For Quick Alerts
  ALLOW NOTIFICATIONS  
  For Daily Alerts

  ಅಪ್ರತಿಮ ಸೌಂದರ್ಯವತಿ ವಹೀದಾ ರೆಹಮಾನ್ ರೋಚಕ ಕಥೆ

  |

  ವಹೀದಾ ರೆಹಮಾನ್... ಬಾಲಿವುಡ್ ಚಿತ್ರರಂಗವನ್ನಾಳಿದ ಅದ್ಭುತ ನಟಿ ಮತ್ತು ಅಪ್ರತಿಮ ಸೌಂದರ್ಯವತಿ. ಬಾಲಿವುಡ್ ನ 'ಬೆಳದಿಂಗಳ ಬಾಲೆ' ಈ ವಹೀದಾ ರೆಹಮಾನ್ ಬಗ್ಗೆ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ. ಸೌಂದರ್ಯ, ನೃತ್ಯ, ಅಭಿನಯ.. ಈ ಮೂರು ಹದವಾಗಿ ಬೆರೆತಿರುವ ಪ್ರತಿಭಾವಂತ ನಟಿ. ದಕ್ಷಿಣ ಭಾರತದ ಈ ಸುಂದರಿ ಬಾಲಿವುಡ್ ಚಿತ್ರರಂಗದಲ್ಲಿ ಮಿಂಚುವ ಮೂಲಕ ಇಡೀ ದೇಶವನ್ನೇ ಬೆರಗುಗೊಳಿಸಿದ್ದಾರೆ.

  ಬಾಲಿವುಡ್ ನ ಅಂದಿನ ಟಾಪ್ ಸ್ಟಾರ್ ನಟರಾದ ರಾಜ್ ಕಪೂರ್, ದಿಲೀಪ್ ಕುಮಾರ್, ರಾಜೇಶ್ ಖನ್ನಾ ಮತ್ತು ಅಮಿತಾಬ್ ಬಚ್ಚನ್ ಸೇರಿದಂತೆ ದೊಡ್ಡ ದೊಡ್ಡ ಕಲಾವಿದರ ಜೊತೆಗೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ. ವಿಶೇಷ ಅಂದರೆ ಈ ಸ್ಟಾರ್ ನಟರು ವಹೀದಾ ರೆಹಮಾನ್ ಜೊತೆ ಅಭಿನಯಿಸಲು ನಾ ಮುಂದು ತಾ ಮುಂದು ಎನ್ನುತ್ತಿದ್ದರಂತೆ. ಆಕೆಯ ವ್ಯಕ್ತಿತ್ವ, ಅಭಿನಯ, ನೃತ್ಯ, ಸೌಂದರ್ಯಕ್ಕೆ ಮಾರು ಹೋಗದವರೇ ಇಲ್ಲ.

  ತೆಲುಗು ಚಿತ್ರರಂಗದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ವಹೀದಾ, ತೆಲುಗು ಮತ್ತು ತಮಿಳಿನಲ್ಲಿ ಎರಡೆರಡು ಸಿನಿಮಾ ಮಾಡುತ್ತಿದ್ದಂತೆ ಬಾಲಿವುಡ್ ಕಡೆ ಪಯಣ ಬೆಳೆಸುತ್ತಾರೆ. ವಹೀದಾ ಅವರ ಸಿನಿ ಜೀವನದ ರೋಚಕ ಕಥೆ ಹೇಗಿದೆ ಗೊತ್ತಾ? ಮುಂದೆ ಓದಿ..

  ಸಾಂಪ್ರದಾಯಿಕ ಉರ್ದು ಕುಟುಂಬದ ಹೆಣ್ಣುಮಗಳು

  ಸಾಂಪ್ರದಾಯಿಕ ಉರ್ದು ಕುಟುಂಬದ ಹೆಣ್ಣುಮಗಳು

  ವಹೀದಾ ಸಾಂಪ್ರದಾಯಿಕ ಉರ್ದು ಕುಟುಂಬದಲ್ಲಿ ಜನಿಸಿದ ಹೆಣ್ಣುಮಗಳು. ತಂದೆ ಜಿಲ್ಲಾ ಮ್ಯಾಜಿಸ್ಟ್ರೇಟ್. ಚಿಕ್ಕ ವಯಸ್ಸಿನಲ್ಲಿ ಅಂದ್ರೆ ವಹೀದಾ 10 ವರ್ಷ ಇರುವಾಗಲೇ ತಂದೆಯನ್ನು ಕಳೆದುಕೊಳ್ಳುತ್ತಾರೆ. ತಂದೆಯನ್ನು ಕಳೆದುಕೊಂಡ ದುಃಖ ಮಾಸುವುದರಲ್ಲಿ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಡಾಕ್ಟರ್ ಆಗಬೇಕೆನ್ನುವ ದೊಡ್ಡ ಕನಸು ಕಟ್ಟಿಕೊಂಡು ಬೆಳೆದ ವಹೀದಾಗೆ ತಂದೆ-ತಾಯಿ ನಿಧನ ಅಘಾತ ನೀಡುವ ಜೊತೆಗೆ, ಜೀವನದ ದಿಕ್ಕನ್ನೆ ಬದಲಾಯಿಸುತ್ತದೆ.

  ಬಾಲಿವುಡ್ ಪಯಣ

  ಬಾಲಿವುಡ್ ಪಯಣ

  ಹಿರಿಯ ನಟ ಮತ್ತು ನಿರ್ದೇಶಕ ಗುರುದತ್ ಗರಡಿಯಲ್ಲಿ ಪಳಗಿದ ನಟಿ ವಹೀದಾ ರೆಹಮಾನ್. ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಮಿಂಚುತ್ತಿದ್ದ ವಹೀದಾ ಮೇಲೆ ಹಿರಿಯ ನಟ ಗುರುದತ್ ಕಣ್ಣು ಬೀಳುತ್ತೆ. ಅಪ್ರತಿಮ ಸೌಂದರ್ಯವತಿಯಾಗಿದ್ದ ವಹೀದಾರಿಗೆ ಬಾಲಿವುಡ್ ನಲ್ಲಿ ನಟಿಸುವ ಅವಕಾಶ ನೀಡುತ್ತಾರೆ. ವಹೀದಾ ಡ್ಯಾನ್ಸ್ ಗೆ ಮಾರುಹೋದ ಗುರುದತ್ ಬಾಲಿವುಡ್ ನ 'ಸಿಐಡಿ' ಸಿನಿಮಾದಲ್ಲಿ ನಟಿಸುವ ಅವಕಾಶ ಕೊಡಿಸುತ್ತಾರೆ. 'ಸಿಐಡಿ' ರಿಲೀಸ್ ಆದ ಬೆನ್ನಲ್ಲೆ ಎರಡನೇ ಸಿನಿಮಾ 'ಪ್ಯಾಸಾ' ಚಿತ್ರದಲ್ಲಿ ಬಣ್ಣ ಹಚ್ಚುತ್ತಾರೆ. ಈ ಸಿನಿಮಾ ದೊಡ್ಡ ಮಟ್ಟಕ್ಕೆ ಹೆಸರು ತಂದು ಕೊಡುತ್ತದೆ.

  ಅಮಿತಾಬ್ ನೆಚ್ಚಿನ ನಾಯಕಿ

  ಅಮಿತಾಬ್ ನೆಚ್ಚಿನ ನಾಯಕಿ

  ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಗೆ ತುಂಬ ಇಷ್ಟವಾದ ನಟಿ ವಹೀದಾ. ವಿಶೇಷ ಅಂದ್ರೆ ವಹೀದಾ, ಅಮಿತಾಬ್ ಬಚ್ಚನ್ ಪ್ರೇಯಸಿಯಾಗಿ ಮತ್ತು ತಾಯಿಯಾಗಿಯೂ ನಟಿಸಿದ್ದಾರೆ. 'ಅದಾಲತ್' ಸಿನಿಮಾದಲ್ಲಿ ಅಮಿತಾಬ್ ಗೆ ವಹೀದಾ ಪ್ರೇಯಸಿಯಾಗಿದ್ರೆ, 'ತ್ರಿಶೂಲ್' ಸಿನಿಮಾದಲ್ಲಿ ತಾಯಿಯಾಗಿ ಕಾಣಿಸಿಕೊಂಡಿದ್ದಾರೆ. ಅಮಿತಾಬ್ ಜೊತೆ ರೇಶ್ಮಾ ಶೇರಾ, ಕಭಿ ಕಭಿ, ಅದಾಲತ್ ಮತ್ತು ತ್ರಿಶೂಲ್ ಸೇರಿದಂತೆ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮತ್ತೊಂದು ವಿಶೇಷ ಅಂದ್ರೆ ಅಮಿತಾಬ್ ಬಚ್ಚನ್, ಪತ್ನಿ ಜಯಾ ಬಚ್ಚನ್ ಮತ್ತು ಮಗ ಅಭಿಷೇಕ್ ಬಚ್ಚನ್... ಈ ಮೂವರಿಗೂ ತಾಯಿಯಾಗಿ ವಹೀದಾ ಅಭಿನಯಿಸಿದ್ದಾರೆ. ಕೊನೆಯದಾಗಿ ಅಮಿತಾಬ್ ಮತ್ತು ವಹೀದಾ ಇಬ್ಬರು 'ದೆಹಲಿ-6' ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

  ಚರ್ಚೆಗೆ ಕಾರಣವಾಗಿತ್ತು ಗುರುದತ್ ಜೊತೆಗಿನ ಸಂಬಂಧ

  ಚರ್ಚೆಗೆ ಕಾರಣವಾಗಿತ್ತು ಗುರುದತ್ ಜೊತೆಗಿನ ಸಂಬಂಧ

  ವಹೀದಾ ರೆಹಮಾನ್ ಎನ್ನುವ ಅದ್ಭುತ ನಟಿಯನ್ನು ಬಾಲಿವುಡ್ ಚಿತ್ರರಂಗಕ್ಕೆ ಪರಿಯಿಸಿದ್ದೇ ಹಿರಿಯ ನಟ ಮತ್ತು ನಿರ್ದೇಶಕ ಗುರುದತ್. ಬಾಲಿವುಡ್ ಪರಿಚಯಿಸಿದ್ದ ಗುರುದತ್ ಜೊತೆ ವಹೀದಾ ಹೆಸರು ಜೋರಾಗಿಯೆ ಕೇಳಿ ಬಂದಿತ್ತು. ಇಬ್ಬರ ಆಪ್ತ ಒಡನಾಟ ಸಾಕಷ್ಟು ವದಂತಿಗಳಿಗೆ ಕಾರಣವಾಗಿತ್ತು. ಗುರುದತ್ ಜೊತೆ ವಹೀದಾ 5 ಸಿನಿಮಾಗಳನ್ನು ಮಾಡಿದ್ದಾರೆ. ಐದೂ ಸಿನಿಮಾಗಳು ಸೂಪರ್ ಹಿಟ್. ಇಬ್ಬರ ಸಂಬಂಧ ಚರ್ಚೆಯಾಗುತ್ತಿದ್ದಂತೆ ವಹೀದಾ, ಗುರುದತ್ ಅವರಿಂದ ದೂರ ಆಗುತ್ತಾರೆ. ಇಬ್ಬರು ದೂರ ದೂರ ಅಗಿ ಒಂದೇ ವರ್ಷದಲ್ಲೇ ಗುರುದತ್ ಬಾರದ ಲೋಕದ ಕಡೆ ಪಯಣ ಬೆಳೆಸುತ್ತಾರೆ. ಇಬ್ಬರ ಸಂಬಂಧದ ಬಗ್ಗೆ ಕೇಳಿಬರುತ್ತಿದ್ದ ವದಂತಿಗಳ ಬಗ್ಗೆ ವಹೀದಾ ಇತ್ತೀಚಿಗೆ ಸಂದರ್ಶನವೊಂದರಲ್ಲಿ ಉತ್ತರಿಸಿದ್ದಾರೆ. ಗುರುದತ್ ಸಂಬಂಧ ವಿಚಾರವಾಗಿ ಎದುರಾದ ಪ್ರಶ್ನೆಗೆ ಖಾರವಾಗಿ ಉತ್ತರಿಸಿದ್ದಾರೆ. "ಈ ಬಗ್ಗೆ ಮಾತನಾಡಲು ಇಷ್ಟಪಡುವುದಿಲ್ಲ. ನನ್ನ ಖಾಸಗಿ ಜೀವನ ಯಾರೊಬ್ಬರ ವ್ಯಾವಹಾರವಲ್ಲ'' ಎಂದು ಹೇಳಿದ್ದರು

  ಯಶಸ್ಸಿನ ಪಯಣ

  ಯಶಸ್ಸಿನ ಪಯಣ

  'ಪ್ಯಾಸಾ' ಸಿನಿಮಾ ವಹೀದಾ ಸಿನಿ ಬದುಕಿಗೆ ದೊಡ್ಡ ಹೆಸರು ತಂದು ಕೊಡುವ ಜೊತೆಗೆ ಬಾಲಿವುಡ್ ನಲ್ಲಿ ಗಟ್ಟಿಯಾಗಿ ನೆಲೆಯೂರಲು ಸಾಹಕಾರಿಯಾಯಿತು. ಗುರುದತ್ ಜೊತೆ ಅಭಿನಯಿಸಿದ ಐದು ಸಿನಿಮಾಗಳು ಹಿಟ್ ಆಗಿದ್ದವು. ನಂತರ ಗುರುದತ್ ರಿಂದ ದೂರಾದ ಬಳಿಕ ವಹೀದಾ ಭಾರತೀಯ ಚಿತ್ರರಂಗ ಕಂಡ ಖ್ಯಾತ ನಿರ್ದೇಶಕ ಸತ್ಯಜಿತ್ ರೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. 1965ರಲ್ಲಿ ತೆರೆಕಂಡ ಗೈಡ್ ಸಿನಿಮಾ ವಹೀದಾ ಸಿನಿ ಬದುಕನ್ನು ಮತ್ತಷ್ಟು ಉತ್ತುಂಗಕ್ಕೆ ಕರೆದೊಯ್ತು. ನಂತರ ಸುನಿಲ್ ದತ್ ಜೊತೆ ಅಭಿನಯಿಸಿದ ಸಿನಿಮಾಗಳು ದೊಡ್ಡ ಮಟ್ಟಕ್ಕೆ ಯಶಸ್ಸುಗಳಿಸುವ ಜೊತೆಗೆ ವಹೀದಾ ಹೆಸರು ಮತ್ತಷ್ಟು ಎತ್ತರಕ್ಕೆ ಬೆಳೆಯಿತು. ರಾಜೇಶ್ ಖನ್ನಾ ಜೊತೆ ಅಭಿನಯಿಸಿದ 'ಕಾಮೋಶಿ' ಸಿನಿಮಾ ವಹೀದಾ ವೃತ್ತಿ ಬದುಕಿನ ಅತೀ ದೊಡ್ಡ ಹಿಟ್ ನೀಡಿದ ಸಿನಿಮಾ.

  ವಹೀದಾ ಮದುವೆ

  ವಹೀದಾ ಮದುವೆ

  1974ರಲ್ಲಿ ವಹೀದಾ ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಸಿನಿ ಬದುಕಿನ ಉತ್ತುಂಗದಲ್ಲಿ ಇರವಾಗಲೇ ವಹೀದಾ ಮದುವೆಯಾಗುವ ನಿರ್ಧಾರ ಮಾಡುತ್ತಾರೆ. 'ಶಗೂನ್' ಚಿತ್ರದಲ್ಲಿ ವಹೀದಾ ಜೊತೆ ನಾಯಕನಾಗಿ ಮಿಂಚಿದ್ದ ಕಮಲ್ ಜಿತ್ ಸಿಂಗ್ ಜೊತೆ ವಹೀದಾ ವಿವಾಹ ಬಂಧನಕ್ಕೆ ಒಳಗಾಗುತ್ತಾರೆ. ಕಮಲ್ ಜಿತ್ ನಿಜವಾದ ಹೆಸರು ಶಶಿ ರೇಖಿ. ಮದುವೆ ನಂತರ ವಹೀದಾ ಸಿನಿಮಾ ರಂಗದಿಂದ ದೂರವಾಗಿ ಪತಿಯ ಜೊತೆ ಬೆಂಗಳೂರಿನಲ್ಲಿ ನಲೆಸುತ್ತಾರೆ. ಕೊಂಚ ಬ್ರೇಕ್ ಪಡೆದ ನಂತರ 1976ರಲ್ಲಿ ಮತ್ತೆ ಪೋಷಕ ನಟಿಯಾಗಿ ಬಣ್ಣಹಚ್ಚುತ್ತಾರೆ. 1994ರ ವರೆಗೂ ತೆರೆಮೇಲೆ ಮಿಂಚುತ್ತಾರೆ. ಆ ನಂತರ ಮತ್ತೆ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಳ್ಳುತ್ತಾರೆ. 2000ರಲ್ಲಿ ಪತಿಯನ್ನು ಕಳೆದುಕೊಳ್ಳುತ್ತಾರೆ ವಹೀದಾ.

  ಈಗ ಎಲ್ಲಿದ್ದಾರೆ ವಹೀದಾ ರೆಹಮಾನ್

  ಈಗ ಎಲ್ಲಿದ್ದಾರೆ ವಹೀದಾ ರೆಹಮಾನ್

  ಪತಿಯನ್ನು ಕಳೆದುಕೊಂಡ ನಂತರ ವಹೀದಾ ಬೆಂಗಳೂರಿನಿಂದ ಮತ್ತೆ ಮುಂಬೈಗೆ ಪಯಣ ಬೆಳೆಸುತ್ತಾರೆ. ಸದ್ಯ ಮುಂಬೈನಲ್ಲಿ ನೆಲೆಸಿದ್ದಾರೆ. ವಹೀದಾ ಮತ್ತು ಕಮಲ್ ಜಿತ್ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಒಬ್ಬಳು ಮಗಳು ಮತ್ತು ಮಗ. ಮಗಳು ಬಾಲಿವುಡ್ ನ ಕೆಲವು ಸಿನಿಮಾಗಳಲ್ಲಿ ತೆರೆ ಹಿಂದೆ ಕೆಲಸ ಮಾಡಿದ್ದಾರೆ. ವಹೀದಾ ಇಂದಿಗೂ ಬಾಲಿವುಡ್ ನಲ್ಲಿ ಸಕ್ರಿಯರಾಗಿದ್ದಾರೆ. ಕಮಲ್ ಹಾಸನ್ ಅಭಿನಯದ ವಿಶ್ವರೂಪಂ-2 ಸಿನಿಮಾದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ ಸದ್ಯ ವಹೀದಾ ಬಳಿ ಒಂದು ಸಿನಿಮಾವಿದೆ. ವಹೀದಾ ಅವರ ಬಗ್ಗೆ ''ಕಾನ್ವರ್ಸೇಷನ್ ವಿತ್ ವಹೀದಾ ರೆಹಮಾನ್" ಎನ್ನುವ ಜೀವನ ಚರಿತ್ರೆಯನ್ನು ಲೇಖಕ ಮತ್ತು ನಿರ್ದೇಶಕ ನಸ್ರೀನ್ ಮುನ್ನಿ ಕಬೀರ್ ಬರೆದಿದ್ದಾರೆ.

  ಪ್ರಸಿದ್ಧ ಸಿನಿಮಾಗಳು

  ಪ್ರಸಿದ್ಧ ಸಿನಿಮಾಗಳು

  ಮೂರು ದಶಕಗಳ ಕಾಲ ಚಿತ್ರರಂಗವನ್ನಾಳಿದ ವಹೀದಾ ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿದ್ದಾರೆ. ಕಾಗಜ್ ಕೆ ಫೂಲ್, ಸಾಹೇಬ್ ಬೀಬಿ ಔರ್, ಗುಲಾಮ್, ಮುಝೆ ಜೀನೆ ದೋ, ನೀಲ್ ಕಮಲ್, ಕಾಮೋಶಿ, ತಿಸ್ರಿ ಕಸಂ ಸೇರಿದಂತೆ ಅನೇಕ ಪ್ರಸಿದ್ಧಿ ಸಿನಿಮಾಗಳನ್ನು ವಹೀದಾ ರೆಹಮಾನ್ ನೀಡಿದ್ದಾರೆ. ‘ರೇಶ್ಮಾ ಔರ್ ಶೇರಾ' ಚಿತ್ರಕ್ಕಾಗಿ ಅತ್ಯುತ್ತಮ ರಾಷ್ಟ್ರ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

  English summary
  Famous Indian actress waheeda Rehman film journey.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X