For Quick Alerts
  ALLOW NOTIFICATIONS  
  For Daily Alerts

  2020: ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಲ್ಪಟ್ಟ ವೆಬ್ ಸೀರಿಸ್ ಯಾವುದು?

  |

  ತಂತ್ರಜ್ಞಾನ, ನಿರ್ಮಾಣ, ಗುಣಮಟ್ಟ, ಕತೆ ಯಾವ ಹಂತದಲ್ಲಿಯೂ ಸಿನಿಮಾಗಳಿಗಿಂತಲೂ ಕಡಿಮೆ ಇಲ್ಲದಂತೆ ನಿರ್ಮಾಣಗೊಳ್ಳುತ್ತಿವೆ ವೆಬ್ ಸರಣಿಗಳು. ಎಷ್ಟೋ ವೆಬ್ ಸರಣಿಗಳು, ಸಿನಿಮಾಗಳಿಗಿಂತಲೂ ಹೆಚ್ಚು ಜನಪ್ರಿಯವಾಗಿವೆ.

  ಈ ವರ್ಷವಂತೂ ವೆಬ್ ಸರಣಿಗಳ ಅಭಿಮಾನಿಗಳು ಕಳೆದ ವರ್ಷಕ್ಕಿಂತಲೂ ಹೆಚ್ಚಾಗಿದ್ದಾರೆ. ಎಷ್ಟೋ ಹೊಸ ವೆಬ್ ಸರಣಿಗಳು ಈ ವರ್ಷ ಬಿಡುಗಡೆ ಆಗಿ, ಭಾರತ ಮಾತ್ರವಲ್ಲ, ವಿಶ್ವದೆಲ್ಲೆಡೆ ಜನಪ್ರಿಯತೆ ಗಳಿಸಿದವು.

  ಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ಟಾಪ್ ಚಿತ್ರಗಳುಈ ವರ್ಷ ಗೂಗಲ್‌ನಲ್ಲಿ ಅತಿ ಹೆಚ್ಚು ಸರ್ಚ್ ಆದ ಟಾಪ್ ಚಿತ್ರಗಳು

  ಜನಪ್ರಿಯ ಸಿನಿಮಾ ನಟ-ನಟಿಯರು ವೆಬ್ ಸರಣಿಗಳಲ್ಲಿ ನಟಿಸಿದರು. ಅನುಷ್ಕಾ ಶರ್ಮಾ, ಶಾರುಖ್ ಖಾನ್ ಅಂಥಹಾ ದಿಗ್ಗಜರು ವೆಬ್ ಸರಣಿ ಮೇಲೆ ಬಂಡವಾಳ ಹೂಡಿ, ವೆಬ್ ಸರಣಿ ನಿರ್ಮಾಪಕರಾದರು. ಹಾಗಿದ್ದರೆ ಈ ವರ್ಷ ಭಾರತದಲ್ಲಿ ಗೂಗಲ್‌ ಮೂಲಕ ಅತಿ ಹೆಚ್ಚು ಹುಡುಕಲ್ಪಟ್ಟ ವೆಬ್ ಸರಣಿ ಯಾವುದು? ಇಲ್ಲಿದೆ ನೋಡಿ ಪಟ್ಟಿ.

  10) ಸ್ಪೆಷಲ್ ಆಪ್ಸ್

  10) ಸ್ಪೆಷಲ್ ಆಪ್ಸ್

  ನೀರಜ್ ಪಾಂಡೆ, ಶಿವಮ್ ನಾಯರ್ ನಿರ್ದೇಶನದ ಸ್ಪೆಷಲ್ ಆಪ್ಸ್‌ ವೆಬ್ ಸರಣಿಯು, ಭಾರತದ ಇಂಟೆಲಿಜೆನ್ಸ್‌ ಸಂಸ್ಥೆ, ರಾ ಏಜೆಂಟ್‌ಗಳ ಕುರಿತಾದದ್ದು. ರಾ ಏಜೆಂಟ್‌ಗಳು ವಿಶೇಷ ಆಪರೇಷನ್‌ಗಳನ್ನು ಮಾಡಿ ದೇಶವನ್ನು ಅಪಾಯಗಳಿಂದ ಕಾಪಾಡುವ ಕತೆ ಹೊಂದಿದೆ ಈ ವೆಬ್ ಸರಣಿ.

  9) ಬ್ಯಾಂಡಿಶ್ ಬ್ಯಾಂಡಿಟ್ಸ್‌

  9) ಬ್ಯಾಂಡಿಶ್ ಬ್ಯಾಂಡಿಟ್ಸ್‌

  ಆನಂದ್ ತಿವಾರಿ ನಿರ್ದೇಶನದ ಬ್ಯಾಂಡಿಶ್ ಬ್ಯಾಂಡಿಟ್ಸ್ ವೆಬ್ ಸರಣಿಯು ರೊಮಾನ್ಸ್, ಪ್ರೀತಿ, ಭಾವನಾತ್ಮಕ ಅಂಶಗಳನ್ನು ಪ್ರಧಾನ ಒಳಗೊಂಡಿರುವ ವೆಬ್ ಸರಣಿ. ಈ ವೆಬ್ ಸರಣಿಯು ಅಮೆಜಾನ್ ಪ್ರೈಂ ನಲ್ಲಿ ಪ್ರಸಾರವಾಗುತ್ತಿದೆ. ಈ ವೆಬ್ ಸರಣಿ ಇದೇ ವರ್ಷದ ಆಗಸ್ಟ್‌ನಿಂದ ಆರಂಭವಾಗಿದೆ.

  2020: ಚಿಕ್ಕ ಪರದೆ ಮೂಲಕ ದೊಡ್ಡ ಪ್ರಭಾವ ಬೀರಿದ ಸಿನಿಮಾಗಳು2020: ಚಿಕ್ಕ ಪರದೆ ಮೂಲಕ ದೊಡ್ಡ ಪ್ರಭಾವ ಬೀರಿದ ಸಿನಿಮಾಗಳು

  8) ಡಾರ್ಕ್‌

  8) ಡಾರ್ಕ್‌

  ಜರ್ಮನ್ ನ ಡಾರ್ಕ್ ವೆಬ್ ಸರಣಿಗೆ ಗೂಗಲ್ ಹುಡುಕಾಟದಲ್ಲಿ ಎಂಟನೇ ಸ್ಥಾನ. 2017 ರಿಂದಲೂ ಪ್ರಸಾರವಾಗುತ್ತಿರುವ ಈ ವೆಬ್ ಸರಣಿಯ ಇತ್ತೀಚಿನ ಸೀಸನ್ ಇದೇ ವರ್ಷದ ಜೂನ್‌ ನಲ್ಲಿ ಬಿಡಗುಡೆ ಆಯಿತು. ಟೈಮ್ ಟ್ರಾವೆಲ್ ಸೇರಿದಂತೆ ಹಲವು ಅಸಾಮಾನ್ಯ ಘಟನೆಗಳನ್ನು ಹೊಂದಿಸಿ ಮಾಡಿರುವ ವೆಬ್ ಸರಣಿ ಇದು.

  7) ಬ್ರೀತ್ ಇನ್ ಟು ದಿ ಶಾಡೋಸ್

  7) ಬ್ರೀತ್ ಇನ್ ಟು ದಿ ಶಾಡೋಸ್

  ಅಭಿಷೇಕ್ ಬಚ್ಚನ್, ನಿತ್ಯಾ ಮೆನನ್ ನಟನೆಯ ಬ್ರೀತ್; ಇನ್‌ ಟು ದಿ ಶಾಡೋಸ್ ವೆಬ್ ಸರಣಿ ಇದೇ ವರ್ಷ ಅಮೆಜಾನ್‌ ನಲ್ಲಿ ಬಿಡುಗಡೆ ಆಗಿತ್ತು. ಕಳೆದು ಹೋಗ ಮಗಳನ್ನು ವಾಪಸ್ ಪಡೆಯಲು, ಅಪಹರಣಕಾರ ಹೇಳುವಂತೆ ಪೋಷಕರು ಕೊಲೆಗಳನ್ನು ಮಾಡುತ್ತಾ ಹೋಗುತ್ತಾರೆ. ಕುತೂಹಲಕರ, ಭಾವನಾತ್ಮಕ ಕತೆಯನ್ನು ಈ ಸರಣಿ ಹೊಂದಿದೆ. ಬ್ರೀತ್ ನ ಎರಡನೇ ಸರಣಿ ಇದು.

  2020 ಫ್ಲ್ಯಾಶ್ ಬ್ಯಾಕ್; ಕೊರೊನಾಗೆ ಬಲಿಯಾದ ಸಿನಿತಾರೆಯರೆಷ್ಟು? ಇಲ್ಲಿದೆ ಮಾಹಿತಿ2020 ಫ್ಲ್ಯಾಶ್ ಬ್ಯಾಕ್; ಕೊರೊನಾಗೆ ಬಲಿಯಾದ ಸಿನಿತಾರೆಯರೆಷ್ಟು? ಇಲ್ಲಿದೆ ಮಾಹಿತಿ

  6) ಸೆಕ್ಸ್‌ ಎಜುಕೇಶನ್

  6) ಸೆಕ್ಸ್‌ ಎಜುಕೇಶನ್

  ನೆಟ್‌ಫ್ಲಿಕ್ಸ್‌ ನಲ್ಲಿ ಪ್ರಸಾರವಾಗುವ ಸೆಕ್ಸ್‌ ಎಜುಕೇಶನ್‌ ಭಾರತದಲ್ಲ. ಆದರೆ ಇದೂ ಸಹ ವಿಶ್ವದ ಜನಪ್ರಿಯ ವೆಬ್ ಸರಣಿಗಳಲ್ಲಿ ಒಂದು. ಹದಿ ಹರೆಯದವರ ಲೈಂಗಿಕ ವಾಂಛೆ, ಲೈಂಗಿಕ ಶಿಕ್ಷಣ ಇತರೆ ಮಾಹಿತಿಗಳನ್ನು ಈ ವೆಬ್ ಸರಣಿ ಒಳಗೊಂಡಿದೆ.

  5) ಪಾತಾಳ್ ಲೋಕ್

  5) ಪಾತಾಳ್ ಲೋಕ್

  ಭಾರತದಲ್ಲಿ ನಿರ್ಮಾಣಗೊಂಡಿರುವ ಉತ್ತಮ ವೆಬ್ ಸರಣಿಗಳಲ್ಲಿ ಪಾತಾಳ್ ಲೋಕ್ ಸಹ ಒಂದು. ಒಬ್ಬ ಸಾಮಾನ್ಯ ಪೊಲೀಸ್ ಅಧಿಕಾರಿ ಹಾಗೂ ಒಬ್ಬ ವಿಕ್ಷಿಪ್ತ ಅಪರಾಧಿ ನಡುವೆ ನಡೆವ ಕುತೂಹಲ ಭರಿತ ಕಥನವೇ ಪಾತಾಳ್ ಲೋಕ್. ನಟಿ ಅನುಷ್ಕಾ ಶರ್ಮಾ ಈ ವೆಬ್ ಸರಣಿಗೆ ಬಂಡವಾಳ ಹೂಡಿದ್ದಾರೆ. ಐದನೇ ಸ್ಥಾನದಲ್ಲಿದೆ ಪಾತಾಳ್ ಲೋಕ್.

  2020 ರಲ್ಲಿ ಬಾಲಿವುಡ್‌ ಕಳೆದುಕೊಂಡ ತಾರೆಗಳೆಷ್ಟು? ಇಲ್ಲಿದೆ ಪಟ್ಟಿ2020 ರಲ್ಲಿ ಬಾಲಿವುಡ್‌ ಕಳೆದುಕೊಂಡ ತಾರೆಗಳೆಷ್ಟು? ಇಲ್ಲಿದೆ ಪಟ್ಟಿ

  4) ಮಿರ್ಜಾಪುರ್ 2

  4) ಮಿರ್ಜಾಪುರ್ 2

  ಪಂಕಜ್ ತಿಪಾಠಿ ಹಾಗೂ ಹಲವರು ಮುಖ್ಯ ಪಾತ್ರದಲ್ಲಿ ನಟಿಸಿರುವ ಮಿರ್ಜಾಪುರ್ ವೆಬ್ ಸರಣಿಯ ಮುಂದುವರೆದ ಭಾಗ ಮಿರ್ಜಾಪುರ್ 2 ಸಹ ಜನರ ಗಮನ ಸೆಳೆದಿದೆ. ಇದೇ ವರ್ಷ ಬಿಡುಗಡೆ ಆದ ಇದು, ಮಿರ್ಜಾಪುರದ ರಕ್ತ-ಸಿಕ್ತ ರಾಜಕೀಯದ ಮುಂದುವರೆದ ಭಾಗವಾಗಿದೆ. ಅತಿ ಹೆಚ್ಚು ಹುಡುಕಲ್ಪಟ್ಟ ವೆಬ್ ಸರಣಿ ಪಟ್ಟಿಯಲ್ಲಿ ಮಿರ್ಜಾಪುರ್‌ 2 ಗೆ ನಾಲ್ಕನೇ ಸ್ಥಾನ.

  3) ಬಿಗ್‌ ಬಾಸ್‌ 14 ರ ಬಗ್ಗೆಯೂ ಹುಡುಕಾಟ

  3) ಬಿಗ್‌ ಬಾಸ್‌ 14 ರ ಬಗ್ಗೆಯೂ ಹುಡುಕಾಟ

  ಮೂರನೇ ಸ್ಥಾನದಲ್ಲಿದೆ ಬಿಗ್‌ ಬಾಸ್ 14. ಕೊರೊನಾ ಕಾರಣಕ್ಕೆ ಈ ಬಾರಿಯ ಹಿಂದಿ ಬಿಗ್‌ಬಾಸ್ ಪ್ರಸಾರವಾಗುತ್ತದೆಯೇ ಇಲ್ಲವೇ ಎಂಬ ಅನುಮಾನವಿತ್ತು. ಆದರೂ ಬಿಗ್‌ಬಾಸ್ ಪ್ರಾರಂಭವಾಗಿ, ಸಲ್ಮಾನ್ ಅವರೇ ನಿರೂಪಕರಾಗಿದ್ದಾರೆ. ಶೋ ಈಗಲೂ ನಡೆಯುತ್ತಿದೆ.

  2020 ಫ್ಲ್ಯಾಶ್ ಬ್ಯಾಕ್: ಈ ವರ್ಷ ಚಂದನವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರೆಯರು2020 ಫ್ಲ್ಯಾಶ್ ಬ್ಯಾಕ್: ಈ ವರ್ಷ ಚಂದನವನದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ತಾರೆಯರು

  2) ಸ್ಕ್ಯಾಮ್ 1992: ಹರ್ಷದ್ ಮೆಹ್ತಾ ಸ್ಟೋರಿ

  2) ಸ್ಕ್ಯಾಮ್ 1992: ಹರ್ಷದ್ ಮೆಹ್ತಾ ಸ್ಟೋರಿ

  ಹನ್ಸಲ್ ಮೆಹ್ತಾ, ಜೈ ಮೆಹ್ತಾ ನಿರ್ದೇಶನದ 'ಸ್ಕ್ಯಾಮ್ 1992: ಹರ್ಷದ್ ಮೆಹ್ತಾ ಸ್ಟೋರಿ' ಗೆ ಎರಡನೇ ಸ್ಥಾನ. 1992 ಷೇರು ಮಾರುಕಟ್ಟೆ ಭ್ರಷ್ಟಾಚಾರ ಹಾಗೂ ಅದರ ಹಿಂದಿದ್ದ ಹರ್ಷದ್ ಮೆಹ್ತಾ ಕತೆಯನ್ನು ಅತ್ಯಂತ ಸುಂದರವಾಗಿ ವೆಬ್ ಸರಣಿ ಮಾಡಿದ್ದಾರೆ ನಿರ್ದೇಶಕರು. ಸಿನಿಮಾದ ಸಂಭಾಷಣೆ, ನಟನೆ ಎಲ್ಲವೂ ಅದ್ಭುತವಾಗಿದೆ. ಸಹಜವಾಗಿಯೇ ಭಾರತೀಯರು ಈ ವೆಬ್ ಸರಣಿ ಬಗ್ಗೆ ಹೆಚ್ಚು ಹುಡುಕಿದ್ದಾರೆ.

  1) ಮೊದಲ ಸ್ಥಾನದಲ್ಲಿ Money Heist

  1) ಮೊದಲ ಸ್ಥಾನದಲ್ಲಿ Money Heist

  ನೆಟ್‌ಫ್ಲಿಕ್ಸ್‌ನಲ್ಲಿ ಪ್ರಸಾರವಾಗುವ Money Heist ವೆಬ್ ಸರಣಿ ಬಗ್ಗೆ ಭಾರತೀಯರು ಅತಿ ಹೆಚ್ಚು ಹುಡುಕಿದ್ದಾರೆ. Money Heist ವಿಶ್ವದ ಅತ್ಯುತ್ತಮ ವೆಬ್ ಸರಣಿಗಳಲ್ಲಿ ಒಂದು ಹಾಗಾಗಿಯೇ Money Heist ಬಗ್ಗೆ ತುಸು ಹೆಚ್ಚಿಗೆ ಹುಡುಕಾಟ ನಡೆದಿದೆ. Money Heist‌ನ ನಾಲ್ಕನೇ ಸರಣಿ ಇದೇ ವರ್ಷವೇ ಬಿಡುಗಡೆ ಆಗಿತ್ತು. ಹಾಗಾಗಿ ಕುತೂಹಲ ತುಸು ಹೆಚ್ಚಿಗೆ ಇತ್ತು.

  English summary
  Google Year In Search 2020: India's top searched TV/ Web Series. Here is the list.
  Thursday, December 10, 2020, 10:16
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X