X
ಗೀತು ಮೋಹನ್‌ದಾಸ್
Director

ಗೀತು ಮೋಹನ್‌ದಾಸ್ ಜೀವನ ಚರಿತ್ರೆ

ಗೀತು ಮೋಹನ್‌ದಾಸ್ ಮಲಯಾಳಂ ಚಿತ್ರರಂಗ ಖ್ಯಾತ ನಿರ್ದೇಶಕಿ ಮತ್ತು ನಟಿ.  ಗೀತು ಮೋಹನ್ ಅವರ ಮೂಲ ಹೆಸರು ಗಾಯಿತ್ರಿ ದಾಸ್. ಇವರು 1981ರ ಜೂನ್ 8ರಂದು ಕೇರಳದ ಕೊಚ್ಚಿಯಲ್ಲಿ ಜನಿಸಿದರು. ಮನೆಯವರು ಇವರನ್ನು ಪ್ರೀತಿಯಿಂದ ಗೀತು ಎಂದು ಕರೆಯುತ್ತಿದ್ದರು. ಅದೇ ಹೆಸರು ಚಿತ್ರರಂಗದಲ್ಲೂ ಮುಂದುವರೆಯಿತು. 


ಬಾಲನಟಿ

ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟ ಗೀತು ಮೋಹನದಾಸ್, 1986ರಲ್ಲಿ ತೆರೆಕಂಡ ಮೋಹನ್‌ದಾಸ್ ಮುಖ್ಯಪಾತ್ರದಲ್ಲಿ ನಟಿಸಿದ್ದ 'ಒನ್ನು ಮುತ್ತಲ್ ಪೂಜಯಂ ವರೆ' ಚಿತ್ರದಲ್ಲಿ ಅಭಿನಯಿಸಿ, 'ಅತ್ಯುತ್ತಮ ಬಾಲನಟಿ' ರಾಜ್ಯ ಪ್ರಶಸ್ತಿ ಪಡೆದಿದ್ದರು. ನಂತರ ಹಲವು ಸಿನಿಮಾಗಳಲ್ಲಿ ಬಾಲನಟಿಯಾಗಿ ಮಿಂಚಿದರು. 1988ರಲ್ಲಿ 'ಎನ್‌ ಬೊಮ್ಮಕುಟ್ಟಿ ಟಮ್ಮಾವುಕ್ಕು' ಸಿನಿಮಾ ಮೂಲಕ ಕಾಲಿವುಡ್‌ಗೂ ಕಾಲಿಟ್ಟರು. 


ಮೊದಲ ಸಿನಿಮಾ

ಗೀತು ಅವರು 2000ರಲ್ಲಿ ಬಿಡುಗಡೆಯಾದ 'ಲೈಫ್ ಈಸ್ ಬ್ಯೂಟಿಫುಲ್' ಎಂಬ ಮಲಯಾಳಂ ಸಿನಿಮಾದಲ್ಲಿ ಸೂಪರ್ ಸ್ಟಾರ್ ಮೋಹನ್‌ಲಾಲ್‌ಗೆ ನಾಯಕಿಯಾದರು. ನಂತರ ತೆಂಕಾಶಿ ಪಟ್ಟಣಂ, ವಾಲ್‌ಕನ್ನಾಡಿ, ವೀಂಡಮ್ ಞೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದರು. 2004ರಲ್ಲಿ ಬಿಡುಗಡೆಯಾದ 'ಅಕಲೆ' ಸಿನಿಮಾದ ಅಭಿನಯಕ್ಕಾಗಿ 'ಅತ್ಯುತ್ತಮ ನಟಿ' ಕೇರಳ ರಾಜ್ಯಪ್ರಶಸ್ತಿ ಪಡೆದರು. 


ನಿರ್ದೇಶನ

ಸುಮಾರು 30ಕ್ಕೂ ಹೆಚ್ಚು ಮಲೆಯಾಳಂ ಹಾಗೂ ತಮಿಳು ಸಿನಿಮಾಗಳಲ್ಲಿ ನಟಿಸಿದ ಗೀತು ಮೋಹನ್‌ದಾಸ್‌, ನಂತರ ನಿರ್ದೇಶನ ಮತ್ತು ನಿರ್ಮಾಣದತ್ತ ಮುಖ ಮಾಡಿದರು. 2009ರಲ್ಲಿ ತಮ್ಮದೇ ಪ್ರೊಡಕ್ಷನ್ ಹೌಸ್ ಹುಟ್ಟುಹಾಕಿದ ಗೀತು, ‘ಕೇಳ್‌ಕ್ಕುನ್ನುಂಡೋ’  ಎಂಬ ಕಿರುಚಿತ್ರ ನಿರ್ದೇಶಿಸಿದರು. ಈ ಕಿರುಚಿತ್ರಕ್ಕೆ ರಾಷ್ಟ್ರಪ್ರಶಸ್ತಿಯನ್ನು ಪಡೆದರು. 


ನಂತರ 2014ರಲ್ಲಿ 'ಲಿಯರ್ ಡೈಸ್‌' ಸಿನಿಮಾ ಮೂಲಕ ಬಾಲಿವುಡ್‌ ಪ್ರವೇಶಿದರು. ಇದು ರಾಷ್ಟ್ರೀಯ, ಅಂತರಾಷ್ಟ್ರಯ ಪ್ರಶಸ್ತಿಗಳಿಗೆ ಭಾಜನವಾಯಿತು. ವಿಶೇಷವೆಂದರೆ ಈ ಸಿನಿಮಾದ ಛಾಯಾಗ್ರಹಣಕ್ಕಾಗಿ ಅವರ ಪತಿ ರಾಜೀವ್ ರವಿ ಅವರಿಗೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿ ಲಭಿಸಿತ್ತು. ಆನಂತರ 2019ರಲ್ಲಿ ಮೂತಾನ್ ಎಂಬ ಸಿನಿಮಾ ನಿರ್ದೇಶಿಸಿದರು. ಈ ಚಿತ್ರ ಹಿಂದಿ ಹಾಗೂ ಮಲಯಾಳಂ ಭಾಷೆಗಳಲ್ಲಿ ತೆರೆಕಂಡಿತ್ತು. ಲಕ್ಷ ದ್ವೀಪದ ಹಿನ್ನೆಲೆಯ ಕಥೆಯನ್ನೊಳಗೊಂಡ ಈ ಚಿತ್ರ ವಿಮರ್ಷಕರಿಂದ ಮೆಚ್ಚುಗೆ ಗಳಿಸಿತ್ತು. 


ಯಶ್‌ಗೆ ನಿರ್ದೇಶನ


ಗೀತು ಮೋಹನ್‌ದಾಸ್ ಸದ್ಯ ರಾಕಿಂಗ್ ಸ್ಟಾರ್ ಯಶ್‌ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಯಶ್ ಹಾಗೂ ಗೀತು ಕಾಂಬಿನೇಷನ್‌ನ 'ಟಾಕ್ಸಿಕ್' ಸಿನಿಮಾದ ಮೇಲೆ ಬೆಟ್ಟದಷ್ಟು ನಿರೀಕ್ಷೆಯಿದೆ. ಟಾಕ್ಸಿಕ್ ಸಿನಿಮಾ 2025ರ ಏಪ್ರಿಲ್ 10ರಂದು ಬಿಡುಗಡೆಯಾಗಲಿದ್ದು, ಹಾಲಿವುಡ್‌ ರೇಂಜ್‌ನಲ್ಲಿ ತೆರೆಗೆ ಬರುವ ಲೆಕ್ಕಾಚಾರವಿದೆ..





 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+