twitter
    For Quick Alerts
    ALLOW NOTIFICATIONS  
    For Daily Alerts

    ಡಾ ರಾಜ್ ಬಿಡುಗಡೆ ನಂತರ ಎಸ್ ಎಂ ಕೃಷ್ಣ ಮೇಲೆ ಬಂದ ಅಪವಾದ ಏನು?

    |

    ಡಾ ರಾಜ್ ಕುಮಾರ್ ಅವರನ್ನು ಅಪಹರಿಸಿ ಸುಮಾರು 100ಕ್ಕೂ ಹೆಚ್ಚು ದಿನಗಳ ಕಳೆದಿದ್ದವು. ಸರ್ಕಾರದ ಭಾರಿ ಪ್ರಯತ್ನ ಫಲ ಕೊಟ್ಟಿರಲಿಲ್ಲ. ಕೊನೆಯದಾಗಿ ಡಾ ಶುಭಾ ಅವರ ನೆರವಿನಿಂದ ವೀರಪ್ಪನ್ ಜೊತೆಗೆ ಸಂಧಾನ ಸಾಧಿಸುವಲ್ಲಿ ಯಶಸ್ವಿಯಾಯಿತು.

    108 ದಿನಗಳ ಬಳಿಕ ಅಣ್ಣಾವ್ರ ಬಿಡುಗಡೆಯಾಯಿತು. ರಾಜ್ ಕುಮಾರ್ ಅವರನ್ನು ಕರೆದುಕೊಂಡು ಬಂದ ನಂತರ ಕೆಲವು ಬೆಳವಣಿಗೆಗಳು ಆದವು. ಈ ನಡುವೆ ಅಂದಿನ ಮುಖ್ಯಮಂತ್ರಿಯಾಗಿದ್ದ ಎಸ್ ಎಂ ಕೃಷ್ಣ ಅವರಿಗೆ ಈ ವಿಚಾರದಲ್ಲಿ ಯಾವುದೇ ಕ್ರೆಡಿಟ್ ಸಿಕ್ಕಿಲ್ಲ ಎಂಬ ಮಾತು ಪ್ರಕಟವಾಗಿದೆ.

    ಡಾ ರಾಜ್ ಬಿಡುಗಡೆ ಅಂತಿಮ ಕ್ಷಣದಲ್ಲಿ ಸಹಾಯಕ್ಕೆ ಬಂದ ವೈದ್ಯೆ ಯಾರು? ಡಾ ರಾಜ್ ಬಿಡುಗಡೆ ಅಂತಿಮ ಕ್ಷಣದಲ್ಲಿ ಸಹಾಯಕ್ಕೆ ಬಂದ ವೈದ್ಯೆ ಯಾರು?

    ಹಾಗಿದ್ರೆ, ರಾಜ್ ಬಿಡುಗಡೆ ನಂತರ ಏನೆಲ್ಲಾ ಬೆಳವಣಿಗೆ ಆಯ್ತು? ಎಸ್ ಎಂ ಕೃಷ್ಣ ಆತ್ಮಕಥೆಯಲ್ಲಿರುವ ಪ್ರಮುಖ ಅಂಶಗಳೇನು? ಮುಂದೆ ಓದಿ....

    ಸರ್ಕಾರಕ್ಕೆ ಸಹಾಯ ಮಾಡಿದ ಶುಭಾ

    ಸರ್ಕಾರಕ್ಕೆ ಸಹಾಯ ಮಾಡಿದ ಶುಭಾ

    ಪೊಲೀಸ್ ಮತ್ತು ಅರಣ್ಯ ಇಲಾಖೆಗಳಿಗೆ ಬಹಳ ದಿನಗಳಿಂದ ಚಳ್ಳೆಹಣ್ಣು ತಿನ್ನಿಸಿದ ಈ ಸಂದರ್ಭದಲ್ಲಿ ಡಾ. ಶುಭಾ ಸಹಾಯ ಮಾಡಿದರು. ಡಾ. ಶುಭಾ ವೀರಪ್ಪನ್ ನ ಸಂಪರ್ಕ ಸಾಧಿಸಿ ರಾಜಕುಮಾರ್ ಅವರನ್ನು ಬಿಡುಗಡೆಗೊಳಿಸಲು ಒಪ್ಪಿಸಿದ್ದಳು. ಆಕೆ ಡಾಕ್ಟರ್ ಆಗಿ ಆತನಿಗೆ ಚಿಕಿತ್ಸೆ ಕೊಟ್ಟಿರಬಹುದು, ನಿರ್ದಿಷ್ಟ ಸ್ಥಳವೊಂದರಲ್ಲಿ ರಾಜಕುಮಾರ್ ರವರನ್ನು ವೀರಪ್ಪನ್ ಒಪ್ಪಿಸುವುದಾಗಿ ಕೊಳತ್ತೂರು ಮಣಿ ನನಗೆ ಸಂದೇಶ ಕಳುಹಿಸಿದರು. ನಾವು ಅಲ್ಲಿಗೆ ಹೆಲಿಕಾಪ್ಟರ್ ಕಳುಹಿಸಿದವು. ರಾಜಕುಮಾರ್‌ರವರು ಬಂದರು. ಬೆಂಗಳೂರಿನಲ್ಲಿ ಅವರನ್ನು ಮೆರವಣಿಗೆ ಮೂಲಕ ಕರೆದುಕೊಂಡು ಬರಲಾಯಿತು.

    ನನ್ನ ಹೆಸರು ಹೇಳಲೇ ಇಲ್ಲ

    ನನ್ನ ಹೆಸರು ಹೇಳಲೇ ಇಲ್ಲ

    ವಿಧಾನಸೌಧದಲ್ಲಿ ಅವರು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಮರೆತು ಕೂಡ ಅವರು ನನ್ನ ಹೆಸರನ್ನು ತೆಗೆದುಕೊಳ್ಳಲಿಲ್ಲ. ಅದು ಉದ್ದೇಶಪೂರ್ವಕವಾಗಿಯೇ ಮಾಡಿದ್ದೂ ಆಥವಾ ಮರೆತರೋ ಗೊತ್ತಿಲ್ಲ. ಡಾ ರಾಜಕುಮಾರ್ ಬಿಡುಗಡೆಯಾಗಿ ಬಂದಮೇಲೆ ನ್ಯಾಷನಲ್ ಕಾಲೇಜ್ ಆವರ ಬೃಹತ್ ಸಾರ್ವಜನಿಕ ಸಭೆ ಏರ್ಪಾಡಾಗಿತ್ತು. ಅಲ್ಲಿ ನಾನು ಹೋಗಿದ್ದೆ.

    ಎಸ್ ಎಂ ಕೃಷ್ಣಗೆ ಕರೆ ಮಾಡಿದ್ದ ವೀರಪ್ಪನ್ ಕೊಟ್ಟ ಎಚ್ಚರಿಕೆ ಏನಾಗಿತ್ತು?ಎಸ್ ಎಂ ಕೃಷ್ಣಗೆ ಕರೆ ಮಾಡಿದ್ದ ವೀರಪ್ಪನ್ ಕೊಟ್ಟ ಎಚ್ಚರಿಕೆ ಏನಾಗಿತ್ತು?

    ರಾಜ್ ಕರೆತರುವ ಪ್ರಯತ್ನದಲ್ಲಿ ನಿದ್ದೆ ಮಾಡಿರಲಿಲ್ಲ

    ರಾಜ್ ಕರೆತರುವ ಪ್ರಯತ್ನದಲ್ಲಿ ನಿದ್ದೆ ಮಾಡಿರಲಿಲ್ಲ

    ಫಿಲ್ಮ್ ಚೇಂಬರ್ ನವರು ಸಭೆಯನ್ನು ಏರ್ಪಡಿಸಿದ್ದರು. ಅದರ ಅಧ್ಯಕ್ಷರಾದ ತಲ್ಲಂ ನಂಜುಂಡಶೆಟ್ಟಿಯವರು ಭಾಷಣ ಮಾಡುತ್ತಾ ' ರಾಜಕುಮಾರ್ ಮನೆತನದವರು , ಎಸ್. ಎಂ. ಕೃಷ್ಣರವರು ಅವರ ಬಿಡುಗಡೆಗೆ ಮಾಡಿದ ಶ್ರಮ, ತ್ಯಾಗ ಇವುಗಳೆಲ್ಲವನ್ನು ಜನ್ಮಜನ್ಮಾಂತರಕ್ಕೂ ನೆನಪಿಸಿಕೊಳ್ಳಬೇಕು' ಎಂದು ಹೇಳಿದರು. ರಾಜಕುಮಾರ್‌ರವರನ್ನು ಅಪಹರಣ ಮಾಡಿದ ನೂರಾ ಎಂಟು ದಿನಗಳ ಕಾಲ ನಾನು ನಿದ್ದೆ ಮಾಡಲಿಲ್ಲ. ಒಟ್ಟಾರೆ ರಾಜಕುಮಾರ್‌ರವರನ್ನು ವೀರಪ್ಪನ್ ಬಿಡುಗಡೆ ಮಾಡಿದಾಗ ದೊಡ್ಡ ನಿಟ್ಟುಸಿರು ಬಿಟ್ಟೆ.

    ನಾಗಪ್ಪ ಅಪಹರಣ ಆಯ್ತು

    ನಾಗಪ್ಪ ಅಪಹರಣ ಆಯ್ತು

    ಇದಾದ ಸ್ವಲ್ಪ ದಿನದ ನಂತರ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಹನೂರು ಹತ್ತಿರ ಮಾಜಿ ಸಚಿವ ನಾಗಪ್ಪ ಅವರನ್ನು ವೀರಪ್ಪನ್ ಅಪಹರಿಸಿದ, ಇದು ಕೂಡ ನನ್ನ ಮಾನಸಿಕ ಸಮತೋಲನವನ್ನು ಕೆಣಕುವ ಘಟನೆ. ಪುನಃ ಗೋಪಾಲನ್ ಆಶ್ರಯ, ಮತ್ತೆ ನೀನು ಹೋಗಿ ಬಾ ಅಂತ ಹೇಳಿದೆ, ಆದರೆ ಆತ ಪ್ರತಿಕ್ರಿಯಿಸಲಿಲ್ಲ. ನಾಗಪ್ಪ ರಾಜಕಾರಣಿಯಾದ ಪ್ರಯುಕ್ತ ಚಾಮರಾಜನಗರ ಮೈಸೂರು ಭಾಗಗಳಲ್ಲಿ ತೀವ್ರ ಉದ್ವೇಗವಾಯಿತು. ನಾವು ಸಿದ್ಧತೆ ಮಾಡಿಕೊಳ್ಳುವ ಮುಂಚೆಯೇ ದುರಂತ ನಡೆದುಹೋಯಿತು. ನಾಗಪ್ಪ ಅವರ ಬದುಕು ದುರಂತದಲ್ಲಿ ಕೊನೆಯಾಯಿತು.

    ಎಸ್ ಎಂ ಕೃಷ್ಣ ಆತ್ಮಕಥೆಯಲ್ಲಿ ಡಾ ರಾಜ್ ಕಿಡ್ನಾಪ್ ಪ್ರಕರಣದ ರೋಚಕ ಕಥೆ ಬಹಿರಂಗಎಸ್ ಎಂ ಕೃಷ್ಣ ಆತ್ಮಕಥೆಯಲ್ಲಿ ಡಾ ರಾಜ್ ಕಿಡ್ನಾಪ್ ಪ್ರಕರಣದ ರೋಚಕ ಕಥೆ ಬಹಿರಂಗ

    ಸರ್ಕಾರ ಬದಲಾಗಿತ್ತು

    ಸರ್ಕಾರ ಬದಲಾಗಿತ್ತು

    ಇಷ್ಟು ಹೊತ್ತಿಗೆ ತಮಿಳುನಾಡಿನ ರಾಜಕೀಯ ಬದಲಾವಣೆಯಾಗಿ ಡಿಎಂಕೆಯ ಕರುಣಾನಿಧಿ ಹೋಗಿ ಅಣ್ಣಾ ಡಿಎಂಕೆಯ ಜಯಲಲಿತಾ ಅಧಿಕಾರಕ್ಕೆ ಬಂದಿದ್ದರು. ಡಾ. ರಾಜಕುಮಾರ್‌ರವರನ್ನು ಬಿಡಿಸಿಕೊಂಡು ಬರಲು ಮಾಡಿದ ಗಂಭೀರ ಪ್ರಯತ್ನವನ್ನು ಕೃಷ್ಣ ನಾಗಪ್ಪನವರನ್ನು ಬಿಡಿಸಿಕೊಂಡು ಬರಲು ಮಾಡಲಿಲ್ಲವೆಂಬ ಆಪಾದನೆ ಬಂತು. ಖಂಡಿತ ನನ್ನ ಕೆಲಸವನ್ನ ಪ್ರಾಮಾಣಿಕವಾಗಿ ಮಾಡಿದ್ದೆ.

    ಕ್ರೆಡಿಟ್ ಬಂದಿಲ್ಲ, ಅಪವಾದ ಬಂತು

    ಕ್ರೆಡಿಟ್ ಬಂದಿಲ್ಲ, ಅಪವಾದ ಬಂತು

    ರಾಜಕುಮಾರ್ ಅಪಹರಣದ ಕಾಲದಲ್ಲಿ ಕರುಣಾನಿಧಿ ಇದ್ದರು, ಗೋಪಾಲನ್ ‌ನಿಂದ ಹಿಡಿದು ಡಾ. ಶುಭಾ ತನಕ ಎಲ್ಲರೂ ಬೆಂಬಲ ಕೊಟ್ಟರು. ಆ ಘಟನೆಯ ನೂರಾ ಎಂಟು ದಿನಗಳು ದೊಡ್ಡ ಘಟನೆಯೆ. ನಾಗಪ್ಪ ಅಪಹರಣವಾದಾಗ ನಾವು ಸಿದ್ಧತೆಮಾಡಿಕೊಳ್ಳುವಷ್ಟರಲ್ಲಿಯೇ ಅವರ ಬದುಕು ದುರಂತವಾಯಿತು ಸಲವಾಗಲಿಲ್ಲ. ಜೊತೆಗೆ ಅಪವಾದ ಬಂತು. ಡಾ . ರಾಜಕುಮಾರ ರವರನ್ನು ಬಿಡಿಸಿಕೊಂಡು ಬರಲು ಮಾಡಿದ ಪ್ರಯತ್ನಕ್ಕೆ ಕ್ರೆಡಿಟ್ ಏನು ಬರಲಿಲ್ಲ . ನನ್ನ ಪ್ರಯತ್ನವನ್ನು. ಕಾಂಗ್ರೆಸ್ಸಿನ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿಯವರು ಹಾಗೂ ನನ್ನ ಸಹೋದ್ಯೋಗಿಗಳು ಒಪ್ಪಿಕೊಂಡಿದ್ದರು.

    ರಾಜ್ ಕುಮಾರ್ ಅಪಹರಣದ ಕುರಿತು ಹೆಚ್ಚಿನ ಮಾಹಿತಿ ತಿಳಿಯಲು ಈ

    ಕೆಳಗಿನ ಲಿಂಕ್ ಕ್ಲಿಕ್ ಮಾಡಿ

    ಎಸ್ ಎಂ ಕೃಷ್ಣ ಆತ್ಮಕಥೆಯಲ್ಲಿ ಡಾ ರಾಜ್ ಕಿಡ್ನಾಪ್ ಪ್ರಕರಣದ ರೋಚಕ ಕಥೆ ಬಹಿರಂಗಎಸ್ ಎಂ ಕೃಷ್ಣ ಆತ್ಮಕಥೆಯಲ್ಲಿ ಡಾ ರಾಜ್ ಕಿಡ್ನಾಪ್ ಪ್ರಕರಣದ ರೋಚಕ ಕಥೆ ಬಹಿರಂಗ

      ಎಸ್ ಎಂ ಕೃಷ್ಣಗೆ ಕರೆ ಮಾಡಿದ್ದ ವೀರಪ್ಪನ್ ಕೊಟ್ಟ ಎಚ್ಚರಿಕೆ ಏನಾಗಿತ್ತು? ಎಸ್ ಎಂ ಕೃಷ್ಣಗೆ ಕರೆ ಮಾಡಿದ್ದ ವೀರಪ್ಪನ್ ಕೊಟ್ಟ ಎಚ್ಚರಿಕೆ ಏನಾಗಿತ್ತು?

    ಡಾ ರಾಜ್ ಬಿಡುಗಡೆ ಅಂತಿಮ ಕ್ಷಣದಲ್ಲಿ ಸಹಾಯಕ್ಕೆ ಬಂದ ವೈದ್ಯೆ ಯಾರು?

    English summary
    Karnataka Ex chief minister SM Krishna Wrote his own biography and he revealed Dr Rajkumar kidnap incident in this book.
    Tuesday, January 7, 2020, 12:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X