CelebsbredcrumbHaripriyabredcrumbBiography

  ಹರಿಪ್ರಿಯಾ ಜೀವನಚರಿತ್ರೆ

  ಹರಿಪ್ರಿಯಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರತಿಭಾನ್ವಿತ ನಟಿ.ಇವರು ಜನಿಸಿದ್ದು 29 ಅಕ್ಟೋಬರ್ 1991 ಚಿಕ್ಕಬಳ್ಳಾಪುರದಲ್ಲಿ. ಇವರ ಬಾಲ್ಯದ ಹೆಸರು ಶೃತಿ.ವಿದ್ಯಾಮಂದಿರ ಶಾಲೆಯಲ್ಲಿ ತಮ್ಮ  ಪಿಯುಸಿಯನ್ನು ಪೂರ್ಣಗೊಳಿಸಿದ ಇವರು ನೃತ್ಯದಲ್ಲಿ ತುಂಬಾ ಆಸಕ್ತಿ ಇದ್ದಿದ್ದರಿಂದ ಭರತ ನಾಟ್ಯ ತರಬೇತಿಗೆ ಸೇರಿಕೊಂಡರು.ಭರತ ನಾಟ್ಯ ಕಲಿತ ನಂತರ ಹಲವಾರು ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿ ಮೆಚ್ಚುಗೆ ಪಡೆದರು.ಒಮ್ಮೆ ಇವರ ಭರತನಾಟ್ಯದ ಚಿತ್ರಗಳನ್ನು ಗಮನಿಸಿದ ನಿರ್ದೇಶಕ ರಿಚರ್ಡ್ ಇವರಿಗೆ 2008 ರಲ್ಲಿ ತುಳು ಚಿತ್ರದಲ್ಲಿ ಅಭಿನಯಿಸಲು ಅವಕಾಶ ಕೊಟ್ಟರು.

  2008 ರಲ್ಲಿ ತೆರೆಕಂಡ " ಮನಸುಗಳ ಮಾತು ಮಧುರ" ಎಂಬ ಕನ್ನಡ ಚಿತ್ರದಲ್ಲಿ ಮೊದಲ ಬಾರಿಗೆ ಕಾಣಿಸಿಕೊಂಡರು. ಇದಾದ ನಂತರ `ಕಳ್ಳರ ಸಂತೆ',ಚೆಲುವೆಯೇ ನಿನ್ನ ನೋಡಲು ಮುಂತಾದ ಕನ್ನಡ ಚಿತ್ರಗಳಲ್ಲಿ ನಟಿಸಿ ಕೆಲವು ತೆಲುಗು, ಮಲಯಾಳಂ, ತುಳು ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X