ಅಕ್ಷಯ್ ಕುಮಾರ್ ಗೆ ಕಾನೂನು ಕ್ರಮದ ಬೆದರಿಕೆ ಹಾಕಿದ ಯೂಟ್ಯೂಬರ್

ನಟ ಅಕ್ಷಯ್ ಕುಮಾರ್ ಕೆಲವು ದಿನಗಳ ಹಿಂದಷ್ಟೆ ಬಿಹಾರದ ಯೂಟ್ಯೂಬರ್ ಒಬ್ಬರ ಮೇಲೆ ಬರೋಬ್ಬರಿ 500 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ನಟ ಅಕ್ಷಯ್ ವಿರುದ್ಧ ಆಧಾರರಹಿತವಾಗಿ ಸುಳ್ಳು ಆರೋಪಗಳನ್ನು ಹೊರಿಸಿ, ಅಕ್ಷಯ್ ಕುಮಾರ್ ಬಗ್ಗೆ ಸುಳ್ಳು ಸುದ್ದಿಗಳನ್ನು ಬಿತ್ತರಿಸಿದ ಕಾರಣಕ್ಕೆ ಅಕ್ಷಯ್ ಈ ಮೊಕದ್ದಮೆ ಹೂಡಿದ್ದರು.

ಅಕ್ಷಯ್ ಕುಮಾರ್ ಮೊಕದ್ದಮೆಗೆ ಪ್ರತಿಯಾಗಿ ಹೇಳಿಕೆ ನೀಡಿರುವ ಯೂಟ್ಯೂಬರ್ ರಶೀದ್ ಸಿದ್ಧಿಕಿ, ಅಕ್ಷಯ್, ಕೂಡಲೇ ಆ ಮೊಕದ್ದಮೆಯನ್ನು ಹಿಂಪಡೆಯದಿದ್ದರೆ ತಾನು ಅಕ್ಷಯ್ ವಿರುದ್ಧ ಕಾನೂನು ಮೊರೆ ಹೋಗುತ್ತೇನೆ ಎಂದು ಬೆದರಿಸಿದ್ದಾನೆ.

ರಿಯಾ ಚಕ್ರವರ್ತಿ ಪರಾರಿಯಾಗಲು ಅಕ್ಷಯ್ ನೆರವು?!

ರಿಯಾ ಚಕ್ರವರ್ತಿ ಪರಾರಿಯಾಗಲು ಅಕ್ಷಯ್ ನೆರವು?!

ಎಫ್‌ಎಫ್‌ ನ್ಯೂಸ್ ಹೆಸರಿನ ಯೂಟ್ಯೂಬ್ ಚಾನೆಲ್ ನಡೆಸುತ್ತಿರುವ ಬಿಹಾರದ ಯೂಟ್ಯೂಬರ್ ರಶೀದ್ ಸಿದ್ಧಿಕಿ, ಸುಶಾಂತ್ ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕಷ್ಟು ಸುಳ್ಳು ಸುದ್ದಿಗಳನ್ನು ಹರಿಬಿಟ್ಟಿದ್ದ. ಪ್ರಕರಣದ ಆರೋಪಿ ರಿಯಾ ಚಕ್ರವರ್ತಿ ಕೆನಡಾಕ್ಕೆ ಪರಾರಿಯಾಗಲು ಅಕ್ಷಯ್ ಕುಮಾರ್ ಸಹಕರಿಸಿದ್ದಾರೆ ಎಂದು ಆತ ಸುದ್ದಿ ಬಿತ್ತಿರಿಸಿದ್ದ.

500 ಕೋಟಿ ಮಾನನಷ್ಟ ಮೊಕದ್ದಮೆ

500 ಕೋಟಿ ಮಾನನಷ್ಟ ಮೊಕದ್ದಮೆ

ಇದು ಅಕ್ಷಯ್ ಕಣ್ಣು ಕೆಂಪಗೆ ಮಾಡಿತ್ತು, ಹಾಗಾಗಿ ರಶೀದ್ ಸಿದ್ಧಿಕಿ ವಿರುದ್ಧ ಅಕ್ಷಯ್ ಕುಮಾರ್ ಬರೋಬ್ಬರಿ 500 ಕೋಟಿ ರೂಪಾಯಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ್ದರು. ಇದಕ್ಕೆ ಈಗ ರಶೀದ್ ತನ್ನ ವಕೀಲರ ಮೂಲಕ ಉತ್ತರ ನೀಡಿದ್ದಾನೆ.

'ದುರುದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸಿದ್ದಾರೆ'

'ದುರುದ್ದೇಶಪೂರ್ವಕವಾಗಿ ಪ್ರಕರಣ ದಾಖಲಿಸಿದ್ದಾರೆ'

'ಅಕ್ಷಯ್ ಕುಮಾರ್, ಪ್ರಭಾವಿ ರಾಜಕಾರಣಿಯೊಬ್ಬರ ಸಂದರ್ಶನ ಮಾಡಿದ ಬಳಿಕ ಸಾಕಷ್ಟು ಟೀಕೆಗೆ ಒಳಗಾಗಿದ್ದರು. ಸಾಕಷ್ಟು ವೈಯಕ್ತಿಕ ಟೀಕೆಗಳು ಸಹ ಅವರ ವಿರುದ್ಧ ಕೇಳಿಬಂದಿತ್ತು. ಆದರೆ ಅವುಗಳನ್ನೆಲ್ಲಾ ಬಿಟ್ಟು ರಶೀದ್ ಮೇಲೆಯೇ ಅಕ್ಷಯ್ ಮೊಕದ್ದಮೆ ಹೂಡಿರುವುದು ದುರುದ್ಧೇಶಪೂರ್ವಕ' ಎಂದು ರಶೀದ್ ವಕೀಲ ಉತ್ತರ ನೀಡಿದ್ದಾರೆ.

Recommended Video

6 ತಿಂಗಳು ಲಾಕ್ ಡೌನ್ ನಲ್ಲಿ ಶಿವಣ್ಣ ಏನ್ ಮಾಡಿದ್ರು ಗೊತ್ತಾ? | Shivanna | Filmibeat Kannada
ಮತ್ತೊಂದು ಪ್ರಕರಣ ದಾಖಲಿಸಿದ ಮುಂಬೈ ಪೊಲೀಸರು

ಮತ್ತೊಂದು ಪ್ರಕರಣ ದಾಖಲಿಸಿದ ಮುಂಬೈ ಪೊಲೀಸರು

ಇದನ್ನು ಹೊರತಾಗಿ ಮುಂಬೈ ಪೊಲೀಸರು ಸಿದ್ಧಿಕಿ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ. ಮುಂಬೈ ಪೊಲೀಸರು, ಮಹಾರಾಷ್ಟ್ರ ಸರ್ಕಾರ, ಸಚಿವ ಆದಿತ್ಯ ಠಾಕ್ರೆ ವಿರುದ್ಧ ಉದ್ದೇಶಪೂರ್ವಕ ಸುಳ್ಳು ಸುದ್ದಿ ಪ್ರಕಟಿಸಿದ್ದಕ್ಕೆ ಈ ದೂರು ದಾಖಲಿಸಿಕೊಳ್ಳಲಾಗಿದೆ. ಈ ಹಿಂದೆಯೂ ಒಮ್ಮೆ ರಶೀದ್, ಸುಳ್ಳು ಸುದ್ದಿ ಪ್ರಕಟಿಸಿದ್ದಕ್ಕೆ ಬಂಧನಕ್ಕೆ ಒಳಗಾಗಿದ್ದ.

More from Filmibeat

English summary
You tuber Rashid said if Akshay Kumar did not take back his defamation case, he will take legal action against him.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X