ಕಾರ್ತಿಕ್ ಜಯರಾಂ ಜೀವನಚರಿತ್ರೆ

  ಕಾರ್ತಿಕ್ ಜಯರಾಂ(ಜೆ ಕೆ) ಅವರು ಜನಿಸಿದ್ದು ಬೆಂಗಳೂರಿನಲ್ಲಿ. ಇವರ ವಿದ್ಯಾಭ್ಯಾಷವೆಲ್ಲ ಮುಗಿಸಿದ್ದು ಬೆಂಗಳೂರಿನಲ್ಲಿ.

  ಇವರ ಸಿನಿಪಯಣ ಶುರುವಾದದ್ದು ಕಿರುತೆರೆಯ ಮೂಲಕ. ಕಿರುತೆರೆಯ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮನ್ನು ಗುರುತಿಸಿಕೊಂಡರು. ಅಶ್ವಿನಿ ನಕ್ಷತ್ರ ಧಾರವಾಹಿ ಮೂಲಕ ಸೂಪರಸ್ಟಾರ್ ಜೆಕೆಯಾಗಿ ಎಲ್ಲರಿಗೂ ಪರಿಚಿತಗೊಂಡರು.

  ಕೆಂಪೇಗೌಡ, ವಿಷ್ಣುವರ್ಧನ, ಈಗ, ವರದ ನಾಯಕ, ಜಸ್ಟ್ ಲವ್, ಹೀಗೆ ಅನೇಕ ಸಿನೆಮಾಗಳಲ್ಲಿ ಅಭಿನಯಸಿ ಸೈ ಅನಿಸಿಕೊಂಡಿದ್ದಾರೆ. ಕಾರ್ತಿಕ್ ಜಯರಾಂ ಅಲಿಯಾಸ್ ಜೆ.ಕೆ.ಇವರು ಹಿಂದಿವಾಹಿನಿ ಸ್ಟಾರ್ ಪ್ಲಸ್ ಅಲ್ಲಿ ಪ್ರಸಾರವಾದ ಸಿಯಾ ಕೆ ರಾಮ್ ಎಂಬ ಪೌರಾಣಿಕ ಧಾರಾವಾಹಿಯಲ್ಲಿ ರಾವಣನ ಪಾತ್ರದಲ್ಲಿ ನಟಿಸುವ ಮೂಲಕ ಪರಭಾಷಾ  ಪ್ರೇಕ್ಷಕರ ಹೃದಯವನ್ನು ಕೂಡ ಗೆದ್ದರು.

  ಕನ್ನಡ ಚಿತ್ರರಂಗ ನಡೆಸಿಕೊಡುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಇವರು ಕರ್ನಾಟಕ ಬುಲ್ದೋಜರ್ ಪರ ಆಡಿದ್ದಾರೆ. ಇವರು ಬಿಗ್ ಬಾಸ್ ಕನ್ನಡ ಸೀಸನ್ 5ರಲ್ಲಿ ಭಾಗವಹಿಸಿದ್ದರು. ಇತ್ತೀಚಿಗೆ ತೆರೆಗೆಬಂದ  ಆ ಕರಾಳರಾತ್ರಿ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X