ಶ್ವೇತಾ ಪ್ರಸಾದ್ ಕನ್ನಡ ಕಿರುತೆರೆ ಮತ್ತು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ. ಮೂಲತಃ ಶಿವಮೊಗ್ಗದವರಾದ ಇವರು, ಆರ್.ವಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಆರ್ಕಿಟಿಕ್ಚೆರ್ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ನಂತರ ಕನ್ನಡದ ಪ್ರಮುಖ ರೇಡಿಯೋ ಜಾಕಿ ಆರ್.ಜೆ ಪ್ರದೀಪ್‌ರನ್ನು ಮದುವೆಯಾದರು.
ವೃತ್ತಿಜೀವನ
ಒಂದು ದಿನ ಫೇಸ್‌ಬುಕ್‌ನಲ್ಲಿ ಶ್ವೇತಾ ಪ್ರಸಾದ್ ಅವರ ಫೋಟೋ ನೋಡಿದ ನಿರ್ಮಾಪಕಿ ಶೃತಿ ನಾಯ್ಡು, ತಮ್ಮ ಮುಂದಿನ ಸೀರಿಯಲ್‌ನಲ್ಲಿ ನಟಿಸಲು ಆಫರ್ ನೀಡಿದರು. ಶ್ವೇತಾ ಮೊದಮೊದಲು ನಿರಾಕರಿಸಿದರೂ ಪತಿಯ ಪ್ರೋತ್ಸಾಹದಿಂದ ನಟಿಸಿಲು ಒಪ್ಪಿಕೊಂಡರು.
ನಂತರ ಜೀ ಕನ್ನಡದಲ್ಲಿ ಪ್ರಸಾರವಾದ `ಶ್ರೀರಸ್ತು ಶುಭಮಸ್ತು' ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾದರು. ಬಳಿಕ ಕಲರ್ಸ್ ಕನ್ನಡ ವಾಹಿನಿಯ `ರಾಧಾ ರಮಣ' ಧಾರಾವಾಹಿ ಇವರನ್ನು ಜನಪ್ರಿಯತೆಯ ಉತ್ತುಂಗಕ್ಕೇರಿಸಿತು. 2017ರಲ್ಲಿ ಬೆಂಗಳೂರು ಟೈಮ್ಸ್‌ನ ಮೋಸ್ಟ್ ಡಿಸೈರೇಬಲ್ ಮಹಿಳೆ ಪ್ರಶಸ್ತಿಯನ್ನು ಶ್ವೇತಾ ಪಡೆದಿದ್ದಾರೆ.
ಸಿನಿಮಾಗಳು
ಶ್ವೇತಾ ಪ್ರಸಾದ್ ಕಿರುತೆರೆ ಮಾತ್ರವಲ್ಲದೇ, ಬೆಳ್ಳಿತೆರೆಯಲ್ಲೂ ಸಕ್ರಿವಾಗಿದ್ದಾರೆ. ಕಳ್ಬೆಟ್ಟದ ದರೋಡೆಕೋರರು, ಪದವಿ ಪೂರ್ವ, ಕಾಟೇರ ಮುಂತಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.