ಅನಸೂಯ ಭಾರದ್ವಾಜ ತೆಲಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ ಮತ್ತು ನಿರೂಪಕಿ. ಹೈದರಾಬಾದಿನಲ್ಲಿ ಜನಿಸಿದ ಇವರು ಎಂಬಿಎ ಪದವಿ ಪಡೆದು ಕೆಲ ಕಾಲ ಒಂದು ಕಂಪನಿಯಲ್ಲಿ ಹೆಚ್.ಆರ್ ಆಗಿ ಕಾರ್ಯ ನಿರ್ವಹಿಸಿದರು. ನಂತರ ಸಾಕ್ಷಿ ಟಿವಿಯಲ್ಲಿ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿದರು. ನಂತರ ತೆಲುಗಿನ ಜಬರ್ ದಸ್ತ್ ಕಾರ್ಯಕ್ರಮದಿಂದ ಪ್ರಸಿದ್ಧರಾದರು.
2016 ರಲ್ಲಿ ತೆರೆಕಂಡ `ಸೊಗ್ಗಡೆ ಚಿನ್ನಿ ನಾಯನಾ' ಚಿತ್ರದಿಂದ ಪೋಷಕ ನಟಿಯಾಗಿ ಅಭಿನಯ ಆರಂಭಿಸಿದ ಇವರು ಅದೆ ವರ್ಷ ತೆರೆಕಂಡ `ಕ್ಷಣಂ' ಚಿತ್ರದ ನಟನೆಗಾಗಿ ಐಫಾ ಪ್ರಶಸ್ತಿ ಪಡೆದರು. ರಾಮಚರಣ್ ತೇಜಾ ನಟಿಸಿದ ರಂಗಸ್ಥಳ ಚಿತ್ರದ ರಂಗಮ್ಮತ್ತೆ ಪಾತ್ರ ಇವರಗೆ ತುಂಬಾ ಖ್ಯಾತಿ ಕೊಟ್ಟಿತು.