Just In
- 47 min ago
ದಾಂಪತ್ಯ ಜೀವನಕ್ಕೆ ಕಾಲಿಟ್ಟ ವರುಣ್ ಧವನ್ ಬಗ್ಗೆ ಶಾಕಿಂಗ್ ಕಾಮೆಂಟ್ ಮಾಡಿದ ಶ್ರದ್ಧಾ
- 2 hrs ago
ನಟಿ ಶರ್ಮಿಳಾ ಟ್ಯಾಗೋರ್ ಬಿಕಿನಿ ಫೋಟೋ ವೈರಲ್; ಜನ ನನ್ನನ್ನು ಮರೆಯಲು ಬಿಡುವುದಿಲ್ಲ ಎಂದ ಸೈಫ್ ತಾಯಿ
- 3 hrs ago
ಜನವರಿ 27ಕ್ಕೆ 'ಬೆಲ್ ಬಾಟಂ' ಸೀಕ್ವೆಲ್ ಚಿತ್ರದ ಶೀರ್ಷಿಕೆ ಅನಾವರಣ
- 3 hrs ago
ತುಂಬು ಗರ್ಭಿಣಿ ಕರೀನಾ ಕಪೂರ್ ಯೋಗ ಮಾಡುತ್ತಿರುವ ಫೋಟೋ ವೈರಲ್
Don't Miss!
- News
ಕೋಲಾರ; ಬೆಂಗಳೂರಿಗೆ ಹೊರಟಿದ್ದ ರೈತರ ಟ್ರಾಕ್ಟರ್ ಪೊಲೀಸ್ ವಶಕ್ಕೆ
- Automobiles
ಒಂದೂವರೆ ವರ್ಷದಲ್ಲಿ ದಾಖಲೆ ಸಂಖ್ಯೆಯ ಕಾರುಗಳನ್ನು ಮಾರಾಟ ಮಾಡಿದ ಕಿಯಾ ಮೋಟಾರ್ಸ್
- Finance
ಬಜೆಟ್ 2021: ಎಲೆಕ್ಟ್ರಾನಿಕ್ ಉಪಕರಣಗಳ ಮೇಲಿನ ಆಮದು ಸುಂಕ ಹೆಚ್ಚಳ?
- Sports
ODI Super League: ಎರಡಕ್ಕೇರಿದ ಬಾಂಗ್ಲಾದೇಶ, ತಳ ಸೇರಿದ ಭಾರತ
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಈ ವರ್ಷ ನೆಟ್‌ಫ್ಲೆಕ್ಸ್ & ಅಮೇಜಾನ್‌ನಲ್ಲಿ ತೆರೆಕಂಡ ಹಿಂದಿ ಚಿತ್ರಗಳು
ಕೊರೊನಾ ಲಾಕ್‌ಡೌನ್ ಆದ ಕಾರಣ ಚಿತ್ರಮಂದಿರಗಳು ಬಂದ್ ಆಗಿದ್ದವು. ಆರೇಳು ತಿಂಗಳು ಥಿಯೇಟರ್ ಮುಚ್ಚಿದ್ದರ ಪರಿಣಾಮ ಕೆಲವು ಸಿನಿಮಾಗಳು ಒಟಿಟಿಯಲ್ಲಿ ತೆರೆಕಂಡವು. ಅಮಿತಾಭ್ ಬಚ್ಚನ್, ಸುಶಾಂತ್ ಸಿಂಗ್ ರಜಪೂತ್, ಜಾಹ್ನವಿ ಕಪೂರ್ ಸೇರಿದಂತೆ ಹಲವರು ಕಲಾವಿದರ ಚಿತ್ರಗಳು ಈ ವರ್ಷ ನೆಟ್‌ಫ್ಲೆಕ್ಸ್ & ಅಮೇಜಾನ್‌ನಲ್ಲಿ ಬಿಡುಗಡೆ ಕಂಡಿವೆ.
ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಣೆಯಾಗಿತ್ತು. ಲಾಕ್‌ಡೌನ್ ಯಾವಾಗ ತೆರವುಗೊಳ್ಳುತ್ತೆ, ಚಿತ್ರಮಂದಿರಗಳು ಯಾವಾಗ ಮತ್ತೆ ತೆರಯಲಾಗುತ್ತದೆ ಎಂಬುದರ ಬಗ್ಗೆ ಸ್ಪಷ್ಟನೆ ಸಿಗದ ನಿರ್ಮಾಪಕರು ಚಿತ್ರಗಳನ್ನು ಒಟಿಟಿಯಲ್ಲಿ ರಿಲೀಸ್ ಮಾಡಿದರು. ಹಾಗಾದ್ರೆ, ಈ ವರ್ಷ ಒಟಿಟಿಯಲ್ಲಿ ತೆರೆಕಂಡ ಹಿಂದಿ ಚಿತ್ರಗಳು ಯಾವುದು? ಮುಂದೆ ಓದಿ....
2020: ಒಟಿಟಿಯಲ್ಲಿ ಅತೀ ಹೆಚ್ಚು ವೀಕ್ಷಣೆ ಪಡೆದ ಭಾರತದ 'ಟಾಪ್ 10' ಸಿನಿಮಾಗಳಿವು

ಗುಲಾಬೊ ಸೀತಾಬೊ
ಅಮಿತಾಭ್ ಬಚ್ಚನ್ ಮತ್ತು ಆಯುಷ್ಮಾನ್ ಖುರಾನ್ ಅಭಿನಯದ 'ಗುಲಾಬೊ ಸೀತಾಬೋ' ಡಿಜಿಟಲ್ ವೇದಿಕೆಯಲ್ಲಿ ಬಿಡುಗಡೆಯಾದ ವರ್ಷದ ಮೊದಲ ಸಿನಿಮಾ. ಶೂಜಿತ್ ಸಿರ್ಕಾರ್ ನಿರ್ದೇಶನದ ಈ ಚಿತ್ರವು ಮೆಚ್ಚುಗೆ ಪಡೆದುಕೊಂಡಿತ್ತು.

ಗುಂಜಾನ್ ಸಕ್ಸೇನಾ
ಈ ವರ್ಷ ಒಟಿಟಿಯಲ್ಲಿ ರಿಲೀಸ್ ಆದ ಸಿನಿಮಾಗಳಲ್ಲಿ ಪೈಕಿ ಗುಂಜನ್ ಸಕ್ಸೇನಾ ಸಹ ಪ್ರಮುಖವಾದದು. ಫ್ಲೈಟ್ ಲೆಫ್ಟಿನೆಂಟ್ ಗುಂಜನ್ ಸಕ್ಸೇನಾ ಅವರ ಜೀವನವನ್ನು ಆಧರಿಸಿದ ಈ ಚಿತ್ರ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಗುಂಜನ್ ಸಕ್ಸೇನಾ ಆಗಿ ನಟಿ ಜಾಹ್ನವಿ ಕಪೂರ್ ಕಾಣಿಸಿಕೊಂಡಿದ್ದಾರೆ. ಶರಣ್ ಶರ್ಮಾ ನಿರ್ದೇಶನ ಮಾಡಿದ್ದರು.
2020: ನೆಟ್ಫ್ಲಿಕ್ಸ್ನಲ್ಲಿ ಭಾರತೀಯರು ಹೆಚ್ಚು ನೋಡಿದ ಸಿನಿಮಾಗಳಿವು

ಸುಶಾಂತ್ ಸಿಂಗ್ ದಿಲ್ ಬೆಚಾರ
ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಕೊನೆಯ ಸಿನಿಮಾ ದಿಲ್ ಬೆಚಾರ ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ತೆರೆಕಂಡಿತ್ತು. ಮುಖೇಶ್ ಚಾಬ್ರ ಸಿನಿಮಾಗೆ ಆಕ್ಷನ್ ಕಟ್ ಹೇಳಿದ್ದು, ಸುಶಾಂತ್ ಸಿಂಗ್ ಜೊತೆ ನಾಯಕಿಯಾಗಿ ಸಂಜನಾ ಸಾಂಘಿ ಕಾಣಿಸಿಕೊಂಡಿದ್ದಾರೆ.

ಲೂಡೊ ಸಿನಿಮಾ
ಈ ವರ್ಷ ಒಟಿಟಿಯಲ್ಲಿ ಬಿಡುಗಡೆಯಾದ ಮತ್ತೊಂದು ಚಿತ್ರ ಲೂಡೊ. ನವೆಂಬರ್ 12ರಂದು ರಿಲೀಸ್ ಆದ ಈ ಸಿನಿಮಾದಲ್ಲಿ ಅಭಿಷೇಕ್ ಬಚ್ಚನ್, ರಾಜ್ ಕುಮಾರ್ ರಾವ್ ಆದಿತ್ಯ ರಾಯ್ ಕಪೂರ್ ಪ್ರಮುಖ ಪಾತ್ರದಲ್ಲಿ ಮಿಂಚಿದ್ದಾರೆ. ಅನುರಾಗ್ ಬಸು ಸಾರಥ್ಯದಲ್ಲಿ ಸಿನಿಮಾ ಮೂಡಿಬಂದಿದೆ.

ಅಕ್ಷಯ್ ಕುಮಾರ್ 'ಲಕ್ಷ್ಮಿ'
ಬಾಲಿವುಡ್ ನಟ ಅಕ್ಷಯ್ ಕುಮಾರ್ ಅಭಿನಯದ ಲಕ್ಷ್ಮೀ ಸಿನಿಮಾ ಈ ವರ್ಷ ಒಟಿಟಿಯಲ್ಲಿ ರಿಲೀಸ್ ಆಗಿದೆ. ತಮಿಳಿನ ಕಾಂಚನಾ ಚಿತ್ರದ ರೀಮೇಕ್ ಇದಾಗಿದ್ದು, ಹಿಂದಿಯಲ್ಲಿ ರಾಘವ ಲಾರೆನ್ಸ್ ನಿರ್ದೇಶಿಸಿದ್ದರು.

ದುರ್ಗಮತಿ ಸಿನಿಮಾ
ರಾಜೇಶ್ ಕೃಷ್ಣನ್ ನಿರ್ದೇಶಿಸಿದ ಲೂಟ್‌ಕೇಸ್ ಚಿತ್ರವೂ ಈ ವರ್ಷ ಒಟಿಟಿಯಲ್ಲಿ ಬಿಡುಗಡೆಯಾಗಿತ್ತು. ನವಾಜುದ್ದೀನ್ ಸಿದ್ದಿಕಿ ಅವರ 'ರಾತ್ ಅಕೆಲಿ ಹೈ', ಭೂಮಿ ಪೆಡ್ನೆಕರ್ ಅವರ 'ದುರ್ಗಮತಿ', ವಿದ್ಯಾ ಬಾಲನ್ ಅವರ 'ಶಕುಂತಲಾ ದೇವಿ' ಸೇರಿದಂತೆ ಹಲವು ಗಮನಾರ್ಹ ಚಿತ್ರಗಳು ಈ ವರ್ಷ ಒಟಿಟಿಯಲ್ಲಿ ಬಿಡುಗಡೆಯಾಗಿವೆ.