ಅಂಥೋನಿ ದಾಸನ್ ತಮಿಳು ಚಿತ್ರರಂಗದ ಪ್ರಸಿದ್ಧ ಹಿನ್ನಲೆ ಗಾಯಕ. ತಮಿಳು ಜಾನಪದ ಗೀತೆಗಳಿಗೂ ಹೆಸರುವಾಸಿಯಾಗಿದ್ದಾರೆ. ಹಿನ್ನಲೆ ಗಾಯಕನಾಗಿ ಚಿತ್ರರಂಗಕ್ಕೂ ಬರುವ ಮುಂಚೆ ಕೆಲ ಗುಂಪುಗಳ ಜೊತೆ ಸೇರಿ ಜಾತ್ರೆಗಳಲ್ಲಿ ಹಾಡುತ್ತಾ ಊರೂರು ಸಂಚರಿಸುತ್ತಿದ್ದರು.
ಕನ್ನಡದಲ್ಲಿ ಶಿವರಾಜಕುಮಾರ್ ರವರ ಟಗರು ಚಿತ್ರದ ಗೀತೆಯಿಂದ ಪ್ರಸಿದ್ಧಿ ಪಡೆದರು. ನಂತರ ಅಯೋಗ್ಯ, ಲಂಕೆ, ಸಲಗ ಮುಂತಾದ ಚಿತ್ರಗಳ ಗೀತೆಗಳಿಗೆ ಧ್ವನಿಯಾಗಿದ್ದಾರೆ.