ನಿಧಿ ಸುಬ್ಬಯ್ಯ ಕನ್ನಡ ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. 1987 ರಲ್ಲಿ ಕೊಡಗಿನಲ್ಲಿ ಜನಿಸಿದರು. ತಂದೆ ಬೊಲ್ಲಚಂದ ಸುಭಾಷ್ ಸುಬ್ಬಯ್ಯ, ತಾಯಿ ಜಾನ್ಸಿ ಸುಬ್ಬಯ್ಯ. ನಿಧಿ ಜನನದ ನಂತರ ಕುಟುಂಬ ಮೈಸೂರಿಗೆ ವಲಸೆ ಬಂದಿದ್ದರಿಂದ ಇವರ ಬಾಲ್ಯ ವಿಧ್ಯಾಭ್ಯಾಸ ಎಲ್ಲ ಮೈಸೂರಿನಲ್ಲಿ ಕಳೆಯಿತು.
ತಾವು ಪಿಯುಸಿಯಲ್ಲಿದ್ದಾಗ ಸೇಲಿಂಗ್ ಸ್ಫರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ನಂತರ ಒಂದೇ ವರ್ಷದಲ್ಲಿ ಸೇಲಿಂಗ್ ನಲ್ಲಿ ಮೂರು ಚಿನ್ನದ ಪದಕ ಪಡೆದಿರುವ ಇತಿಹಾಸ ಹೊಂದಿದ್ದಾರೆ. ಶ್ರೀ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುವಾಗ ಮಾಡೆಲಿಂಗ್ ಗೊಸ್ಕರ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದರು.
ಮಾಡೆಲಿಂಗ್ ಮಾಡುತ್ತ ಟಿವಿ ಜಾಹೀರಾತುಗಳಲ್ಲಿ ಅಭಿನಯಿಸುತ್ತಿದ್ದ ಇವರು 2009 ರಲ್ಲಿ ತೆರೆಕಂಡ `ಅಭಿಮಾನಿ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. `ಪಂಚರಂಗಿ' ಚಿತ್ರದ ಮೂಲಕ ಮುನ್ನಲೆಗೆ ಬಂದ ನಿಧಿ ನಂತರ `ಅಣ್ಣಾ ಬಾಂಡ' ಚಿತ್ರದಲ್ಲಿ ನಟಿಸಿದರು. 2012 ರಲ್ಲಿ ತೆರೆಕಂಡ `ಓ ಮೈ ಗಾಡ್' ಚಿತ್ರದಿಂದ ಹಿಂದಿ ಚಿತ್ರರಂಗದಲ್ಲೂ ಕೂಡ ಅಭಿನಯಿಸಲು ಪ್ರಾರಂಭಿಸಿದರು.
ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ ಕನ್ನಡ ಸೀಸನ್ 8 ರ ಸ್ಪರ್ಧಿಯಾಗಿ ಭಾಗವಹಿಸಿದ್ದಾರೆ.