ಕುಂದಾಪುರ ಮೂಲದ ಧನರಾಜ್ ಕನ್ನಡ ಚಿತ್ರರಂಗದಲ್ಲಿ ವಾಯ್ಸ್ ಓವರ್ ಆರ್ಟಿಸ್ಟ್ ಮತ್ತು ಡಬ್ಬಿಂಗ್ ಆರ್ಟಿಸ್ಟ್ ಆಗಿ ಸಕ್ರಿಯವಾಗಿದ್ದಾರೆ. ಹಲವಾರು ಬಗೆಯಲ್ಲಿ ಮಿಮಿಕ್ರಿ ಮಾಡುವ ಇವರು ಕೆಲವು ಕಾರ್ಟೂನ್‌ಗಳಿಗೂ ಧ್ವನಿ ನೀಡಿದ್ದಾರೆ. ಯಶ್ ಕೆ.ಜಿ.ಎಫ್ ಚಿತ್ರದ ಒಂದು ಪಾತ್ರಕ್ಕೂ ಕೂಡ ಧನರಾಜ್ ವಾಯ್ಸ್ ನೀಡಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 6
ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗ್ ಬಾಸ್ ಸೀಸನ್ 6 ರಲ್ಲಿ 17 ಸ್ಪರ್ಧಿಗಳ ಜೊತೆಗೆ ಇವರು ಭಾಗವಹಿಸಿದ್ದಾರೆ. ತಮ್ಮ ಮಾತನ್ನೇ ಬಂಡವಾಳ ಮಾಡಿಕೊಂಡಿರುವ ಇವರು ಶಿವರಾಜಕುಮಾರ್ ಬಿಗ್‌ಬಾಸ್ ಮನೆಗೆ ಬಂದಾಗ ಅಚ್ಚು ಅವರಂತೆ ಮಿಮಿಕ್ರಿ ಮಾಡಿ ಅವರನ್ನು ರಂಜಿಸಿದರು. ಶಿವಣ್ಣನ ಜನ್ಮದಿನದಂದೇ ಧನರಾಜ್ ಹುಟ್ಟಿದ ದಿನ ಕೂಡ.
ಬಿಗ್‌ಬಾಸ್ 6ನೇ ಸೀಸನ್ ಸ್ಪರ್ಧಿಗಳು