X
ದುನಿಯಾ ಸೂರಿ
Director/Lyricst/Producer

ದುನಿಯಾ ಸೂರಿ ಜೀವನ ಚರಿತ್ರೆ

ದುನಿಯಾ ಸೂರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಿರ್ದೇಶಕ ಮತ್ತು ನಿರ್ಮಾಪಕ. ಬಾಲ್ಯದಿಂದಲೇ ಚಿತ್ರರಂಗದಲ್ಲಿ ಕೆಲಸ ಮಾಡಬೇಕೆಂದು ಆಸೆಯಿದ್ದ ಸೂರಿ ಬೆಂಗಳೂರಿನ ಕಲಾಮಂದಿರ ಶಿಕ್ಷಣ ಸಂಸ್ಥೆಯಲ್ಲಿ ದೃಶ್ಯ ಕಲಾ ಮಾಧ್ಯಮದಲ್ಲಿ ಪದವಿ ಪಡೆದರು.

 

ಚಿತ್ರರಂಗಕ್ಕೂ ಬರುವ ಮುನ್ನ ಕಿರುತೆರೆ ಮತ್ತು ಸಾಕ್ಷ್ಯಚಿತ್ರಗಳ ದೃಶ್ಯ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಸೂರಿ 2007 ರಲ್ಲಿ ತೆರೆಕಂಡ `ದುನಿಯಾ' ಚಿತ್ರದಿಂದ ನಿರ್ದೇಶಕರಾಗಿ ಸಿನಿಪಯಣ ಆರಂಭಿಸಿದರು. ಈ ಚಿತ್ರ ಅದ್ಭುತ ಯಶಸ್ಸು ಪಡೆದು ಸಂಭಾಷಣೆ ವಿಭಾಗದಲ್ಲಿ ಕರ್ನಾಟಕ ರಾಜ್ಯ ಪ್ರಶಸ್ತಿ ಪಡೆಯಿತು. ಈ ಚಿತ್ರದ ಮೂಲಕ ಸೂರಿ ದುನಿಯಾ ಸೂರಿಯಾದರು. ನಂತರ `ಇಂತಿ ನಿನ್ನ ಪ್ರೀತಿಯ' ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದರು.

 

ತದನಂತರ ತೆರೆಗೆ ಬಂದ `ಜಂಗ್ಲೀ',`ಜಾಕಿ' ಚಿತ್ರಗಳು ಒಳ್ಳೆಯ ಪ್ರದರ್ಶನ ಕಂಡವು. ಮತ್ತೆ ಪುನೀತ್ ಜೊತೆ ಒಂದಾದ ಸೂರಿ `ಅಣ್ನಾ ಬಾಂಡ್',`ದೊಡ್ಮನೆ ಹುಡುಗ' ಚಿತ್ರಗಳನ್ನು ನಿರ್ದೇಶಿಸಿದರು.2018 ರಲ್ಲಿ ಶಿವಣ್ಣ-ಸೂರಿ ಕಾಂಬಿನೇಶನ್‌ನಲ್ಲಿ ಮೂಡಿಬಂದ `ಟಗರು' ಅದ್ಭುತ ಪ್ರದರ್ಶನ ಕಂಡಿದೆ.

2010 ರಲ್ಲಿ ತಮ್ಮ ಬಹುಕಾಲದ ಗೆಳತಿ ಪಲ್ಲವಿಯವರನ್ನು ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಮದುವೆಯಾದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+