twitter
    For Quick Alerts
    ALLOW NOTIFICATIONS  
    For Daily Alerts

    Sandalwood 2022: ಒಟ್ಟು 202..ಇಂಡಸ್ಟ್ರಿ ಹಿಟ್ 2.. ನೂರು ಕೋಟಿ 3, ಹಿಟ್, ಆವರೇಜ್, ಫ್ಲಾಪ್‌ ಎಷ್ಟು?

    |

    ಈ ವಾರ ಸ್ಯಾಂಡಲ್‌ವುಡ್‌ನಲ್ಲಿ 'ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಜಮಾಲಿಗುಡ್ಡ', 'ಪದವಿಪೂರ್ವ', 'ದ್ವಿಪಾತ್ರ', 'ಮೇಡ್‌ ಇನ್‌ ಬೆಂಗಳೂರು' ಸೇರಿದಂತೆ 9 ಸಿನಿಮಾಗಳು ಪ್ರೇಕ್ಷಕರ ಮುಂದೆ ಬಂದಿದೆ. ಅಲ್ಲಿಗೆ ಈ ವರ್ಷ ಬಿಡುಗಡೆಯಾದ ಒಟ್ಟು ಸಿನಿಮಾಗಳ ಸಂಖ್ಯೆ 200ರ ಗಡಿ ದಾಟಿದೆ.

    ಕೊರೋನಾ ಹಾವಳಿ ನಂತರ ಈ ವರ್ಷ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳು ತೆರೆಗಪ್ಪಳಿದವು. ಕನ್ನಡ ಸಿನಿಮಾಗಳು ಈ ವರ್ಷ ಬಾಕ್ಸಾಫೀಸ್‌ನಲ್ಲಿ ಭರ್ಜರಿ ಬೆಳೆ ತೆಗೆದಿದ್ದು ಸುಳ್ಳಲ್ಲ. 1000 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ KGF- 2 ಸೇರಿದಂತೆ ಸಾಕಷ್ಟು ಸಿನಿಮಾಗಳು ಹಿಟ್ ಲಿಸ್ಟ್ ಸೇರಿದೆ. ಕಡಿಮೆ ಬಜೆಟ್‌ನಲ್ಲಿ ನಿರ್ಮಾಣವಾಗಿದ್ದ 'ಕಾಂತಾರ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 400 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿ ಎಲ್ಲರ ಹುಬ್ಬೇರಿಸಿತ್ತು. ಬೇರೆ ಇಂಡಸ್ಟ್ರಿಗಳಿಗೆ ಹೋಲಿಸಿದರೆ ಸಕ್ಸಸ್ ವಿಚಾರದಲ್ಲಿ ಭಾರತೀಯ ಚಿತ್ರರಂಗದಲ್ಲೇ ಸ್ಯಾಂಡಲ್‌ವುಡ್ ಈ ವರ್ಷ ಅದ್ಭುತ ಸಾಧನೆ ಮಾಡಿದೆ.

    2022: ಗೆಲ್ಲದಿದ್ದರೂ ಈ ವರ್ಷ ಗಮನ ಸೆಳೆದ ಸಿನಿಮಾಗಳಿವು2022: ಗೆಲ್ಲದಿದ್ದರೂ ಈ ವರ್ಷ ಗಮನ ಸೆಳೆದ ಸಿನಿಮಾಗಳಿವು

    ಬಿಡುಗಡೆ ಆಗಿರುವ 200 ಸಿನಿಮಾಗಳಲ್ಲಿ 150ಕ್ಕೂ ಅಧಿಕ ಸಿನಿಮಾಗಳು ಹೊಸಬರ ಸಿನಿಮಾಗಳು ಎನ್ನಬಹುದು. ಮೇಲ್ನೋಟಕ್ಕೆ ಕನ್ನಡ ಸಿನಿಮಾಗಳು ಅದ್ಭುತ ಸಾಧನೆ ಮಾಡಿದ್ದರೂ ಚಿತ್ರರಂಗಕ್ಕೆ ಅಷ್ಟಾಗಿ ಲಾಭ ಆಗಿಲ್ಲ ಎನ್ನುವ ಮಾತು ಇದೆ.

    202 ಸಿನಿಮಾಗಳು ರಿಲೀಸ್

    202 ಸಿನಿಮಾಗಳು ರಿಲೀಸ್

    ಇತ್ತೀಚಿನ ವರ್ಷಗಳಲ್ಲಿ ಕನ್ನಡದಲ್ಲಿ ವರ್ಷಕ್ಕೆ 200 ಸಿನಿಮಾಗಳು ಸಾಮಾನ್ಯವಾಗಿ ರಿಲೀಸ್‌ ಆಗುತ್ತಿದೆ. ಕೊರೊನಾ ಲಾಕ್‌ಡೌನ್‌ ಕಾರಣದಿಂದ ಕಳೆದೆರಡು ವರ್ಷ ಈ ಸಂಖ್ಯೆ ಗಣನೀಯವಾಗಿ ಕಮ್ಮಿ ಆಗಿತ್ತು. ಈ ವರ್ಷ ಜನವರಿಯಲ್ಲೂ ದೊಡ್ಡ ಸಿನಿಮಾಗಳು ಬರಲಿಲ್ಲ. ಇನ್ನು ಈ ವಾರ ಅಂದರೆ ವರ್ಷ ಕೊನೆ ವಾರದಲ್ಲಿ ಒಟ್ಟು 9 ಸಿನಿಮಾಗಳು ತೆರೆಕಂಡಿವೆ. ಅಲ್ಲಿಗೆ ಒಟ್ಟು 202 ಸಿನಿಮಾಗಳು ಈ ವರ್ಷ ರಿಲೀಸ್ ಆದಂತಾಗಿದೆ. ಸ್ಟಾರ್ ನಟರಲ್ಲಿ ದರ್ಶನ್ ಹಾಗೂ ದುನಿಯಾ ವಿಜಯ್ ನಟನೆಯ ಸಿನಿಮಾಗಳು ರಿಲೀಸ್ ಆಗಲೇ ಇಲ್ಲ.

    2 ಇಂಡಸ್ಟ್ರಿ ಹಿಟ್ ಸಿನಿಮಾಗಳು

    2 ಇಂಡಸ್ಟ್ರಿ ಹಿಟ್ ಸಿನಿಮಾಗಳು

    ಮೊದಲೇ ಹೇಳಿದಂತೆ ಈ ವರ್ಷ ಕನ್ನಡ ಸಿನಿಮಾಗಳು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ದೊಡ್ಡದಾಗಿ ಸದ್ದು ಮಾಡಿದ್ದಾವೆ. ಪ್ರಶಾಂತ್ ನೀಲ್ ನಿರ್ದೇಶನದ ಯಶ್ ನಟನೆಯ 'KGF -2' ಹೊಸ ಇತಿಹಾಸ ನಿರ್ಮಿಸಿತು. ಬರೋಬ್ಬರಿ 1200 ಕೋಟಿ ರೂ. ಕಲೆಕ್ಷನ್ ಮಾಡಿ ಸಂಚಲನ ಸೃಷ್ಟಿಸಿತು. ಪರಭಾಷಿಕರು ಕನ್ನಡ ಸಿನಿಮಾವನ್ನು ಕೊಂಡಾಡುವಂತಾಯಿತು. ಇನ್ನು ರಿಷಬ್ ಶೆಟ್ಟಿ ನಿರ್ದೇಶಿಸಿ ನಟಿಸಿದ 'ಕಾಂತಾರ' ಕೂಡ ಇಂಡಸ್ಟ್ರಿ ಹಿಟ್ ಎನಿಸಿಕೊಂಡಿದೆ. ಕರ್ನಾಟಕ ಬಾಕ್ಸಾಫೀಶ್‌ನಲ್ಲಿ 'KGF -2' ದಾಖಲೆಯನ್ನು ಮುರಿದು ಮೊದಲ ಸ್ಥಾನದಲ್ಲಿದೆ.

    100 ಕೋಟಿ ಸಿನಿಮಾಗಳು 3

    100 ಕೋಟಿ ಸಿನಿಮಾಗಳು 3

    ಬರೀ 'KGF -2', 'ಕಾಂತಾರ' ಅಷ್ಟೇ ಅಲ್ಲ, '777ಚಾರ್ಲಿ', 'ಜೇಮ್ಸ್', 'ವಿಕ್ರಾಂತ್ ರೋಣ' ಸಿನಿಮಾಗಳು ಕೂಡ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದವು. ಅಪ್ಪು ಕೊನೆಯ ಸಿನಿಮಾ 'ಜೇಮ್ಸ್' 100 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ಇನ್ನು ರಕ್ಷಿತ್ ಶೆಟ್ಟಿ ನಟನೆಯ '777 ಚಾರ್ಲಿ' ಕೂಡ 100 ಕೋಟಿ ರೂ. ಗಳಿಸಿ ಹುಬ್ಬೇರಿಸಿತ್ತು. ಇನ್ನು ಸುದೀಪ್ ನಟನೆಯ 'ವಿಕ್ರಾಂತ್ ರೋಣ' ಸಿನಿಮಾ ಕೂಡ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ 200 ಕೋಟಿ ರೂ. ಕಲೆಕ್ಷನ್ ಮಾಡಿ ಸದ್ದು ಮಾಡಿತ್ತು.

    2022ರ ಕನ್ನಡ ಹಿಟ್ ಚಿತ್ರಗಳು

    2022ರ ಕನ್ನಡ ಹಿಟ್ ಚಿತ್ರಗಳು

    ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದ ಸಿನಿಮಾಗಳು ಮಾತ್ರವಲ್ಲದೇ 'ಗಾಳಿಪಟ- 2', 'ಗಂಧದಗುಡಿ', 'ಲವ್ ಮಾಕ್ಟೇಲ್'- 2, 'ವೇದ' ಹಾಗೂ ವೇದ ಸಿನಿಮಾಗಳು ಬಾಕ್ಸಾಫೀಸ್‌ ಸದ್ದು ಮಾಡಿ ಹಿಟ್ ಲಿಸ್ಟ್ ಸೇರಿಕೊಂಡಿವೆ. ಯೋಗರಾಜ್ ಭಟ್ ಹಾಗೂ ಗಣೇಶ್ 'ಗಾಳಿಪಟ- 2' ಮೂಲಕ ಮತ್ತೆ ಗೆಲುವಿನ ಲಯಕ್ಕೆ ಮರಳಿದರು. ಅಪ್ಪು ಕನಸಿನ ಡಾಕ್ಯು ಡ್ರಾಮಾ ಸಿನಿಮಾ 'ಗಂಧದಗುಡಿ' ಕೂಡ ಬಾಕ್ಸಾಫೀಸ್‌ನಲ್ಲಿ ಒಳ್ಳೆ ಕಲೆಕ್ಷನ್ ಮಾಡ್ತು. ಥಿಯೇಟರ್‌ಗಳಲ್ಲಿ ಶಿವಣ್ಣನ 'ವೇದ' ಸಿನಿಮಾ ಯಶಸ್ವಿ ಪ್ರದರ್ಶನ ಮುಂದುವರೆದಿದೆ.

    ಆವರೇಜ್ ಹಿಟ್ ಚಿತ್ರಗಳೆಷ್ಟು?

    ಆವರೇಜ್ ಹಿಟ್ ಚಿತ್ರಗಳೆಷ್ಟು?

    'ಲಕ್ಕಿಮ್ಯಾನ್', 'ಓಲ್ಡ್ ಮಾಂಕ್', 'ಏಕ್‌ ಲವ್‌ಯಾ', 'ಗುರು ಶಿಷ್ಯರು' ಸೇರಿದಂತೆ ಒಂದಷ್ಟು ಸಿನಿಮಾಗಳು ಆವರೇಜ್ ಹಿಟ್ ಅನ್ನಿಸಿಕೊಂಡವು. ಇನ್ನುಳಿದಂತೆ ಬಹುತೇಕ ಎಲ್ಲಾ ಸಿನಿಮಾಗಳು ನಿರ್ಮಾಪಕರಿಗೆ ನಷ್ಟ ಉಂಟು ಮಾಡಿವೆ. ಕೆಲವರು ಇದಿದ್ದರಲ್ಲಿ ಸೇಫ್ ಆಗಿದ್ದಾರೆ. ಭಾರೀ ನಿರೀಕ್ಷೆ ಮೂಡಿಸಿದ್ದ 'ರವಿ ಬೋಪಣ್ಣ', 'ತೋತಾಪುರಿ', 'ಅವತಾರ ಪುರುಷ', 'ಹೆಡ್‌ಬುಷ್' ಸೇರಿದಂತೆ ನಿರೀಕ್ಷೆ ಮೂಡಿಸಿದ್ದ ಸಾಕಷ್ಟು ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಮುಗ್ಗರಿಸಿವೆ.

    English summary
    2022 Sandalwood Total Movies, Industry hit, avarage, hit, Flop List. Some of Them went on to become the highest grossing sandalwood film of the year while others performed average at Box office. know more.
    Friday, December 30, 2022, 13:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X