twitter
    Celebs»T.G.Lingappa»Biography

    ಟಿ.ಜಿ.ಲಿಂಗಪ್ಪ ಜೀವನಚರಿತ್ರೆ

    ಟಿ.ಜಿ.ಲಿಂಗಪ್ಪ ಎಂದೇ ಕರೆಯಲ್ಪಡುವ ತಿರುಚರಾಪಳ್ಳಿ ಗೋವಿಂದರಾಜು ಲಿಂಗಪ್ಪ ಕನ್ನಡ,ತಮಿಳು ಮತ್ತು ತೆಲುಗು ಚಿತ್ರರಂಗದ ಪ್ರಸಿದ್ಧ ಸಂಗೀತ ನಿರ್ದೇಶಕ. ಇವರ ತಂದೆ ಗೋವಿಂದರಾಜು ನಾಯಡು ನಾಟಕ ಕಂಪನಿಗಳಲ್ಲಿ ಹಾರ್ಮೋನಿಯಂ ಬಾರಿಸುತ್ತಿದ್ದರು. ಗೋವಿಂದರಾಜುರವರ ಸ್ನೇಹಿತ ಅಗಿನ ಪ್ರಮುಖ ನಟ ಮತ್ತು ಗಾಯಕ ಎಂ.ಕೆ ತ್ಯಾಗರಾಜ ಭಾಗವತರ್ ಆಗಾಗ ಇವರ ಮನೆಗೆ ಬಂದು ಸಂಗೀತ ಕಛೇರಿ ನಡೆಸುತ್ತಿದ್ದರು. ಇವೆಲ್ಲರ ಪ್ರಭಾವದಿಂದ ಬಾಲ್ಯದಲ್ಲಿಯೇ ಸಂಗೀತ ಸಾಧನಗಳ ನುಡಿಸುವಲ್ಲಿ ಪರಿಣಿತಿ ಪಡೆದ ಇವರು ತಮ್ಮ 14 ನೇ ವಯಸ್ಸಿನಲ್ಲಿ ಆರ್ಕೇಸ್ಟ್ರಾ ಸೇರಿ ಹಾರ್ಮೋನಿಯಂ, ಮ್ಯಾಂಡೋಲಿನ್,ಗಿಟಾರ್ ಬಾರಿಸುತ್ತಿದ್ದರು. ನಂತರ ಕೆಲ ಪ್ರೊಡಕ್ಷನ್ಸ್ ಕಂಪನಿಗಳಿಗೆ ಪರಿಚಯವಾದ ಲಿಂಗಪ್ಪ ಹಲವು ಪ್ರಸಿದ್ದ ನಿರ್ದೇಶಕರ ಕೈಕೆಳಗೆ ಕೆಲಸ ಮಾಡಿದರು.

    ಟಿ.ಆರ್ ಮಹಾಲಿಂಗಂ ಜೊತೆ ಸೇರಿ ಅವರ ಎರಡು ಚಿತ್ರಗಳಿಗೆ ಸಂಗೀತ ನೀಡಿ ಸಂಗೀತ ನಿರ್ದೇಶಕರಾಗಿ ಸಿನಿ ಜಗತ್ತಿಗೆ ಪರಿಚಯವಾದರು. ಬಿ.ಆರ್.ಪಂತಲುರವರ `ಪದ್ಮಿನಿ ಪಿಕ್ಚರ್ಸ್' ಅಡಿಯಲ್ಲಿ ಹಲವು ತಮಿಳು ಮತ್ತು ಕನ್ನಡ ಚಿತ್ರಗಳಿಗೆ ಸಂಗೀತ ನೀಡಿದರು.

    ಇವರ ಸಂಗೀತಗಳಲ್ಲಿ ಹಾರ್ಮೋನಿಯಂ ನಿನಾದ ಎದ್ದು ಕಾಣುತಿತ್ತು.
    ಸಂಗೀತ ನೀಡಿದ ಪ್ರಮುಖ ಚಿತ್ರಗಳು

    * ಭಬ್ರುವಾಹನ

    * ದೇವರ ಕಣ್ಣು

    * ಭಕ್ತ ಸಿರಿಯಾಳ

    * ಗುರು ಶಿಷ್ಯರು

    * ಗಾಳಿ ಗೋಪುರ

    * ದೇವರ ಕಣ್ಣು

    * ತಾಯಿಗೆ ತಕ್ಕ ಮಗ

    * ಸತಿಶಕ್ತಿ

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X