For Quick Alerts
  ALLOW NOTIFICATIONS  
  For Daily Alerts

  ನೂತನ ತಳಿಯ “ಹಿಪ್ಪಿ”ಗಳನ್ನು ಸೃಷ್ಟಿಸುತ್ತಿದೆಯೇ ಕೋವಿಡ್-19 ಕಾಲಘಟ್ಟ?

  By ಡಾ.ಎ.ಶ್ರೀಧರ, ಮನೋವಿಜ್ಞಾನಿ
  |

  ಬೆಂಗಳೂರು ನಗರದಲ್ಲಿ ಮಾದಕ ವಸ್ತುಗಳ ಸರಬರಾಜು ವ್ಯಾಪಕವಾಗಿದೆ ಎನ್ನುವುದನ್ನು ಮತ್ತೆ ಸಾಬೀತುಪಡಿಸಿದೆ ಮೊನ್ನೆಯಷ್ಟೆ ನಾಕರ್ಟಿಕ್ಸ್‌ ವಿರೋಧ ಪಡೆ (ಎನ್‌ಸಿಬಿ)ಯವರು ನಡೆಸಿದ ದಾಳಿ. ದೇಶದ ಉದ್ದಗಲಕ್ಕೂ ಮಾದಕ ವಸ್ತುಗಳ ಅವಲಂಬಿಗಳಾಗಿರುವವರು ದೊಡ್ಡ ಸಂಖ್ಯೆಯಲ್ಲಿದ್ದಾರೆ ಎನ್ನುವುದನ್ನು ಪದೇಪದೇ ಮಾಧ್ಯಮಗಳು ತಿಳಿಸುತ್ತಲೇ ಬಂದಿವೆ. ಹೀಗಿದ್ದಾಗ್ಯೂ ಮಾದಕ ವಸ್ತುಗಳ್ನು ಅವಲಂಬಿಸಿರುವವರ ಸಂಖ್ಯೆಯೇನು ಕಡಿಮೆಯಾಗಿಲ್ಲ. ಶಾಲಾ-ಕಾಲೇಜು ವಿದ್ಯಾರ್ಥಿಗಳು, ವೃತ್ತಿ ಜೀವನ ಆರಂಭಿಸಿ ಮಾದಕವಸ್ತುಗಳ ಸೇವನೆಯತ್ತ ವಾಲುತ್ತಿರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಇನ್ನು ನಿನ್ನೆ ಮೊನ್ನೆಯ ಪೊಲೀಸರ ದಾಳಿಯಿಂದ ತಿಳಿದು ಬಂದ ಸಂಗತಿ ಎಂದರೆ ಮನರಂಜನೆಯ ಕ್ಷೇತ್ರದಲ್ಲಿರುವವರೂ ನಶೆ ಏರುವ ವಸ್ತುಗಳ ಅವಲಂಬಿಗಳಾಗುತ್ತಿದ್ದಾರೆ ಎನ್ನುವುದು ಇಂದಿನ ಯುವಜನರ ಮನದ ದುಸ್ಥಿತಿಯ ಸಂಕೇತ ಎನಿಸುತ್ತದೆ. ಇದು ದೇಶ ಸಾಗುತ್ತಿರುವ ಗತಿಯನ್ನೂ ಸೂಚಿಸುತ್ತದೆ.

  ಅಂದು ರಾಜ್ ಕುಮಾರ್ ಇಂದು ರಚಿತಾ | Rachita Ram statement | Filmibeat Kannada

  ಇಂತಹದ್ದೇ ಪರಿಸ್ಥಿತಿಯೊಂದು 1970ರ ದಶಕದಲ್ಲಿ ವಿಶ್ವದಾದ್ಯಂತ ಹರಿಡಿತ್ತು. ಅಮೆರಿಕದ "ಹಿಪ್ಪಿ ಸಂಸ್ಕೃತಿ" ಎನ್ನುವ ಹೊಸ ಸಾಮಾಜಿಕ ಮನೋಭಾವ ಕೆಲ ದೇಶದ ಯುವಜನರಲ್ಲಿ ಪ್ರಬಲವಾಗಿ ಕಂಡುಬಂದು ಲಕ್ಷಾಂತರ ಯುವಜನರನ್ನು ಆರ್ಕಷಿಸಿತು. ಸಾಮಾಜಿಕ ಕಟ್ಟುಪಾಡುಗಳಿಂದ ಹೊರಬಂದು ಹೊಸ ವ್ಯವಸ್ಥೆಯತ್ತ ಹುಡುಕಾಟ ಮಾಡಿದವರು, ಸಾಹಿತ್ಯದ ವಲಯದಲ್ಲಿದ್ದ ಕಟ್ಟಪಾಡುಗಳನ್ನು ಬಹಿಷ್ಕರಿಸಿ ನೂತನ ಚೈತನ್ಯದ ಶೋಧದಲ್ಲಿದ್ದವರು, ಸಂಗೀತ, ಪರಸ್ಪರ ಸಂಬಂಧ. ವಿನೂತನ ಕಾಮಾಕಾಂಕ್ಷೆಗಳಿಂದ ಉದ್ರೇಕ ಪಡೆಯುವ ಸಾಹಸ, ಆಧ್ಯಾತ್ಮಿಕ ಅನುಭವಗಳನ್ನು ಪಡೆಯಲು ನಡೆಸಿದ ಪ್ರಯತ್ನಗಳು- ಹೀಗೆ ಹತ್ತು ಹಲವಾರು ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳು ಚಿಗುರುವಂತೆ ಮಾಡಿದ ಸಮಯವದು. ಆಗ ಮಾದಕ ವಸ್ತುಗಳ ಸೇವನೆ ಮತ್ತು ಅವಲಂಬನೆಯೂ ಹೆಚ್ಚಾಗಿಯೇ ಇತ್ತು; ಅದರಲ್ಲಿಯೂ ಅಮೆರಿಕದ ಯುವ ಜನತೆಯ ವ್ಯಾಮೋಹ ವಾಲಿದ್ದು ನಶೆಯ ನೆಲೆಗಳತ್ತ. ಅದೆಷ್ಟೋ ಯುವಜನರು ಮಾದಕ ವಸ್ತುಗಳಿಗೆ ದಾಸರಾಗಿ ಜೀವನ ಹಾಳು ಮಾಡಿಕೊಂಡಿದ್ದರ ನಿದರ್ಶನಗಳು ಸಾಕಷ್ಟಿವೆ.

   ಡ್ರಗ್ಸ್, ಚಿತ್ರರಂಗ ಮತ್ತು ಬೆಂಗಳೂರು: ನಿವೃತ್ತ ಪೊಲೀಸ್ ಅಧಿಕಾರಿಯ ವಿಶ್ಲೇಷಣೆ ಡ್ರಗ್ಸ್, ಚಿತ್ರರಂಗ ಮತ್ತು ಬೆಂಗಳೂರು: ನಿವೃತ್ತ ಪೊಲೀಸ್ ಅಧಿಕಾರಿಯ ವಿಶ್ಲೇಷಣೆ

  ಮಾದಕ ವಸ್ತು ವ್ಯಸನಕ್ಕೆ ಹಲವು ಕಾರಣಗಳು

  ಮಾದಕ ವಸ್ತು ವ್ಯಸನಕ್ಕೆ ಹಲವು ಕಾರಣಗಳು

  ಹೀಗಾಗಲೂ ಕಾರಣಗಳು ಏನಿದ್ದಿರಬಹುದು ಎನ್ನುವುದರ ಬಗ್ಗೆ ಅಧ್ಯಯನಗಳು ಬೇಕಾದಷ್ಟು ಹೊರಬಂದವು. ರಾಜಕೀಯ,ಆರ್ಥಿಕ ಸಮಸ್ಯೆಗಳು ಈ ಹೊಸತನದ ಮಾನಸಿಕ ಸ್ವರೂಪಕ್ಕೆ ಪ್ರೇರಣೆ ಎನ್ನುವ ಮಾತುಗಳು ಜೋರಾಗಿಯೇ ಕೇಳಿಬಂದಿತ್ತು. ಆ ಕಾಲಘಟ್ಟದಲ್ಲಿಯೇ ನನ್ನ ವಯೋಮಾನದವರ ಮನೋವಿಕಾಸವೂ ಆಗುತ್ತಿದ್ದರಿಂದ ಈ ಅಂಶಗಳು ಸತ್ಯದಿಂದ ದೂರವಲ್ಲ ಎನಿಸುತ್ತದೆ. ಜನನಾಯಕತ್ವದಲ್ಲಿ ಇದ್ದಂತಹ ಕೊರತೆ, ಹುರುಳಿಲ್ಲದ ಸಾಹಿತ್ಯಕ ವಲಯಗಳು, ಆತ್ಮವಿಶ್ವಾಸ ಕೆಡಿಸಿದ ಆಧ್ಯಾತ್ಮದ ಸಂಗತಿಗಳು ಅನೇಕ ಯುವಜನರ ಮನಸಲ್ಲಿ ಸಹಿಸಲಾಗದ ಆತಂಕ, ಅಸಹಾಯಕತೆಯನ್ನು ಸೃಷ್ಟಿಸಿತ್ತು. ಅಂದು ಇದರತ್ತ ಗಮನ ಹರಿಸಿದ ದೇಶಗಳು, ಜನನಾಯಕರು ಕಡಿಮೆ. ಹೀಗಿದ್ದಾಗ್ಯೂ ವಿಜ್ಞಾನ, ತಂತ್ರಜ್ಞಾನದ ನವೀನ ಶೋಧನೆ, ಬಳಕೆಗಳು ಹೊಸ ಜಾಯಮಾನದ ಚಿಂತನೆಗಳೊಂದಿಗೆ ಉತ್ತಮವಾಗಿ ಸ್ಪಂದಿಸಿತ್ತಾದರೂ ಸೃಜನತೆ, ಸ್ವಾತಂತ್ರ್ಯ ಮತ್ತು ಮುಕ್ತ ಮನೋಭಾವಗಳ ಮೇಲಿದ್ದ ಸಾಮಾಜಿಕ ಕಡಿವಾಣಗಳು ಭ್ರಮೆ, ಹುಸಿಗನಸುಗಳನ್ನೂ(ಯುವಜನರಲ್ಲಿ) ಉತ್ತೇಜಿಸಿತ್ತು. ಇವೆಲ್ಲದರ ಹಿನ್ನೆಲೆಯಲ್ಲಿಯೇ ಮಾದಕ ವಸ್ತುಗಳ ಅವಲಂಬನೆಯೂ ಹೆಚ್ಚಾಗಿತ್ತು.

  ಪರಿಣಾಮಕಾರಿ ಆರ್ಥಿಕ, ಸಾಮಾಜಿಕ ಸ್ವರೂಪದ ನಿಗ್ರಹ ಕ್ರಮಗಳು ಜಾರಿಗೆ ಬರಲಿಲ್ಲ

  ಪರಿಣಾಮಕಾರಿ ಆರ್ಥಿಕ, ಸಾಮಾಜಿಕ ಸ್ವರೂಪದ ನಿಗ್ರಹ ಕ್ರಮಗಳು ಜಾರಿಗೆ ಬರಲಿಲ್ಲ

  ಕಾಲಚಕ್ರ ಉರುಳುತ್ತಾ ಮುಂದುವರೆಯುತ್ತಿದ್ದಂತೆಯೇ ಹೊಸಪೀಳಿಗೆಯ ಉಲ್ಲಾಸ, ಆಕಾಂಕ್ಷೆ, ಆಕರ್ಷಣೆಗಳೂ ಬದಲಾಗುತ್ತಾ ಬಂದವು. ನಶೆಯ ಮೂಲಕ ಮನೋಲೋಕದಲ್ಲಿ ವಿಹರಿಸುವುದು ಸರಿ ಮತ್ತು ಸರಾಗ ಎಂದುಕೊಳ್ಳುವಂತಹ ವಿಚಾರಧಾರೆ ಯುವಜನರನ್ನು ಆಕರ್ಷಿಸಿ ಅವಲಂಬನೆಯನ್ನು ಹೆಚ್ಚಿಸಿತ್ತು. ಭ್ರಮೆಯ ಲೋಕವನ್ನು ಪ್ರವೇಶಿಸುವಂತೆ ಮಾಡಿದ್ದು ವಿಧವಿಧ ರೀತಿಯ ಮಾದಕ ವಸ್ತುಗಳು; ಕೆಲವು ರಾಸಾಯನಕ ಸ್ವರೂಪವನ್ನು ಹೊಂದಿದ್ದರೆ ಮತ್ತೆ ಕೆಲವು ಗಿಡಮೂಲಿಕೆಗಳಿಂದ ಹೊರಬಂದಿದ್ದವುಗಳು. ಜೊತೆಯಲ್ಲಿ ನಶೆ ಏರಿಸುವ ಪದಾರ್ಥಗಳ ಸ್ವರೂಪ, ಸೇವಿಸುವ ಪರಿ, ಸರಬರಾಜಿನ ವಿಧಾನ ಮತ್ತು ಅನುಭವಿಸುವ ಕ್ರಮಗಳೂ ಬದಲಾಗಿತ್ತು. ಈ ಬದಲಾವಣೆಗಳ ಜಾಡನ್ನು ಜನತೆ ಮತ್ತು ಸರಕಾರಗಳು ಗುರುತಿಸುವಲ್ಲಿ ಯಶಸ್ವಿಯಾಗಿದ್ದರೂ ಪರಿಣಾಮಕಾರಿ ಆರ್ಥಿಕ, ಸಾಮಾಜಿಕ ಸ್ವರೂಪದ ನಿಗ್ರಹ ಕ್ರಮಗಳು ಜಾರಿಗೆ ಬರಲಿಲ್ಲ. ಹೀಗಾಗಿ ನಶೆಯ ಪರಿಣಾಮಗಳನ್ನು ಉದಾಸೀನ ಮಾಡಿದ್ದು ಬಲ್ಲಸಂಗತಿ.

   ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ, ಅನಿಕಾ ಬಿಚ್ಚಿಟ್ಟ ಸೆಲೆಬ್ರಿಟಿಗಳ ನಂಟು! ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ, ಅನಿಕಾ ಬಿಚ್ಚಿಟ್ಟ ಸೆಲೆಬ್ರಿಟಿಗಳ ನಂಟು!

  ಮನರಂಜನೆ ಕ್ಷೇತ್ರಕ್ಕೂ ಮಾದಕ ವಸ್ತುಗಳ ಅವಲಂಬನೆಗೂ ಹತ್ತಿರದ ನೆಂಟು

  ಮನರಂಜನೆ ಕ್ಷೇತ್ರಕ್ಕೂ ಮಾದಕ ವಸ್ತುಗಳ ಅವಲಂಬನೆಗೂ ಹತ್ತಿರದ ನೆಂಟು

  ಅದರಲ್ಲಿಯೂ ಮನರಂಜನೆ, ವೃತ್ತಿ ಕ್ಷೇತ್ರದವರ ಗಳಿಕೆಗೂ ಮಾದಕ ವಸ್ತುಗಳ ಅವಲಂಬನೆಯ ರೀತಿಗೂ ಹತ್ತಿರದ ನೆಂಟು. ಈ ಪರಿಸ್ಥಿತಿ ಇಂದು ಮತ್ತಷ್ಟು ಗಂಭೀರವಾಗಿದೆ ಎನ್ನುವುದನ್ನು ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನಲ್ಲಿ ಮಾದಕ ವಸ್ತುಗಳ ಸರಬರಾಜುದಾರರ ಮೇಲೆ ನಡೆದ ಪೊಲೀಸು ದಾಳಿ ಸೂಚಿಸುತ್ತದೆ. ದುರದೃಷ್ಟಕರ ಸಂಗತಿ ಎಂದರೆ ಚಲನಚಿತ್ರಕ್ಕೆ ಸಂಬಂಧಿಸಿದ ದೊಡ್ಡ ವ್ಯಕ್ತಿಗಳು, ಕಲಾವಿದರು ಮಾದಕವಸ್ತುಗಳ ಸೇವನೆಯಲ್ಲಿ ಮುಂದಿದ್ದಾರೆ ಎನ್ನುವುದು.

  ಕೋವಿಡ್ 19 ಸಮಯದಲ್ಲಿ ಉಂಟಾಗಿರುವ ವಾತಾವರಣ ಕಾರಣವಿರಬಹುದು

  ಕೋವಿಡ್ 19 ಸಮಯದಲ್ಲಿ ಉಂಟಾಗಿರುವ ವಾತಾವರಣ ಕಾರಣವಿರಬಹುದು

  ಇನ್ನು ಕೊವಿಡ್-19 ರ ಸಮಯದಲ್ಲಿ ಉಂಟಾಗಿರುವಂತಹ ವಾತಾವರಣವೂ ಈ ಮಾದರಿಯ ಅವಲಂಬನೆಯ ಪ್ರಮಾಣ ಹೆಚ್ಚಿರುವುದಕ್ಕೆ ಕಾರಣವಾಗಿರಬಲ್ಲದು. ಸಂಪಾದನೆಯ ದಾರಿಗಳು ಸರಾಗವಾಗಿರದಿರುವುದು, ಸೃಜನತೆಯ ಮೇಲೆ ಒತ್ತಡಗಳು, ಸಂಪರ್ಕಗಳ ಮೇಲೆ ನಿರ್ಬಂಧ ಮತ್ತು ಒಳಮನಸಿನಲ್ಲಿ ರೋಗದ ಭೀತಿಯು ನಶೆ ಅವಲಂಬನೆಗೆ ಹಾದಿ ಮಾಡಿಕೊಟ್ಟಿರುತ್ತದೆ. ಜೊತೆಗೆ ಆಧುನಿಕ ಜೀವನ ಶೈಲಿ, ಶ್ರೀಮಂತಿಕೆಯ ಸೋಗು, ಪ್ರತಿಷ್ಠಿತ ವ್ಯಕ್ತಿಗಳ ಮಕ್ಕಳಿಗೆ ಸಿಗುತ್ತಿರುವ ಹಣ, ಮನ್ನಣೆ ಮತ್ತು ಪೋಷಕರ ಬೆಂಬಲವು ಸಾಮಾಜಿಕ ಸಂಹಿತೆ, ನೈತಿಕ ನಿಲುವುಗಳನ್ನು ಕಡೆಗಾಣಿಸಿರುವುದು ಎದ್ದು ಕಾಣುಸುತ್ತಿರುವ ಸಂಗತಿ. ನೀತಿ ರಹಿತ ರಾಜಕಾರಣಿ, ಅಧಿಕಾರಿಗಳ ನೆಂಟು ಕೂಡ ನಶೆ ಪದಾರ್ಥಗಳ ಸರಬರಾಜು, ಬಳಕೆ, ಅವಲಂಬನೆಗೆ ಕಾರಣ. ಇಂದಿನ ರಾಜಕೀಯ ವಾತಾವರಣವು ಗೊಂದಲ, ಕ್ಷೋಭೆಗಳಿಗೆ ಒಳಗಾಗಿದೆ ಎನ್ನುವುದು ಯುವಜನರ ಮನದಾಳದಲ್ಲಿದೆ. ಪತ್ರಿಭಟನೆ, ಪ್ರತಿರೋಧಗಳನ್ನು ಹತ್ತಿಕ್ಕುವ ರಾಜಕೀಯ ವ್ಯವಸ್ಥೆಯೂ ಸೃಜನ ಸಮುದಾಯದ ಪ್ರಜ್ಞೆಯ ಮೇಲೂ ದುಷ್ಪರಿಣಾಮ ಬೀರಬಲ್ಲದು. ಇವೂ ನಶೆ/ವ್ಯಸನಗಳು ಗಟ್ಟಿಯಾಗುವಂತೆ ಮಾಡಬಲ್ಲದೆನ್ನುವುದುನ್ನು ಮರೆಮಾಚಲಾಗದು.

  English summary
  Drug adiction and socity, and COVID 19 situation: A analysis of phsycologist A Shridhar.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X