For Quick Alerts
  ALLOW NOTIFICATIONS  
  For Daily Alerts

  ಪತ್ನಿಯ ಗಂಭೀರ ಆರೋಪಗಳನ್ನು ತಳ್ಳಿಹಾಕಿದ ಯೋ ಯೋ ಹನಿಸಿಂಗ್

  |

  ಬಾಲಿವುಡ್ ಖ್ಯಾತ ಗಾಯಕ, ಸಂಗೀತ ನಿರ್ದೇಶಕ ಯೋ ಯೋ ಹನಿಸಿಂಗ್ ವಿರುದ್ಧ ಆತನ ಪತ್ನಿ ಶಾಲಿನಿ ತಲ್ವಾರ್ ಕೌಟುಂಬಿಕ ದೌರ್ಜನ್ಯ ಕಾಯ್ದೆ ಅಡಿ ಪೊಲೀಸ್ ದೂರು ದಾಖಲಿಸಿದ್ದರು. ದೂರಿನಲ್ಲಿ ಮಾನಸಿಕ ಕಿರುಕುಳ, ದೈಹಿಕ ಹಲ್ಲೆ ಮಾಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದ್ದರು.

  ಪತ್ನಿಯ ಆರೋಪದ ಬಗ್ಗೆ ಕೊನೆಗೂ ಮೌನ ಮುರಿದಿರುವ ಯೋ ಯೋ ಹನಿಸಿಂಗ್, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕುವ ಮೂಲಕ ಸ್ಪಷ್ಟನೆ ನೀಡಿದ್ದಾರೆ. ''20 ವರ್ಷಗಳಿಂದ ನನ್ನ ಮತ್ತು ನನ್ನ ಕುಟುಂಬದ ಜೊತೆಯಲ್ಲಿರುವ ಪತ್ನಿ ಶಾಲಿನಿ ತಲ್ವಾರ್, ನನ್ನ ವಿರುದ್ಧ ಹೊರಿಸಲಾದ ಸುಳ್ಳು ಮತ್ತು ದುರುದ್ದೇಶಪೂರಿತ ಆರೋಪಗಳಿಂದ ತುಂಬಾ ನೋವು ಮತ್ತು ಸಂಕಟ ತಂದಿದೆ. ಈ ಆರೋಪಗಳು ಅಸಹ್ಯ ತರಿಸಿದೆ'' ಎಂದು ಹನಿಸಿಂಗ್ ಬೇಸರ ವ್ಯಕ್ತಪಡಿಸಿದ್ದಾರೆ.

  ಗಾಯಕ ಯೋ ಯೋ ಹನಿಸಿಂಗ್ ವಿರುದ್ಧ ದೌರ್ಜನ್ಯ ಕೇಸ್ ದಾಖಲಿಸಿದ ಪತ್ನಿಗಾಯಕ ಯೋ ಯೋ ಹನಿಸಿಂಗ್ ವಿರುದ್ಧ ದೌರ್ಜನ್ಯ ಕೇಸ್ ದಾಖಲಿಸಿದ ಪತ್ನಿ

  "ಇಷ್ಟು ವರ್ಷದ ಜೀವನದಲ್ಲಿ ನನ್ನ ಸಾಹಿತ್ಯ, ನನ್ನ ಆರೋಗ್ಯದ ಮೇಲೆ ಕೇಳಿ ಬಂದ ಊಹಾಪೋಹ ಹಾಗೂ ಮಾಧ್ಯಮಗಳಲ್ಲಿ ಪ್ರಸಾರವಾದ ನೆಗೆಟಿವ್ ವಿಷಯಗಳು, ಅನೇಕ ಸಲ ಕಠಿಣ ಟೀಕೆಗಳಿಗೆ ಒಳಗಾಗಿದ್ದರೂ ಇದುವರೆಗೂ ಎಂದಿಗೂ ಸಾರ್ವಜನಿಕವಾಗಿ ನಾನು ಹೇಳಿಕೆ ಅಥವಾ ಮಾಧ್ಯಮ ಪ್ರಕಟಣೆ ನೀಡಿಲ್ಲ. ಆದರೆ ಈ ಸಲ ಬಂದಿರುವ ಆರೋಪಗಳ ಬಗ್ಗೆ ಸುಮ್ಮನಿರಲು ಸಾಧ್ಯವಿಲ್ಲ. ಏಕಂದ್ರೆ, ನನ್ನ ಕಷ್ಟಕಾಲದಲ್ಲಿ ನನ್ನ ಜೊತೆಯಿದ್ದು, ನನಗೆ ಬೆಂಬಲವಾಗಿ ನಿಂತಿದ್ದ ನನ್ನ ತಂಗಿ, ಪೋಷಕರು ವಿರುದ್ಧ ಆರೋಪಗಳ ಬಂದಿದೆ. ಇದೆಲ್ಲವೂ ಅಸಹ್ಯ ಉಂಟು ಮಾಡುತ್ತಿದ್ದು, ಮಾನನಷ್ಟ ಮಾಡುವ ಉದ್ದೇಶ ಹೊಂದಿದೆ'' ಎಂದು ಹನಿಸಿಂಗ್ ತಿಳಿಸಿದ್ದಾರೆ.

  ಪತ್ನಿ ಶಾಲಿನಿ ತಲ್ವಾರ್ ಅವರ ಜೊತೆಗಿನ ಸಂಬಂಧದ ಬಗ್ಗೆಯೂ ಉಲ್ಲೇಖಿಸಿರುವ ಯೋ ಯೋ ಹನಿಸಿಂಗ್, ''ಕಳೆದ ಹದಿನೈದು ವರ್ಷಗಳಿಂದ ನಾನು ಚಿತ್ರೋಧ್ಯಮದಲ್ಲಿದ್ದೇನೆ. ಈ ಅವಧಿಯಲ್ಲಿ ಇಡಿ ದೇಶದ ಕಲಾವಿದರು ಮತ್ತು ತಂತ್ರಜ್ಞರ ಜೊತೆ ಕೆಲಸ ಮಾಡಿದ್ದೇನೆ. ನನ್ನ ಮತ್ತು ನನ್ನ ಪತ್ನಿಯ ಸಂಬಂಧದ ಬಗ್ಗೆ ಎಲ್ಲರಿಗೂ ತಿಳಿದಿದೆ. ದಶಕಗಳ ಈ ಜರ್ನಿಯಲ್ಲಿ ಯಾವಾಗಲೂ ನನ್ನ ಜೊತೆಯಲ್ಲಿದ್ದರು. ನನ್ನ ಅವಿಭಾಜ್ಯ ಅಂಗವಾಗಿ ನಾನು ಭಾಗವಹಿಸಿದ ಕಾರ್ಯಕ್ರಮ, ಸಭೆ-ಸಮಾರಂಭಗಳಲ್ಲಿಯೂ ಪಾಲ್ಗೊಳ್ಳುತ್ತಿದ್ದರು. ಈ ಆರೋಪಗಳನ್ನು ನಾನು ಬಲವಾಗಿ ನಿರಾಕರಿಸುತ್ತೇನೆ. ಇನ್ನು ಈ ಬೆಳವಣಿಗೆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಏಕಂದ್ರೆ ಈ ವಿಷಯ ನ್ಯಾಯಾಲಯದ ಮುಂದಿದೆ'' ಎಂದು ತಿಳಿಸಿದರು.

  ''ಭಾರತ ದೇಶದ ಕಾನೂನು ವ್ಯವಸ್ಥೆ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಆದಷ್ಟೂ ಬೇಗ ಸತ್ಯಾಂಶ ಹೊರಗೆ ಬರಲಿದೆ ಎಂದು ನಾನು ಹೇಳಲು ಬಯಸುತ್ತೇನೆ. ಈ ಆರೋಪಗಳ ಸಂಬಂಧ ನನಗೂ ಉತ್ತರಿಸಲು ನ್ಯಾಯಾಲಯ ಅವಕಾಶ ಕೊಟ್ಟಿದೆ. ಹಾಗಾಗಿ, ನನ್ನ ಅಭಿಮಾನಿಗಳು ಹಾಗೂ ಸಾರ್ವಜನಿಕರು ಈಗಲೇ ನನ್ನ ಕುಟುಂಬದ ಅಂತಿಮ ತೀರ್ಮಾನಕ್ಕೆ ಬರಬೇಡಿ. ಎರಡು ಕಡೆ ವಾದ ಆಲಿಸಿದ ನಂತರ ನ್ಯಾಯಾಲಯ ತೀರ್ಪು ಪ್ರಕಟಿಸುತ್ತದೆ. ನ್ಯಾಯ ಸಿಗುತ್ತದೆ ಮತ್ತು ಪ್ರಾಮಾಣಿಕತೆಗೆ ಗೆಲುವು ಇದೆ ಎಂದು ನಾನು ನಂಬಿದ್ದೇನೆ. ಎಂದಿನಂತೆ ನನ್ನ ಅಭಿಮಾನಿಗಳು ಮತ್ತು ಹಿತೈಷಿಗಳ ಪ್ರೀತಿ ಮತ್ತು ಬೆಂಬಲಕ್ಕಾಗಿ ನಾನು ಕೃತಜ್ಞನಾಗಿದ್ದೇನೆ'' ಎಂದು ಪೋಸ್ಟ್‌ನಲ್ಲಿ ವಿವರವಾಗಿ ಹೇಳಿದ್ದಾರೆ.

  Yo Yo Honey Singh React over his wife’s allegations against him

  ಗಾಯಕ ಹನಿ ಸಿಂಗ್ ವಿರುದ್ಧ ದೆಹಲಿ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿರುವ ಪತ್ನಿ ಶಾಲಿನಿ ತಲ್ವಾರ್, ತನ್ನ ಪತಿ ವಿರುದ್ದ ಕೌಟುಂಬಿಕ ದೌರ್ಜನ್ಯ, ಲೈಂಗಿಕ ದೌರ್ಜನ್ಯ, ಮಾನಸಿಕ ಕಿರುಕುಳ ಹಾಗೂ ಆರ್ಥಿಕ ಹಿಂಸೆಯ ಆರೋಪ ಮಾಡಿದ್ದಾರೆ. ಶಾಲಿನಿ ತಲ್ವಾರ್ ಅರ್ಜಿ ವಿಚಾರಣೆ ಮಾಡಿದ ದೆಹಲಿಯ ತಿಸ್ ಹಜಾರಿ ನ್ಯಾಯಾಲಯದ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಶ್ರೀಮತಿ ತಾನಿಯಾ ಸಿಂಗ್ ಅವರು ಆಗಸ್ಟ್ 28ರೊಳಗೆ ಉತ್ತರ ನೀಡಬೇಕು ಎಂದು ಹನಿಸಿಂಗ್‌ಗೆ ನೋಟಿಸ್ ಜಾರಿ ಮಾಡಿದೆ.

  ಬಾಲಿವುಡ್‌ನಲ್ಲಿ ನಟನೆ ಆರಂಭಿಸುವುದಕ್ಕೆ ಮುಂಚೆಯೇ ಯೋ ಯೋ ಹನಿಸಿಂಗ್ ಮದುವೆ ಅಗಿರುವ ಬಗ್ಗೆ ಬಹಳಷ್ಟು ಜನರಿಗೆ ತಿಳಿದಿರಲಿಲ್ಲ. ಆದರೆ, 2014ರ ಇಂಡಿಯಾ'ಸ್ ರಾಸ್ಟಾರ್ ರಿಯಾಲಿಟಿ ಶೋನಲ್ಲಿ ಪ್ರಪ್ರಥಮ ಬಾರಿಗೆ ಸಾರ್ವಜನಿಕವಾಗಿ ತಮ್ಮ ಪತ್ನಿಯನ್ನು ಪರಿಚಯಿಸುವ ಮೂಲಕ ಅಚ್ಚರಿ ನೀಡಿದ್ದರು. ಇದೀಗ, ಹನಿಸಿಂಗ್ ದಾಂಪತ್ಯ ಕಲಹ ಬೀದಿಗೆ ಬಂದಿದೆ.

  English summary
  Rape Singer, Music composer Yo Yo Honey Singh react over his wife’s allegations against him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X