಗಿ ನಟಿಸಿರುವ ಸೂರ್ಯವಂಶಿ ಮತ್ತು ಬೆಲ್ ಬಾಟಮ್ ಚಿತ್ರಗಳು ಏಕಕಾಲಕ್ಕೆ ಪ್ರೇಕ್ಷಕರೆದರು ಬರಬಹುದು ಎಂದು ಹೇಳಲಾಗುತ್ತಿದೆ. ಈ ಕುರಿತು ಅಕ್ಷಯ್ ಕುಮಾರ್ ಈಗ ಸ್ಪಷ್ಟನೆ ನೀಡಿದ್ದಾರೆ. ಮುಂದೆ ಓದಿ...

  ಒಟಿಟಿಗೆ ಬೆಲ್ ಬಾಟಮ್ ಸೇಲ್?

  ಒಟಿಟಿಗೆ ಬೆಲ್ ಬಾಟಮ್ ಸೇಲ್?

  ಈ ಹಿಂದೆಯೇ ಸುದ್ದಿಯಾಗಿರುವಂತೆ ಅಕ್ಷಯ್ ಕುಮಾರ್, ಹುಮಾ ಖುರೇಶಿ, ವಾಣಿ ಕಪೂರ್, ಲಾರಾ ದತ್ತಾ ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಬೆಲ್ ಬಾಟಮ್ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ಸ್ವಾತಂತ್ರ್ಯ ದಿನದ ವಿಶೇಷವಾಗಿ ಬೆಲ್ ಬಾಟಮ್ ಒಟಿಟಿಯಲ್ಲಿ ಪ್ರೀಮಿಯರ್ ಕಾಣಬಹುದು. ಆದ್ರೀಗ, ಅದೇ ದಿನ ಅಕ್ಷಯ್ ನಟಿಸಿರುವ ಮತ್ತೊಂದು ಚಿತ್ರ ಪ್ರೇಕ್ಷಕರೆದುರು ಬರುವ ತಯಾರಿಯಲ್ಲಿದೆ.

  ಅಕ್ಷಯ್ ಕುಮಾರ್ ವಿರುದ್ಧ ಅಕ್ಷಯ್ ಕುಮಾರ್ ಪೈಪೋಟಿಅಕ್ಷಯ್ ಕುಮಾರ್ ವಿರುದ್ಧ ಅಕ್ಷಯ್ ಕುಮಾರ್ ಪೈಪೋಟಿ

  ಚಿತ್ರಮಂದಿರದಲ್ಲಿ ಸೂರ್ಯವಂಶಿ?

  ಚಿತ್ರಮಂದಿರದಲ್ಲಿ ಸೂರ್ಯವಂಶಿ?

  ಈಗಾಗಲೇ ಎರಡ್ಮೂರು ಸಲ ಬಿಡುಗಡೆ ದಿನಾಂಕ ಮುಂದೂಡಿಕೊಂಡಿರುವ ಸೂರ್ಯವಂಶಿ ಸಿನಿಮಾ ರಿಲೀಸ್‌ಗಾಗಿ ತಯಾರಿ ನಡೆಸಿದೆ. ಸದ್ಯ, ಬಿಟೌನ್ ಮಾಧ್ಯಮಗಳು ವರದಿ ಮಾಡಿರುವ ಪ್ರಕಾರ ಬೆಲ್ ಬಾಟಮ್ ಒಟಿಟಿಯಲ್ಲಿ ಪ್ರದರ್ಶನ ಕಾಣುವ ದಿನವೇ ಸೂರ್ಯವಂಶಿ ಚಿತ್ರಮಂದಿರಕ್ಕೆ ಬರುವ ಲೆಕ್ಕಾಚಾರದಲ್ಲಿದೆಯಂತೆ. ಆಗಸ್ಟ್‌ವೊತ್ತಿಗೆ ಕೋವಿಡ್ ಪರಿಸ್ಥಿತಿ ಸಹಜ ಸ್ಥಿತಿಗೆ ಬಂದಿಲ್ಲ ಅಂದ್ರೆ ಚಿತ್ರಮಂದಿರ ಎಂಟ್ರಿ ಕಷ್ಟ.

  ಅಕ್ಷಯ್ ಕುಮಾರ್ ಹೇಳಿದ್ದೇನು?

  ಅಕ್ಷಯ್ ಕುಮಾರ್ ಹೇಳಿದ್ದೇನು?

  ''ಸೂರ್ಯವಂಶಿ ಮತ್ತು ಬೆಲ್ ಬಾಟಮ್ ಚಿತ್ರಗಳ ಬಗ್ಗೆ ನನ್ನ ಅಭಿಮಾನಿಗಳು ಉತ್ಸುಕರಾಗಿರುವುದಕ್ಕೆ ಧನ್ಯವಾದ. ಆದರೆ, ಎರಡೂ ಚಿತ್ರಗಳು ಸ್ವಾತಂತ್ರ್ಯ ದಿನದಂದು ಬಿಡುಗಡೆಯಾಗಲಿವೆ ಎನ್ನುವುದು ಊಹಾಪೋಹ. ನಮ್ಮ ಎರಡೂ ಸಿನಿಮಾದ ನಿರ್ಮಾಪಕರು ರಿಲೀಸ್ ಕುರಿತು ಯೋಜನೆ ರೂಪಿಸುತ್ತಿದ್ದಾರೆ. ಆಮೇಲೆ ಅಧಿಕೃತವಾಗಿ ಘೋಷಣೆ ಮಾಡಲಿದ್ದಾರೆ' ಎಂದು ಅಕ್ಷಯ್ ತಿಳಿಸಿದ್ದಾರೆ.

  ಫ್ಲಾಪ್ ಚಿತ್ರಕ್ಕಾಗಿ ಸೂಪರ್ ಹಿಟ್ ಸಿನಿಮಾ ಕೈ ಬಿಟ್ಟಿದ್ದ ಅಕ್ಷಯ್ ಕುಮಾರ್?ಫ್ಲಾಪ್ ಚಿತ್ರಕ್ಕಾಗಿ ಸೂಪರ್ ಹಿಟ್ ಸಿನಿಮಾ ಕೈ ಬಿಟ್ಟಿದ್ದ ಅಕ್ಷಯ್ ಕುಮಾರ್?

  Shahrukh Khan ಕಷ್ಟದ ದಿನಗಳನ್ನು ಕಣ್ಣಾರೆ ನೋಡಿದ್ದೇನೆ ಎಂದ Manoj Bajpai | Filmibeat Kannada
  ಸಾಲು ಸಾಲು ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್

  ಸಾಲು ಸಾಲು ಸಿನಿಮಾಗಳಲ್ಲಿ ಅಕ್ಷಯ್ ಕುಮಾರ್

  ಸೂರ್ಯವಂಶಿ, ಬೆಲ್ ಬಾಟಮ್ ನಂತರ ಅತ್ರಂಗಿ ರೇ ಸಿನಿಮಾ ರಿಲೀಸ್ ರೆಡಿಯಾಗುತ್ತಿದೆ. 'ರಾಮ್ ಸೇತು' ಸಿನಿಮಾದ ಚಿತ್ರೀಕರಣ ಅಂತಿಮ ಹಂತದಲ್ಲಿದೆ. ಇದರ ಜೊತೆಗೆ 'ಹೇರಾಪೇರಿ 3', 'ಮಹಿಳಾ ಮಂಡಳಿ', 'ಪೃಥ್ವಿರಾಜ್ ಕಪೂರ್', 'ಬಚ್ಚನ್ ಪಾಂಡೆ', 'ರಕ್ಷಾ ಬಂಧನ್', 'ರೌಡಿ ರಾಥೋಡ್ 2' ಸಿನಿಮಾಗಳು ಅಕ್ಷಯ್‌ ಕೈಯಲ್ಲಿವೆ.

  English summary
  Bollywood Superstar Akshay kumar starrer Bell bottom and Suryavanshi movies set to release on independence day.?

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X