ರಾಮಚಂದ್ರ ರಾಜು ಕನ್ನಡ, ತೆಮಿಳು, ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಖ್ಯಾತ ಖಳನಟ. ಇವರು 1980 ಜುಲೈ 7ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು 2018ರಲ್ಲಿ ತೆರೆಕಂಡ ಕೆಜಿಎಫ್ ಸಿನಿಮಾದಲ್ಲಿ ಕೆಜಿಎಫ್ ಚಿನ್ನದ ಮಾಫಿಯಾದ ದೊರೆ ಸೂರ್ಯವರ್ಧನ್ ಹಿರಿಯ ಪುತ್ರ ಗರುಡ ಪಾತ್ರದಲ್ಲಿ ನಟಿಸುವ ಮೂಲಕ 'ಗರುಡ ರಾಮ್' ಎಂಬ ಹೆಸರು ಪಡೆದರು.
ಆರಂಭಿಕ ಜೀವನ
ಗರುಡ ರಾಮ್ ನಟರಾಗಬೇಕೆಂಬ ಕನಸ್ಸು ಕಂಡವರಲ್ಲ. ಬದಲಿಗೆ ರಾಕಿಂಗ್ ಸ್ಟಾರ್ ಯಶ್ ಅವರ ಬಾಡಿಗಾರ್ಡ್ ಹಾಗೂ ಕಾರು ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರು. ಯಸ್ ಅವರನ್ನು ಕಾರಿನಲ್ಲಿ ಎಲ್ಲಡೆ ಕರೆದೊಯ್ಯುತ್ತಿದ್ದ ರಾಮಚಂದ್ರ ರಾಜು ಅವರಿಗೆ ಈ ಸಂದರ್ಭ ನಟನಾಗಬೇಕೆಂಬ ಕನಸು ಚಿಗುರೊಡೆದಿತ್ತು. ಆ ಕನಸು ನನಸಾಗಿದ್ದು ಪ್ರಶಾಂತ್ ನೀಲ್ ಅವರ ಕೆಜಿಎಫ್ ಸಿನಿಮಾದ ಸ್ಕ್ರಿಪ್ಟ್ ಚರ್ಚೆಯಲ್ಲಿ. ಈ ವೇಳೆ ಕೆಜಿಎಫ್‌ನಲ್ಲಿ ಯಶ್‌ಗೆ ಎದುರಾಳಿಯಾಗಿ ವಿಭಿನ್ನ ಲುಕ್‌ನ ವಿಲನ್ ಅಗತ್ಯವಿತ್ತು. ಈ ಸಂದರ್ಭ ಪ್ರಶಾಂತ್ ನೀಲ್ ದಿಢೀರ್ ಅಂತ ರಾಮಚಂದ್ರ ರಾಜು ಅವರನ್ನೇ ವಿಲನ್ ಆಗಿ ಆಯ್ಕೆ ಮಾಡಿಕೊಂಡರು. ಅದಕ್ಕಾಗಿ ಒಂದು ವರ್ಷಗಳ ಕಾಲ ತರಬೇಇ ನೀಡಿ, ಜಿಮ್‌ಗೆ ಕಳುಹಿಸಿದ್ದರು. ಇದಕ್ಕೂ ಮುನ್ನ 12 ವರ್ಷಗಳ ಕಾಳ ಇವರು ಯಶ್ ಬಳಿ ಕೆಲಸ ಮಾಡಿದ್ದರು.
ಕೆಜಿಎಫ್
ರಾಮಚಂದ್ರ ರಾಜು ಕೆಜಿಎಫ್ ಸಿನಿಮಾದಲ್ಲಿ ಕೆಜಿಎಫ್ ಚಿನ್ನದ ಮಾಫಿಯಾದ ದೊರೆ ಸೂರ್ಯವರ್ಧನ್ ಹಿರಿಯ ಪುತ್ರ ಗರುಡ ಪಾತ್ರದ ಖಡಕ್ ಲುಕ್‌ನಿಂದಾಗಿ ಎಲ್ಲರ ಗಮನ ಸೆಳೆದರು. ಹೆಚ್ಚು ಡೈಲಾಗ್ ಇಲ್ಲದೇ ಹೋದರೂ, ತಮ್ಮ ವಾಕಿಂಗ್ ಸ್ಟೈಲ್, ಭಯಂಕರವಾದ ಕಣ್ಣುಗಳ ಮೂಲಕ ಸಿನಿರಸಿಕರ ಮನಗೆದ್ದರು. ಈ ಸಿನಿಮಾ ಬಳಿಕ 'ಗರುಡ ರಾಮ್, ಅಂತಲೇ ಜನಪ್ರಿಯರಾದರು.
ಸದ್ಯ ಪರಭಾಷಾ ಸಿನಿಮಾಗಳಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ಗರುಡ ರಾಮ್, ತಮಿಳು ನಟರಾದ ಕಾರ್ತಿ, ಜಯಂ ರವಿ, ಮಲಯಾಳಂ ನಟ ಮೋಹನ್‌ಲಾಲ್, ಪ್ರಭಾಸ್ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.