twitter
    Celebs»Reeshma Nanaiah»Biography

    ರೀಷ್ಮಾ ನಾನಯ್ಯ ಜೀವನಚರಿತ್ರೆ

    ರೀಷ್ಮಾ ನಾನಯ್ಯ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಇವರು 2001ರ ಏಪ್ರಿಲ್ 28ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರ ಕುಟುಂಬದವರು ಮೂಲತಃ ಕೊಡಗಿನವರು. ಬೆಂಗಳೂರಿನಲ್ಲಿ ಬಾಲ್ಯ ವಿದ್ಯಾಭ್ಯಾಸ ಮುಗಿಸಿದ ಇವರು, ಜ್ಯೋತಿ ನಿವಾಸ್ ಕಾಲೇಜಿನಲ್ಲಿ ಪಿಯು ವ್ಯಾಸಂಗ ಮಾಡಿದರು. 

    ಮಾಡೆಲಿಂಗ್
    ಬಾಲ್ಯದಿಂದಲೇ ನಟಿಯಾಗಬೇಕೆಂಬ ಕನಸು ಹೊಂದಿದ್ದ ರೀಷ್ಮಾ, ಶಿಕ್ಷಣದ ಬಳಿಕ ಮಾಡೆಲ್ ಆಗಿ ವೃತ್ತಿಜೀವನ ಆರಂಭಿಸಿದರು. 'ದಿ ಲಿವೊನ್ ಬೆಂಗಳೂರು ಟೈಮ್ಸ್ ಫ್ರೆಶ್ ಫೇಸ್' ಸ್ಪರ್ಧೆಯಲ್ಲಿ ಭಾಗವಹಿಸಿ, ರನ್ನರ್ ಅಪ್ ಆಗಿದ್ದರು. 

    ಸ್ಯಾಂಡಲ್‌ವುಡ್ ಪ್ರವೇಶ
    ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾ ಮೂಲಕ ರೀಷ್ಮಾ ನಾಣಯ್ಯ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಈ ಸಿನಿಮಾದಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಪ್ರೇಕ್ಷಕರ ಮನಗೆದ್ದಿದ್ದರು. ನಂತರ ರಾಣಾ ಚಿತ್ರದಲ್ಲಿ ಬಣ್ಣ ಹಚ್ಚಿದ್ದರು. ಸ್ಪೂಕಿ ಕಾಲೇಜ್ ಸಿನಿಮಾದಲ್ಲಿ ಹಳೇ ಹಾಡೊಂದಕ್ಕೆ ನೃತ್ಯ ಮಾಡಿದ್ದರು. ನಂತರ ಬಾನ ದಾರಿಯಲ್ಲಿ, ಯುಐ, ಕೆಡಿ-ದಿ ಡೆವಿಲ್, ವಾಮನ ಸಿನಿಮಾಗಳಲ್ಲಿ ನಟಿಸಿದ್ದಾರೆ. 

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X