Don't Miss!
- Sports
ಈ ಗೆಲುವಿನ ಹೆಚ್ಚಿನ ಶ್ರೇಯಸ್ಸು ಬೌಲರ್ಗಳಿಗೆ ಸಲ್ಲಬೇಕು: ವಾಸಿಂ ಜಾಫರ್ ಹೇಳಿಕೆ
- News
ಮಕ್ಕಳಾಗಲು ಮಾನವನ ಮೂಳೆ ಪೌಡರ್ ತಿನ್ನುವಂತೆ ಒತ್ತಾಯ, ಪ್ರಕರಣ ದಾಖಲು
- Lifestyle
ಮಗುವಿಗೆ ಗ್ಯಾಸ್ ಪ್ರಾಬ್ಲಂ ಆದಾಗ ಹೀಗೆ ಮಾಡಿ
- Automobiles
ಮತ್ತಷ್ಟು ತಡವಾಗಲಿದೆ ಹೊಸ ಹ್ಯುಂಡೈ ಕ್ರೆಟಾ ಫೇಸ್ಲಿಫ್ಟ್ ಎಸ್ಯುವಿ ಬಿಡುಗಡೆ
- Finance
NRI PAN Card: ಎನ್ಆರ್ಐ ಪ್ಯಾನ್ ಕಾರ್ಡ್ಗೆ ಆನ್ಲೈನ್ ಅರ್ಜಿ ಸಲ್ಲಿಸುವುದು ಹೇಗೆ?
- Technology
2023ರಲ್ಲಿ ಸ್ಮಾರ್ಟ್ಫೋನ್ ಖರೀದಿಸುವ ಮುನ್ನ ನೀವು ಗಮನಿಸಲೇಬೇಕಾದ ವಿಚಾರಗಳು!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಕನ್ನಡಿಗರ ಮುಂದೆ ಬಂದ ರಘುವೀರ್-ಸಿಂಧು ಪುತ್ರಿ ಶ್ರೇಯಾ
'ಶೃಂಗಾರ ಕಾವ್ಯ' ನಟಿ ಸಿಂಧು ಜೊತೆ ಪ್ರೀತಿಯಲ್ಲಿ ಬಿದ್ದ ರಘುವೀರ್ 1995ರಲ್ಲಿ ವಿವಾಹವಾದರು. ಹತ್ತು ವರ್ಷಗಳ ಕಾಲ ಒಟ್ಟಿಗೆ ದಾಂಪತ್ಯ ನಡೆಸಿದ ಈ ದಂಪತಿಗೆ ಶ್ರೇಯಾ ಎಂಬ ಮಗಳು ಸಹ ಇದ್ದರು. ದುರಾದೃಷ್ಟವಶಾತ್ 2005ರಲ್ಲಿ ನಟಿ ಸಿಂಧು ಅನಾರೋಗ್ಯದಿಂದ ನಿಧನರಾದರು. ಅದಾದ ಮೇಲೆ ರಘುವೀರ್ ತಮ್ಮ ಸಂಬಂಧಿಕರೇ ಆಗಿದ್ದ ಗೌರಿ ಅವರನ್ನು ಎರಡನೇ ಮದುವೆಯಾದರು.
ತಾಯಿಯ ಅಗಲಿಕೆ ನಂತರ ಶ್ರೇಯಾ ಅಜ್ಜ-ಅಜ್ಜಿಯ ಮನೆಯಯಲ್ಲಿ ಉಳಿದುಕೊಂಡರು. ಶ್ರೇಯಾ ರಘುವೀರ್ ಈಗ ಏನು ಮಾಡ್ತಿದ್ದಾರೆ? ಹೇಗಿದ್ದಾರೆ ಎಂಬ ಕುತೂಹಲ ಸಹಜವಾಗಿ ಕನ್ನಡ ಕಲಾಭಿಮಾನಿಗಳನ್ನು ಕಾಡಿದೆ. ಇದಕ್ಕೀಗ ಉತ್ತರ ಸಿಕ್ಕಿದೆ. ಖ್ಯಾತ ನಿರ್ದೇಶಕ ರಘುರಾಮ್ ಜೊತೆ ಶ್ರೇಯಾ ರಘುವೀರ್ ಮಾತನಾಡಿದ್ದು, ತಂದೆ-ತಾಯಿ, ಬಾಲ್ಯ ಹಾಗೂ ಈಗಿನ ಜೀವನದ ಬಗ್ಗೆ ತಿಳಿಸಿದ್ದಾರೆ. ಮುಂದೆ ಓದಿ...
'ಅಮಿತಾಭ್
ಬಚ್ಚನ್'
ಸಿನಿಮಾ
ಎದುರು
ಗೆದ್ದ
ರಘುವೀರ್
'ಪ್ರೇಮಾಂಜಲಿ'

ಶ್ರೇಯಾ ರಘುವೀರ್ ಎಲ್ಲಿದ್ದಾರೆ?
ಶ್ರೇಯಾ ರಘುವೀರ್ ಸಣ್ಣ ವಯಸ್ಸಿನಿಂದಲೂ ಚೆನ್ನೈನಲ್ಲಿ ತಮ್ಮ ಅಜ್ಜ-ಅಜ್ಜಿಯ ಮನೆಯವರೊಂದಿಗೆ ಇದ್ದಾರೆ. ಬಾಲ್ಯದ ಕೆಲ ಸಮಯ ಮಾತ್ರ ಬೆಂಗಳೂರಿನಲ್ಲಿದ್ದರು. ಆಗ ಗುಡ್ ಶೆಪರ್ಡ್ ಶಾಲೆಯಲ್ಲಿ ಓದುತ್ತಿದ್ದರು. ಒಂದು ವರ್ಷ ಅಷ್ಟೇ ಈ ಶಾಲೆಯಲ್ಲಿ ವ್ಯಾಸಂಗ ಮಾಡಿದರು. ನಂತರ ಚೆನ್ನೈಗೆ ತೆರಳಿ ಶಿಕ್ಷಣ ಮುಂದುವರಿಸಿದರು. ಬಿಎಸ್ಸಿ ಎಲೆಕ್ಟ್ರಾನಿಕ್ ಓದಿರುವ ಶ್ರೇಯಾ ರೆಹಮಾನ್ ಅವರ ಮ್ಯೂಸಿಕ್ ಕಾಲೇಜಿನಲ್ಲಿ ಕೆಲಸ ಸಹ ಮಾಡಿದ್ದರು.

ನಿರ್ದೇಶಕ ಅಶ್ವಿನ್ ಜೊತೆ ವಿವಾಹ
ತಮಿಳು ಇಂಡಸ್ಟ್ರಿಯ ಯುವ ನಿರ್ದೇಶಕ ಅಶ್ವಿನ್ ಜೊತೆ ಶ್ರೇಯಾ ರಘುವೀರ್ ಅವರ ಮದುವೆ ಆಗಿದೆ. ಈ ದಂಪತಿಗೆ ಒಂದು ಮಗು ಸಹ ಇದೆ. ಇವರಿಬ್ಬರದ್ದು ಪ್ರೇಮ ವಿವಾಹ. ಶ್ರೇಯಾ ಕುಟುಂಬಕ್ಕೆ ಮೊದಲಿನಿಂದಲೂ ಅಶ್ವಿನ್ ಪರಿಚಯಸ್ಥರು.
ನಟ
ರಘುವೀರ್
ಪತ್ನಿ-ಮಗಳು
ಎಲ್ಲಿದ್ದಾರೆ?
ಏನ್
ಮಾಡ್ತಿದ್ದಾರೆ?

ತಾಯಿಯ ಸಾವಿನ ಬಗ್ಗೆ ಶ್ರೇಯಾ ಹೇಳಿದ್ದೇನು?
''2004ರಲ್ಲಿ ಸುನಾಮಿ ಬಂದ ಸಂದರ್ಭದಲ್ಲಿ ಕಲಾವಿದರೆಲ್ಲ ಸೇರಿ ಸಂತ್ರಸ್ಥರಿಗೆ ನಿಧಿ ಸಂಗ್ರಹಣೆ ಮಾಡಿದರು. ಅಮ್ಮನಿಗೆ ವೀಸಿಂಗ್ ಸಮಸ್ಯೆ ಇತ್ತು. ಅದರ ನಡುವೆಯೂ ಬಸ್ ಸಂಚಾರ, ಅಪಾರ್ಟ್‌ಮೆಂಟ್‌ಗಳು ಹತ್ತು ಇಳಿಯುವುದು ತುಂಬಾ ಸುತ್ತಾಡಿದರು. ಮೊದಲೇ ವೀಸಿಂಗ್ ಇದ್ದ ಕಾರಣ ಲಂಗ್ಸ್ ಮೇಲೆ ಪರಿಣಾಮ ಬೀರಿ ಆರೋಗ್ಯ ಕೆಟ್ಟಿತು. ಕೋಮಾಗೆ ಹೋದರು, ನಮ್ಮನ್ನು ಬಿಟ್ಟು ಹೋದ್ರು. ಆಗ ನಾನು 9 ರಿಂದ 10 ವರ್ಷ ವಯಸ್ಸು ಆಗಿತ್ತು. ನಮ್ಮ ತಾಯಿ ನನಗೆ ಬಹಳ ಕ್ಲೋಸ್ ಆಗಿದ್ದರು'' ಎಂದು ನೆನಪಿಸಿಕೊಂಡರು.

'ಶೃಂಗಾರ ಕಾವ್ಯ'ದಿಂದ ಹುಟ್ಟಿದ ಹೆಸರು ಶ್ರೇಯಾ
''ಶೃಂಗಾರ ಕಾವ್ಯ ಸಿನಿಮಾ ಬಂದಾಗ ನಾನು ಹುಟ್ಟಿರಲಿಲ್ಲ. ಆಗ ತಾಯಿ ಗರ್ಭಿಣಿಯಾಗಿದ್ದರು. ಗಂಡು ಮಗು ಹುಟ್ಟಿದರೆ ಶೃಂಗಾರ್ ಹಾಗೂ ಹೆಣ್ಣು ಮಗು ಆದರೆ ಕಾವ್ಯ ಅಂತ ಹೆಸರಿಡಲು ನಿರ್ಧರಿಸಿದ್ದರಂತೆ. ಚಿತ್ರದಲ್ಲಿ ಕಾವ್ಯ ಪಾತ್ರ ಸತ್ತು ಹೋಗುತ್ತೆ, ಅದಕ್ಕೆ ಕಾವ್ಯ ಬೇಡ ಅಂತ ಅಜ್ಜ ಹೇಳಿದ್ರಂತೆ. ಆಮೇಲೆ ಶೃಂಗಾರ್ ಹೆಸರಿನಿಂದ ಶ್ರೇ ಹಾಗೂ ಕಾವ್ಯ ಹೆಸರಿನಿಂದ ಯಾ ತಗೊಂಡು ಶ್ರೇಯಾ ಎಂದು ನಾಮಕರಣ ಮಾಡಿದರು'' ಎಂದು ರಘುವೀರ್ ಮಗಳು ಆಸಕ್ತಿದಾಯಕ ವಿಷಯವನ್ನು ಹಂಚಿಕೊಂಡರು.

ಅಪ್ಪ ಬಹಳ ಆತ್ಮೀಯವಾಗಿದ್ದರು
''ನಮ್ಮ ತಂದೆ ಬಹಳ ಆತ್ಮೀಯವಾಗಿದ್ದರು. ಅಮ್ಮ ಗದರಿಸುತ್ತಿದ್ದರು, ಅಪ್ಪ ಮುದ್ದಿಸ್ತಿದ್ರು. ಚೆನ್ನೈಗೆ ಹೋದ್ಮೇಲೆ ಅಪ್ಪನ ಜೊತೆ ಸ್ವಲ್ಪ ಅಂತರ ಆಯ್ತು. ಆದರೂ, ನಾನು ಬೆಂಗಳೂರಿಗೆ ಬಂದಾಗ ಅಥವಾ ಅಪ್ಪ ಚೆನ್ನೈಗೆ ಬಂದಾಗ ಎರಡ್ಮೂರು ದಿನ ಇರ್ತಿದ್ವಿ. ಆಮೇಲೆ ಅಪ್ಪನನ್ನು ಬಿಟ್ಟು ಹೋಗುವಾಗ ನಾನು ಅಳ್ತಿದ್ದೆ. ನಮ್ಮಬ್ಬರಿಗೂ ಸಂಕಟ ಆಗ್ತಿತ್ತು'' ಎಂದು ತಂದೆ ಜೊತೆಗಿನ ಬಾಂಧವ್ಯ ವಿವರಿಸಿದರು.
Recommended Video

ರಘುವೀರ್ ಕಿರಿಯ ಪುತ್ರಿ
ಈ ಮೊದಲೇ ಹೇಳಿದಂತೆ ರಘುವೀರ್ ಮತ್ತು ಗೌರಿ ಎರಡನೇ ವಿವಾಹವಾಗಿದ್ದರು. ಈ ದಂಪತಿಗೆ ರಕ್ಷಾ ಎಂಬ ಹೆಣ್ಣ ಮಗಳಿದ್ದಾರೆ. ರಕ್ಷಾ ರಘುವೀರ್ ಈಗ ಬೆಂಗಳೂರಿನಲ್ಲಿಯೇ ನೆಲೆಸಿದ್ದು, ಎಸ್‌ಎಸ್‌ಎಲ್‌ಸಿ ಓದುತ್ತಿದ್ದಾರೆ.