twitter
    For Quick Alerts
    ALLOW NOTIFICATIONS  
    For Daily Alerts

    ರಾಮ್ ಗೋಪಾಲ್ ವರ್ಮಾ ದೃಷ್ಟಿಯಲ್ಲಿ ದೇವರು-ಸೆಕ್ಸ್!

    By ರವೀಂದ್ರ ಕೊಟಕಿ
    |

    ರಾಮ್ ಗೋಪಾಲ್ ವರ್ಮಾ ಅಂದ ತಕ್ಷಣ ಶಿವ, ರಂಗೀಲಾ, ಸತ್ಯ ಭೂತ್ ನಂತ ಪ್ರಯೋಗಾತ್ಮಕ ಚಿತ್ರಗಳು ಕಣ್ಣ ಮುಂದೆ ಬಂದು ಹೋಗುತ್ತವೆ. ಆದರೆ ಸದ್ಯಕ್ಕೆ ರಾಮ್ ಗೋಪಾಲ್ ವರ್ಮಾ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಾತ್ಮಕ ಹೇಳಿಕೆಗಳು ಮತ್ತು ಹೆಣ್ಣುಮಕ್ಕಳ ಜೊತೆಗಿನ ವರ್ತನೆ ಗಳಿಂದಲೇ ಹೆಚ್ಚು ಗಮನ ಸೆಳೆಯುತ್ತಿದ್ದಾರೆ.

    ಆದರೆ ಇಂತಹ ರಾಮ್ ಗೋಪಾಲ್ ವರ್ಮಾ ಒಳಗೂ ಒಬ್ಬ ತತ್ವಜ್ಞಾನಿ ಇದ್ದಾನೆ. ಅದು ದೇವರ ಅಸ್ತಿತ್ವದ ಬಗ್ಗೆ ಇರಬಹುದು ಕಾಮದ ಬಗ್ಗೆ ಆಗಬಹುದು ವರ್ಮಾ ನೇರವಾದ ಅಭಿಪ್ರಾಯವನ್ನು ಹಂಚಿಕೊಳ್ಳುತ್ತಾರೆ. ಮೂಲತಃ ನಾಸ್ತಿಕರಾದ ವರ್ಮಾ ದೇವರ ಬಗ್ಗೆತಮ್ಮ ಅಭಿಪ್ರಾಯವನ್ನು ಹೀಗೆ ಹಂಚಿಕೊಳ್ಳುತ್ತಾರೆ.

    ಮೊದಲ ಲವರ್ ನ ಹಾಟ್ ಫೋಟೋ ಶೇರ್ ಮಾಡಿ ಅಚ್ಚರಿ ಮೂಡಿಸಿದ ರಾಮ್ ಗೋಪಾಲ್ ವರ್ಮಾಮೊದಲ ಲವರ್ ನ ಹಾಟ್ ಫೋಟೋ ಶೇರ್ ಮಾಡಿ ಅಚ್ಚರಿ ಮೂಡಿಸಿದ ರಾಮ್ ಗೋಪಾಲ್ ವರ್ಮಾ

    'ದೇವರು ಎಂಬ ವಿಷಯ ಬಂದಾಗ ಮೊದಲು ಪ್ರಶ್ನೆ ಶುರುವಾಗುವುದೇ ನಮ್ಮನ್ನೆಲ್ಲ ಸೇರಿದಂತೆ ವಿಶ್ವವನ್ನು ಸೃಷ್ಟಿಸಿದವನು ಯಾರು? ಆನಂತರದ ಪ್ರಶ್ನೆ ಏತಕ್ಕಾಗಿ ಅವನು ಸೃಷ್ಟಿಸಿದ. ಹಾಗೆ ಸೃಷ್ಟಿಸಲು ಅವನಿಗಿದ್ದ ಅನಿವಾರ್ಯತೆ ಏನು? ಅವನು ನಮ್ಮನ್ನು ಸೃಷ್ಟಿಸಿದ ಕಾರಣಕ್ಕಾಗಿ ನಾವು ಅವನಿಗೆ ಏನನ್ನು ಮಾಡಬೇಕು? ಈ ಮೂರು ಪ್ರಶ್ನೆಗಳಲ್ಲೇ ದೇವರ ಹುಡುಕಾಟವಿದೆ. ನನ್ನ ಬಾಲ್ಯದಲ್ಲಿ ವಿನಾಯಕ ಚತುರ್ಥಿಯ ಸಂದರ್ಭದಲ್ಲಿ ನಮ್ಮ ತಾಯಿ ಮೂರು ದಿನ ವಿನಾಯಕನ ಮುಂದೆ ನನ್ನ ಶಾಲೆಯ ಎಲ್ಲಾ ಪುಸ್ತಕಗಳನ್ನು ಇಟ್ಟು ಪೂಜೆ ಮಾಡುತ್ತಿದ್ದಳು. ಹೀಗೆ ಮಾಡುವುದರಿಂದ ನನಗೆ ವಿದ್ಯೆ ಬರುತ್ತದೆ ಎಂದು ಆಕೆ ನಂಬಿದ್ದಳು. ಆದರೆ ನನಗೆ ಆ ಮೂರು ದಿನ ಓದು ತಪ್ಪಿಸಿಕೊಳ್ಳುವ ಸಂತೋಷ ಸಿಗುತ್ತಿತ್ತು. ನಮ್ಮ ಜವಾಬ್ದಾರಿಗಳನ್ನು ಹೇಗೆ ನುಣುಚಿಕೊಳ್ಳಬಹುದು ಅನ್ನೋದು ನಾನು ತಾಯಿಯಿಂದಲೇ ಮೊದಲ ಕಲಿತಿದ್ದು. ಆಕೆ ನನ್ನ ಓದಿನ ಭಾರವನ್ನು ದೇವರ ಮೇಲೆ ಹಾಕಿಬಿಟ್ಟಳು. ಈಗ ನಾನು ಸರಿಯಾಗಿ ಕಲಿಯದೇ ಹೋದರೆ ಅದಕ್ಕೆ ಹೊಣೆಗಾರ ಯಾರು? ಮುಂದೆ ಓದಿ...

    ದೈವ ಸಂಶಯ ಹುಟ್ಟಿದ್ದು ಆಗಲೇ

    ದೈವ ಸಂಶಯ ಹುಟ್ಟಿದ್ದು ಆಗಲೇ

    ಬಹುತೇಕ ಪೋಷಕರು ತಮ್ಮ ಜವಾಬ್ದಾರಿಯನ್ನು ನೋಡಿಕೊಳ್ಳುವುದಕ್ಕೆ ದೇವರ ಮೇಲೆ ಭಾರವನ್ನು ಹಾಕುತ್ತಾರೆ. ಇನ್ನು ನನಗೆ ಯುಕ್ತ ವಯಸ್ಸು ಬಂದಾಗ ನಾನು ಜೀವನದಲ್ಲಿ ಕಂಡುಕೊಂಡ ಇನ್ನೊಂದು ಮಹತ್ವದ ಘಟನೆ, ನನ್ನ ಅಜ್ಜಿ ಆಕೆ ಜೀವನ ತುಂಬಾ ರಾಮ ಕೋಟಿಯನ್ನು ಬರೆದಳು. ಬೆಳಗ್ಗಿನಿಂದ ರಾತ್ರಿಯವರೆಗೆ ಅದೊಂದೇ ನಿತ್ಯದ ಕಾಯಕವಾಗಿತ್ತು. ಅಂತಹ ಆಕೆಯ ಕೊನೆಯ ದಿನಗಳಲ್ಲಿ ಪ್ಯಾರಲಿಸಿಸ್ ಆಯ್ತು, ಆ ಸಂದರ್ಭದಲ್ಲಿ ಆಕೆಯನ್ನು ಎಲ್ಲರಿಂದ ದೂರವಿಟ್ಟು ಒಂದು ರೂಮಿನಲ್ಲಿ ಇಡಲಾಗಿತ್ತು. ಆಕೆ ಹತ್ತಿರಕ್ಕೆ ಹೋಗಲು ಕೂಡ ಅನೇಕರು ಭಯ ಪಡುತ್ತಿದ್ದರು. ಅನೇಕ ಸಾರಿ ಆಕೆಯ ಮೈಮೇಲೆ ಜಿರಳೆಗಳು ಓಡಾಡುವುದನ್ನು ನಾನೇ ನೋಡಿದ್ದೆ. ಅಷ್ಟೊಂದು ದೈವಭಕ್ತಳಾದ ಆಕೆಗೆ ಆ ದೇವರು ಕೊನೆಗಾಲದಲ್ಲಿ ಈ ಶಿಕ್ಷೆ ಯಾಕೆ ಕೊಟ್ಟ? ಆಕೆ ಕೊನೆ ಕಾಲದಲ್ಲಿ ನರಳಿ ನರಳಿ ಸತ್ತಳು. ಆಗಲೇ ನನಗೆ ದೈವ ಎಂಬುವುದರ ಬಗ್ಗೆ ಒಂದು ಸಂಶಯ ಶುರುವಾಗಿದ್ದು.

    ದೇವರು ಅಂದ್ರೆ ಯಾರು?

    ದೇವರು ಅಂದ್ರೆ ಯಾರು?

    ದೈವದ ಬಗ್ಗೆ ಅನೇಕ ಸಂಶಯಗಳು ಬಂದಾಗ ಸಮರ್ಪಕವಾದ ಉತ್ತರವನ್ನು ನೀಡುವುದರ ಬದಲು ದೇವರನ್ನು ಸಮರ್ಥಿಸಿಕೊಳ್ಳುವುದು ನಾನು ನೋಡಿದ್ದು, ದೇವರು ಮಾಡಿದ್ದೆಲ್ಲ ಸರಿ ಎಂಬ ಭಾವನೆ ಸಣ್ಣ ಮಕ್ಕಳು ಇರುವಾಗಲೇ ಪೋಷಕರು ಬಿತ್ತುತ್ತಾರೆ. ದೇವರನ್ನು ನಂಬದೆ ಹೋದರೆ ಏನಾಗುತ್ತದೆ? ದೇವರಿಗೆ ಪೂಜೆ ಮಾಡದೆ ಹೋದರೆ ಏನಾಗುತ್ತದೆ? ತಕ್ಷಣ ಪೋಷಕರು ದೇವರು ನಿನ್ನ ಮೇಲೆ ಕೋಪ ಮಾಡಿಕೊಳ್ಳುತ್ತಾನೆ, ಶಾಪ ಕೊಡುತ್ತಾನೆ ಅಂತ ಭಯ ಬೀಳಿಸುತ್ತಾರೆ ಅದನ್ನೇ ಜೀವನ ಪೂರ್ತಿ ನಮ್ಮಲ್ಲಿ ಉಳಿಸಿ ಬಿಡುತ್ತಾರೆ. ಈ ಭಯದ ಮನೋಭಾವದಿಂದಲೇ ದೇವರ ಬಗ್ಗೆ ಮುಕ್ತವಾದ ಚರ್ಚೆ ಪ್ರಪಂಚದ ಯಾವ ಧರ್ಮದವರು ಕೂಡ ಮಾಡುವುದಿಲ್ಲ. ಆದರೆ ಪ್ರಪಂಚದಲ್ಲಿ ಒಂದು ಶಕ್ತಿ ಎಂಬುದು ಇರಲೇಬೇಕು. ಅದು ಇಡೀ ವಿಶ್ವವನ್ನು ತನ್ನದೇ ಆದ ರೀತಿಯಲ್ಲಿ ರೂಪಿಸಿದೆ. ಅದನ್ನೇ ಜಗತ್ತು ದೇವರು ಅಂತ ಕರೆದಿರಬಹುದು.

    ನಟಿಯ ಜೊತೆ ಮಿತಿಮೀರಿದ ರಾಮ್ ಗೋಪಾಲ್ ವರ್ಮಾ ವರ್ತನೆ: ವಿಡಿಯೋ ವೈರಲ್ನಟಿಯ ಜೊತೆ ಮಿತಿಮೀರಿದ ರಾಮ್ ಗೋಪಾಲ್ ವರ್ಮಾ ವರ್ತನೆ: ವಿಡಿಯೋ ವೈರಲ್

    ದೇವರ ಕಾನ್ಸೆಪ್ಟ್ ನಲ್ಲಿ ನಂಬಿಕೆ ಇಲ್ಲ

    ದೇವರ ಕಾನ್ಸೆಪ್ಟ್ ನಲ್ಲಿ ನಂಬಿಕೆ ಇಲ್ಲ

    ಒಂದು ಉತ್ತಮ ಜಗತ್ತಿಗಾಗಿ ಅದು ದೇವರು ಎಂಬುದಾದರೆ ಅದನ್ನು ನಾನು ನಂಬುತ್ತೇನೆ. ಆದರೆ ಅದಕ್ಕೊಂದು ಹೆಸರನ್ನು ಕೊಟ್ಟು ಅದನ್ನು ನಾನು ಪೂಜಿಸುವುದು ಅಥವಾ ಗೌರವಿಸುವುದಿಲ್ಲ. ಏಕೆಂದರೆ ನೀವು ಯಾವುದೇ ಹೆಸರನ್ನು ಕೊಟ್ಟು ದೇವರನ್ನು ಪೂಜಿಸಿದಾಗ ನೀವು ಮಾಡುವ ಎಲ್ಲಾ ಕಾರ್ಯಗಳಲ್ಲಿ ಕೂಡ ದೇವರಿಗೆ ನೀವು ಲಂಚವನ್ನು ಕೊಡುತ್ತೀರಿ, ನನ್ನ ಪಾಪಗಳನ್ನು ಕ್ಷಮಿಸಿ ಅಂತ ಕೇಳಿಕೊಳ್ಳುತ್ತೀರಿ, ನನಗೆ ಇಷ್ಟು ದುಡ್ಡು ಸಿಕ್ಕರೆ ನಿನಗೆ ಇಷ್ಟು ದುಡ್ಡು ಕೊಡ್ತೀನಿ ಅಂತ ದೇವರಿಗೆ ನೀವು ಆಸೆಗಳನ್ನು ತೋರಿಸುತ್ತೀರಿ. ಇಂತಹ ದೇವರ ಕಾನ್ಸೆಪ್ಟ್ ನಲ್ಲಿ ನನಗೆ ಎಳ್ಳಷ್ಟು ನಂಬಿಕೆ ಇಲ್ಲ. ಆದರೆ ಇಡೀ ಜಗತ್ತನ್ನು ಒಂದು ಶಕ್ತಿ ನಿಯಂತ್ರಿಸುತ್ತಿದೆ ಅಂತ ಮಾತ್ರ ನಾನು ಖಂಡಿತ ವಿಶ್ವಾಸಿಸುತ್ತೇನೆ' ಅಂತ ವರ್ಮ ಕಡ್ಡಿಮುರಿದಂತೆ ದೇವರ ಬಗ್ಗೆ ಹೀಗೆ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.

    ಸೆಕ್ಸ್ ಅಂದರೆ ಅಶ್ಲೀಲವಲ್ಲ!

    ಸೆಕ್ಸ್ ಅಂದರೆ ಅಶ್ಲೀಲವಲ್ಲ!

    ದೇವರ ವಿಚಾರದಲ್ಲಿ ರಾಮ್ ಗೋಪಾಲ್ ವರ್ಮಾ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ ಹಾಗೆ ಕಾಮದ ವಿಚಾರದಲ್ಲಿ ಅವರು ತಮ್ಮ ಅಭಿಪ್ರಾಯವನ್ನು ಹೀಗೆ ವ್ಯಕ್ತಪಡಿಸುತ್ತಾರೆ. 'ಪೋರ್ನ್ ಎಂಬ ಪದ ಕೇಳಿದ ತಕ್ಷಣ ನಮ್ಮಲ್ಲಿ ಅನೇಕರಿಗೆ ಅದು ಅಶ್ಲೀಲತೆ ಅಂತ ಅನಿಸುತ್ತದೆ. ಹಾಗೆ ಅನಿಸಲಿಕ್ಕೆ ಕಾರಣ ಅದನ್ನು ಅಶ್ಲೀಲ ಎಂದ ಸಮಾಜವೇ ನಿರ್ಣಯಿಸಿ ಬಿಟ್ಟಿರುವುದು. ಸಮಾಜ ಚಲನೆ ಮತ್ತು ಮನುಷ್ಯನಿಗೆ ಮನೋಲ್ಲಾಸ ಎಂಬುದು ಉಂಟಾಗುವುದು ಈ ಸೆಕ್ಸ್ ಮೂಲಕವೇ.

    ಬ್ರಿಟಿಷರು ಬರುವುದಕ್ಕೆ ಮುಂಚೆ

    ಬ್ರಿಟಿಷರು ಬರುವುದಕ್ಕೆ ಮುಂಚೆ

    ಪ್ರಾಚೀನ ಶಿಲ್ಪಕಲೆಯನ್ನು ನಾವು ಒಮ್ಮೆ ಅವಲೋಕಿಸಿದರೆ ಅಲ್ಲಿ ಕಾಮಪ್ರಚೋದಕ ಭಂಗಿಗಳು ನಮ್ಮನ್ನು ಆಕರ್ಷಿಸುತ್ತವೆ. ನಮ್ಮ ಪೂರ್ವಿಕರಿಗೆ ಕಾಮ ಒಂದು ಸುಂದರವಾದ ಅನುಭವವಾಗಿತ್ತು. ಹೀಗಾಗಿಯೇ ಅದನ್ನ ಕಲಾವಿದರು, ಕವಿಗಳು, ವಿದ್ವಾಂಸರು ಮುಕ್ತವಾಗಿ ಅಭಿವ್ಯಕ್ತಗೊಳಿಸುತ್ತಿದ್ದರು. ಸಾಹಿತ್ಯ ಮತ್ತು ಶಿಲ್ಪಕಲೆ ಕಾಮದೊಂದಿಗೆ ಸಹಜವಾಗಿ ಅನುಸಂಧಾನ ವಾಗಿತ್ತು ಹೀಗಾಗಿ ಶೃಂಗಾರ ನಮ್ಮ ಕಾವ್ಯಪರಂಪರೆಯ ಒಂದು ಅದ್ಭುತವಾದ ಭಾಗವೇ ಆಗಿತ್ತು. ಬ್ರಿಟಿಷರು ಭಾರತಕ್ಕೆ ಬರುವುದಕ್ಕೆ ಮೊದಲು ಇಲ್ಲಿ ಕಾಮಕ್ಕೆ ಸಂಬಂಧಿಸಿದಂತೆ ಮುಕ್ತವಾದ ವಾತಾವರಣ ಸಹ ಇತ್ತು. ಅಂದಿನ ಕಾಲಘಟ್ಟದಲ್ಲಿ ಬ್ರಿಟಿಷ್ ಸಮಾಜ ಹೊಂದಿದ್ದ ಅಭಿಪ್ರಾಯವನ್ನು ಸಾರ್ವಜನಿಕವಾಗಿ ಒಪ್ಪುವಂತೆ ಮಾಡಲಾಯಿತು ಅದರ ಪರಿಣಾಮವಾಗಿಯೇ ಸೆಕ್ಸ್ ಎಂಬುದಕ್ಕೆ ಅಶ್ಲೀಲತೆ ಎಂಬುದನ್ನು ಕೂಡ ಜೋಡಿಸಲಾಯಿತು.

    ಕಾಮದ ಹಿಂದೆಯೂ ಬಲವಾದ ಕಾರಣ ಇರುತ್ತದೆ

    ಕಾಮದ ಹಿಂದೆಯೂ ಬಲವಾದ ಕಾರಣ ಇರುತ್ತದೆ

    ಒಬ್ಬ ವ್ಯಕ್ತಿಯನ್ನು ನೀವು ಹೊಡೆಯಬೇಕಾದರೆ ಅದರ ಹಿಂದೆ ಒಂದು ಕಾರಣವಿರುತ್ತದೆ. ಹಾಗೆಯೇ ಒಬ್ಬರ ಜೊತೆ ನೀವು ಒಂದು ಸುಖ ಅನುಭವಿಸುತ್ತೇವೆ ಎಂದರೆ ಅದರ ಹಿಂದೆಯೂ ಕೂಡ ಒಂದು ಕಾರಣವಿರುತ್ತದೆ. ಒಬ್ಬ ವ್ಯಕ್ತಿಯನ್ನು ನೀವು ಹೊಡೆಯಬೇಕಾದರೆ ಅದರ ಹಿಂದೆ ನಿಮಗೆ ಆ ವ್ಯಕ್ತಿಯ ಮೇಲೆ ದ್ವೇಷ ಅಥವಾ ಕೋಪ ಇರಬೇಕು. ಹಾಗೆಯೇ ಕಾಮವನ್ನು ಅನುಭವಿಸುವುದು ಕೂಡ. ಸೆಕ್ಸ್ ನ ಹಿಂದೆ ನಿಮ್ಮ ಮಕ್ಕಳ ಹುಟ್ಟಿಗೆ ಕಾರಣವಿರುತ್ತದೆ ಅದಕ್ಕಿಂತ ಹೆಚ್ಚಾಗಿ ಅದೊಂದು ನಿಮಗೆ ಮನೋಲ್ಲಾಸವನ್ನು ಸಹ ಕೊಡುತ್ತದೆ. ನೀವು ಇಷ್ಟವಿಲ್ಲದೆ ಅಥವಾ ಅಭಿರುಚಿ ಇಲ್ಲದೆ ನೀವು ಕಾಮವನ್ನು ಅನುಭವಿಸಲಾಗದು. ಹಸು ಹುಲ್ಲು ತಿನ್ನುತ್ತೆ ಸುಮ್ಮನಾಗುತ್ತದೆ, ಸಿಂಹ ಮಾಂಸ ತಿಂದು ಸುಮ್ಮನಾಗುತ್ತದೆ ಆದರೆ ಮನುಷ್ಯ ಜೀವಿ ಮಾತ್ರ ನಿತ್ಯ ಹೊಸ ಹೊಸ ಆಹಾರಗಳನ್ನು ಆಸ್ವಾದಿಸುತ್ತಾನೆ.

    ಸೆಕ್ಸ್ ಗೆ ಯಾವುದೇ ಮಡಿವಂತಿಕೆ ಇಲ್ಲ

    ಸೆಕ್ಸ್ ಗೆ ಯಾವುದೇ ಮಡಿವಂತಿಕೆ ಇಲ್ಲ

    ಒಂದೇ ತರದ ಆಹಾರ ಅವನಿಗೆ ಬೋರ್ ಹೊಡೆಯುತ್ತದೆ. ಸೆಕ್ಸ್ ಅನುಭವಿಸುವ ವಿಷಯದಲ್ಲೂ ಕೂಡ ಅವನಿಗೆ ಕೇವಲ ದೈಹಿಕ ಸುಖ ಮಾತ್ರವೇ ಸಂತೋಷನ ಕೊಡುವುದಿಲ್ಲ. ಕೆಲವೊಮ್ಮೆ ಅವನಿಗೆ ಪೋರ್ನ್ ನೋಡುವುದು ಅಥವಾ ಶೃಂಗಾರವನ್ನು ಓದುವುದು ಸಹ ಹೆಚ್ಚಿನ ಸಂತೋಷವನ್ನು ಕೊಡುತ್ತದೆ. ಯಾವುದು ನಿಮಗೆ ಸಂತೋಷವನ್ನುಂಟು ಮಾಡುತ್ತದೆ ಅದು ಖಂಡಿತ ಅಶ್ಲೀಲವಾಗಿ ಇರಲು ಸಾಧ್ಯವಿಲ್ಲ. ಸೆಕ್ಸ್ ಗೆ ಯಾವುದೇ ಮಡಿವಂತಿಕೆ ಇಲ್ಲ. ಆದರೆ ಅನುಭವಿಸಬೇಕು ಎಂದು ಬಯಸುವವರು ಒಳಗೆ ಮಡಿವಂತಿಕೆ ಇದ್ದರೆ ಅದು ಸೆಕ್ಸ್ ನ ತಪ್ಪಲ್ಲ'. ಒಬ್ಬ ತತ್ವಜ್ಞಾನಿಯಂತೆ ರಾಮ್ ಗೋಪಾಲ್ ವರ್ಮಾ ಹೀಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುತ್ತಾರೆ.

    English summary
    Director Ram Gopal Varma Talks Openly about God and Sex.
    Tuesday, August 31, 2021, 13:47
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X