X
ಅಶ್ವಿನಿ ಗೌಡ
Actress

ಅಶ್ವಿನಿ ಗೌಡ ಜೀವನ ಚರಿತ್ರೆ

ಅಶ್ವಿನಿ ಗೌಡ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ, ನಿರ್ಮಾಪಕಿ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಪ್ರಮುಖ ಕಾರ್ಯದರ್ಶಿ. ಇವರು ಕನ್ನಡಪರ ಹೋರಾಟಗಳಿಂದ ಗುರುತಿಸಿಕೊಂಡಿದ್ದಾರೆ. ಜೊತೆಗೆ ಇವರು ಎ.ಎಂ.ಜಿ ಪ್ರೊಡಕ್ಷನ್ ಹೌಸ್ ಹೊಂದಿದ್ದಾರೆ. 


ವೃತ್ತಿಜೀವನ

ಕನ್ನಡ ಕಿರುತೆರೆಯಲ್ಲಿ ಅಶ್ವಿನಿ ನಕ್ಷತ್ರ, ಮಹಾಪರ್ವ ಸೇರಿದಂತೆ ಸುಮಾರು 15ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿರುವ ಅಶ್ವಿನಿ ಗೌಡ, ಚಡ್ಡಿ ದೋಸ್ತ್, ರಾಜಾಹುಲಿ, ಹ್ಯಾಪಿ ಬರ್ತಡೇ ಸೇರಿದಂತೆ ಸುಮಾರು 45ಕ್ಕೂ ಚಿತ್ರಗಳಲ್ಲಿ ನಟಿಸಿದ್ದಾರೆ. ರಾಜಾಹುಲಿ ಚಿತ್ರದಲ್ಲಿ ಯಶ್ ಅತ್ತೆ ಮಗಳ ಪಾತ್ರದಿಂದ ಗಮನ ಸೆಳೆದಿದ್ದರು.


2019ರಲ್ಲಿ ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾದ ರೋಗಿಗಳು ದೃಷ್ಟಿ ಕಳೆದುಕೊಂಡ ಬಗ್ಗೆ ದೂರು ಬಂದಾಗ ಕರವೇ ಮೂಲಕ ಪ್ರತಿಭಟನೆ ಮಾಡಿ ಭಾಷಾ ಸಮಸ್ಯೆಯಿಂದ ಉಂಟಾಗುವ ತೊಂದರೆಗಳ ಬಗ್ಗೆ ಮಾತಾನಾಡಿದ್ದರು. ನಂತರ ವೈದ್ಯರ ಪ್ರತಿಭಟನೆಯಿಂದ ರೋಗಿಗಳಿಗೆ ತೊಂದರೆಯಾದ ಕಾರಣ ಕರವೇ ಕಾರ್ಯಕರ್ತರ ಜೊತೆ ವಿ.ವಿ.ಪುರಂ ಪೊಲೀಸ್ ಠಾಣೆಯಲ್ಲಿ  ಸ್ವಯಿಚ್ಚೆಯಿಂದ ಶರಣಾಗಿದ್ದರು. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+