twitter
    Celebs»Indu Nagaraj»Biography

    ಇಂದು ನಾಗರಾಜ್ ಜೀವನಚರಿತ್ರೆ

    `ಪ್ಯಾರ್‌ಗೆ ಆಗ್‌ಬುಟ್ಟೈತೆ',`ಓಯ್ ಕಳ್ಳ ಕಳ್ಳ ಕಳ್ಳ',`ಲೈಟಾಗಿ',`ತ್ರಾಸ ಆಕ್ಕೈತಿ' ಮುಂತಾದ ಹಾಡುಗಳ ಮೂಲಕ ಕನ್ನಡ ಸಿನಿಪ್ರಿಯರ ಮನಸ್ಸು ಗೆದ್ದಿರುವ ಇಂದು ನಾಗರಾಜ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಹಿನ್ನಲೆ ಗಾಯಕಿ. ಮೈಸೂರಿನ ಹತ್ತಿರದ ಚಿಲ್ಕುಂಡ ಹಳ್ಳಿಯಲ್ಲಿ ತುಂಬು ಕಲಾವಿದರ ಕುಟುಂಬದಲ್ಲಿ ಜನಿಸಿದರು. ತಂದೆ ವಿದ್ವಾನ್ ಸಿ.ಎ.ನಾಗರಾಜ ಮತ್ತು ಹಿರಿಯ ಸಹೋದರಿ ಲಕ್ಷ್ಮಿ ನಟರಾಜ ಕರ್ನಾಟಕ ಸಂಗೀತದಲ್ಲಿ ಹೆಸರು ಮಾಡಿದ್ದಾರೆ. ಇವರಿಗೆ ಬಾಲ್ಯದಲ್ಲಿ ಕೇವಲ ಮೂರು ವರ್ಷದವರಿದ್ದಾಗಿನಿಂದಲೇ ಶಾಸ್ತ್ರೀಯ ಮತ್ತು ಸುಗಮ ಸಂಗೀತದಲ್ಲಿ ತರಬೇತಿ ಆರಂಭವಾಯಿತು. 2005 ರಲ್ಲಿ ಈ ಟಿವಿ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ `ಎದೆ ತುಂಬಿ ಹಾಡಿದೆನು ' ಕಾರ್ಯಕ್ರಮದಲ್ಲಿ ಸಹೋದರಿ ಲಕ್ಷ್ಮೀ ಜೊತೆ ಹಾಡಿದ ನಂತರ ಪ್ರಸಿದ್ಧಿಯಾದರು.

    ಇವರು ಮೊದಲು ನಟಿಯಾಗಿ ಟಿ.ಎನ್.ಸೀತಾರಾಮ್‌ರ `ಮಿಂಚು' ಧಾರಾವಾಹಿ ಮೂಲಕ ಕಿರುತೆರೆ ಪ್ರವೇಶಿಸಿದರು. ಇವರ ಗಾಯನ ಕಲೆ ಗುರುತಿಸಿದ ಸೀತಾರಾಮ್‌ರವರು ತಮ್ಮ ಚಿತ್ರ `ಮೀರಾ ಮಾಧವ ರಾಘವ'ದಲ್ಲಿ ಅವಕಾಶ ಕೊಟ್ಟರು. ನಂತರ ಹಲವಾರು ಗೀತೆಗಳಲ್ಲಿ ಹಾಡಿರುವ ಇಂದು `ಪ್ಯಾರ್‌ಗೆ ಆಗ್ಬುಟ್ಟೈತಿ' ಗೀತೆಗೆ ಫಿಲ್ಮಫೆರ್ ಪ್ರಶಸ್ತಿ ಪಡೆದಿದ್ದಾರೆ.

    2016 ರಲ್ಲಿ ತೆರೆಕಂಡ `ದೊಡ್ಮನೇ ಹುಡಗ' ಚಿತ್ರದ ತ್ರಾಸ ಆಕ್ಕೈತಿ ಗೀತೆಗೆ ಸೈಮಾ ಪ್ರಶಸ್ತಿ ಪಡೆದಿದ್ದಾರೆ.ಜೀ ಕನ್ನಡದ ಸರಿಗಮಪ, ಈ ಟಿವಿಯ ಎದೆ ತುಂಬಿ ಹಾಡುವೆನು ಮುಂತಾದ ಶೋ ಗಳ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ.ರಮೇಶ್ ಅರವಿಂದ ನಡೆಸಿಕೊಡುವ `ವಿಕೇಂಡ್ ವಿಥ್ ರಮೇಶ್' ಮತ್ತು ಪುನೀತ್ ರಾಜಕುಮಾರ್‌ರ `ಫ್ಯಾಮಿಲ್ ಪವರ್ 'ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X