X
ಆಶಿಕಾ ರಂಗನಾಥ್
Actress/Actor

ಆಶಿಕಾ ರಂಗನಾಥ್ ಜೀವನ ಚರಿತ್ರೆ


ಕನ್ನಡ ಚಿತ್ರರಂಗದಲ್ಲಿ ಮಿಲ್ಕ್ ಬ್ಯೂಟಿ ಎಂದೇ ಖ್ಯಾತಿಯಾಗಿರುವ ಆಶಿಕಾ ರಂಗನಾಥ್ ಚಂದನವನದ ಪ್ರತಿಭಾನ್ವಿತ ನಟಿ. ಇವರು 1996ರ ಆಗಸ್ಟ್  5ರಂದು ಹಾಸನದಲ್ಲಿ ಜನಿಸಿದರು. ಇವರ ತಂದೆ ರಂಗನಾಥ್ ಸಿವಿಲ್ ಕಾಂಟ್ರಾಕ್ಟರ್ ಮತ್ತು ತಾಯಿ ಸುಧಾ ಗೃಹಿಣಿ. ಆಶಿಕಾ ಸಹೋದರಿ ಅನು‍ಷಾ ಕನ್ನಡ ಕಿರುತೆರೆಯಲ್ಲಿ ಸಕ್ರಿಯರಾಗಿದ್ದಾರೆ. 

ತುಮಕೂರಿನಲ್ಲಿ ಬೆಳೆದ ಆಶಿಕಾ, ಪಿಯುಸಿ ಶಿಕ್ಷಣಕ್ಕೆ ಬೆಂಗಳೂರಿಗೆ ಬಂದರು. ನಂತರ ಕೋರಮಂಗಲದ ಜ್ಯೋತಿ ನಿವಾಸ ಕಾಲೇಜಿನಲ್ಲಿ ಪಿಯು ಮುಗಿಸಿ, MES ಕಾಲೇಜಿನಿಂದ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದರು. ಹಲವು ನೃತ್ಯ ಪ್ರಕಾರಗಳಲ್ಲಿ ಪರಿಣಿತಿ ಹೊಂದಿರುವ ಆಶಿಕಾ, ಬಾಲ್ಯದಿಂದಲೂ ಹಲವು ನೃತ್ಯ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ವಿಜೇತರಾಗಿದ್ದಾರೆ. ಇವರು 2014ರಲ್ಲಿ ಜರುಗಿದ `ಕ್ಲೀನ್ ಆಂಡ್ ಕ್ಲಿಯರ್ ಫ್ರೇಶ್ ಪೇಸ್' ಸ್ಪರ್ಧೆಯಲ್ಲಿ ಭಾಗವಹಿಸಿ ರನ್ನರ್-ಅಪ್ ಆಗಿದ್ದರು.

ಸಿನಿಜೀವನ
2016ರಲ್ಲಿ ನಿರ್ದೇಶಕ ಮಹೇಶ್ ಬಾಬು ಇವರನ್ನು ತಮ್ಮ 'ಕ್ರೇಜಿ ಬಾಯ್' ಚಿತ್ರದ ಮೂಲಕ ಚಂದನವನಕ್ಕೆ ಪರಿಚಯಿಸಿದರು. ನಂತರ ಮಾಸ್ ಲೀಡರ್, ಮುಗಳು ನಗೆ, ರಾಜು ಕನ್ನಡ ಮೀಡಿಯಂ ಮುಂತಾದ ಚಿತ್ರಗಳಲ್ಲಿ ನಟಿಸಿ ಮುನ್ನೆಲೆಗೆ ಬಂದರು. 2018ರಲ್ಲಿ ಆಶಿಕಾ ಮತ್ತು ಶರಣ್ ಕಾಂಬಿನೇಷನ್‌ನಲ್ಲಿ ಬಂದ 'ರ‍್ಯಾಂಬೋ 2' ಚಿತ್ರ ಅಭೂತಪೂರ್ವ ಪ್ರದರ್ಶನ ಕಂಡಿತು. ಈ ಚಿತ್ರದ `ಚುಟು ಚುಟು' ಹಾಡು ಯ್ಯೂಟ್ಯೂಬ್‌ನಲ್ಲಿ ಅತಿ ಹೆಚ್ಚು ವೀಕ್ಷಣೆ ಕಂಡ ಕನ್ನಡದ ಹಾಡುಗಳಲ್ಲೊಂದು. 

ಈ ಚಿತ್ರದ ನಟನೆಗಾಗಿ ಆಶಿಕಾ ಫಿಲ್ಮೀಬೀಟ್ ಅತ್ಯುತ್ತಮ ನಾಯಕಿ ಪ್ರಶಸ್ತಿ ಪಡೆದರು. ಸದ್ಯ ತೆಲುಗು ಚಿತ್ರರಂಗದಲ್ಲಿ ಮಿಂಚುತ್ತಿರುವ ಆಶಿಕಾ, ಕನ್ನಡ ಮಾತ್ರವಲ್ಲದೇ ಟಾಲಿವುಡ್‌ನಲ್ಲೂ ಅಪಾರ ಜನಪ್ರಿಯತೆ ಗಳಿಸಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+