For Quick Alerts
  ALLOW NOTIFICATIONS  
  For Daily Alerts

  ಭಾರತೀಯ ಸಿನಿಮಾ ಪಿತಾಮಹ ದಾದಾ ಸಾಹೇಬ್ ಫಾಲ್ಕೆ ನಡೆದ ಮುಳ್ಳಿನ ಹಾದಿ

  |

  ಭಾರತ ಸಿನಿಮಾ ಇತಿಹಾಸ ಎಂದೂ ಮರೆಯದ ವ್ಯಕ್ತಿ ದಾದಾ ಸಾಹೇಬ್ ಫಾಲ್ಕೆ. ಇಂದು ಲಕ್ಷಾಂತರ ಮಂದಿಗೆ ಉದ್ಯೋಗ ನೀಡಿರುವ ಭಾರತೀಯ ಸಿನಿಮಾರಂಗ ಪ್ರಾರಂಭವಾಗಲು ಮೂಲ ಕಾರಣ ಇದೇ ದಾದಾ ಸಾಹೇಬ್ ಫಾಲ್ಕೆ.

  ದಾದಾ ಸಾಹೇಬ್ ಫಾಲ್ಕೆ 1913ರಲ್ಲಿ 'ರಾಜಾ ಹರಿಶ್ಚಂದ್ರ' ಹೆಸರಿನ ಸಿನಿಮಾ ನಿರ್ಮಾಣ, ನಿರ್ದೇಶನ ಮಾಡಿದರು. ಅದುವೇ ಭಾರತದ ಮೊಟ್ಟ ಮೊದಲ ಸಿನಿಮಾ ಎನಿಸಿಕೊಂಡಿತು. ಅಂದು ನೆಟ್ಟ 'ಸಿನಿಮಾ ಬೀಜ' ಇಂದು ಹೆಮ್ಮರವಾಗಿ ಬೆಳೆದಿದೆ.

  ದಾದಾಸಾಹೇಬ್ ಫಾಲ್ಕೆಗೆ ಮೊದಲ ಸಿನಿಮಾ ತೆಗೆಯುವುದು ಸುಲುಭವಾಗಿರಲಿಲ್ಲ. ಹಲವು ಸಮಸ್ಯೆಗಳನ್ನು ಎದುರುಗೊಂಡು ಅವರು 'ರಾಜಾ ಹರಿಶ್ಚಂದ್ರ' ಎಂಬ ಐತಿಹಾಸಿಕ ಮೈಲಿಗಲ್ಲು ನೆಟ್ಟರು. ಭಾರತದ ಮೊದಲ ಸಿನಿಮಾ ನಿರ್ಮಾಣ ಮಾಡುವುದು ದಾದಾ ಸಾಹೇಬ್ ಫಾಲ್ಕೆಗೆ ಹೂವಿನ ಮೇಲಿನ ನಡಿಗೆ ಆಗಿರಲಿಲ್ಲ. ಹಲವಾರು ಕಷ್ಟಗಳನ್ನು ಅವರು ಎದುರಿಸಬೇಕಾಯಿತು. ಮೊದಲ ಸಿನಿಮಾ ನಿರ್ಮಾಣ ಆಗಿದ್ದು ಹೇಗೆಂದು ತಿಳಿವ ಮೊದಲು ದಾದಾ ಸಾಹೇಬ್ ಫಾಲ್ಕೆ ಜೀವನ ತಿಳಿಯುವುದು ಅತ್ಯಂತ ಅವಶ್ಯಕ.

  ದುಂಡಿರಾಜ್ ಗೋವಿಂದ್ ಫಾಲ್ಕೆ ಎಂಬ ಜನ್ಮನಾಮ ಹೊಂದಿದ್ದ ದಾದಾಸಾಹೇಬ್ ಫಾಲ್ಕೆ ಹುಟ್ಟಿದ್ದು 1870, ಏಪ್ರಿಲ್ 30 ರಂದು ಈಗಿನ ಮಹಾರಾಷ್ಟ್ರದ ತ್ರಿಯಂಬಕ್‌ನಲ್ಲಿ. ದಾದಾ ಸಾಹೇಬ್ ತಂದೆ ಅರ್ಚಕ ವೃತ್ತಿ ಮಾಡುತ್ತಿದ್ದರು. ಎಳವೆಯಲ್ಲಿಯೇ ಕಲೆಯಲ್ಲಿ ಆಸಕ್ತಿ ಹೊಂದಿದ್ದ ಫಾಲ್ಕೆ ಬಾಂಬೆಯಲ್ಲಿ ಚಿತ್ರಕತೆಯಲ್ಲಿ ಪದವಿ ಗಳಿಸಿದರು. ತೈಲ ವರ್ಣ ಹಾಗೂ ವಾಟರ್ ಕಲರ್ ಪೇಂಟಿಂಗ್‌ ಅನ್ನು ಶಾಸ್ತ್ರೀಯವಾಗಿ ಕಲಿತರು.

  ಚಿತ್ರಕಲೆ, ಪ್ರತಿಕೃತಿ ನಿರ್ಮಾಣ ಹೀಗೆ ಹವ್ಯಾಸಗಳು ಸಾಗುತ್ತಿದ್ದ ಸಮಯದಲ್ಲಿ ಫಾಲ್ಕೆ ನಿರ್ಮಿಸಿದ್ದ ರಂಗಮಂಚದ ಪ್ರತಿಕೃತಿಗೆ ಅಹಮದಾಬಾದ್‌ನಲ್ಲಿ ಚಿನ್ನದ ಪದಕ ಬಹುಮಾನವಾಗಿ ಬಂತು. ಅದೇ ಸಮಯದಲ್ಲಿ ಫಾಲ್ಕೆಯ ಗೆಳೆಯರೊಬ್ಬರು ಕ್ಯಾಮೆರಾ ಒಂದನ್ನು ಫಾಲ್ಕೆಗೆ ಉಡುಗೊರೆಯಾಗಿ ನೀಡಿದರು. ಅದರಲ್ಲಿ ಹಲವು ಪ್ರಯೋಗಗಳನ್ನು ಮಾಡಲು ನಿರತರಾದ ಫಾಲ್ಕೆ ತಮ್ಮ ಕಾಲೇಜಿನ ಪ್ರಾಂಶುಪಾಲರ ಅನುಮತಿ ಪಡೆದು ಕ್ಯಾಮೆರಾಕ್ಕೆ ಸಂಬಂಧಿಸಿದ ವಿಷಯಗಳನ್ನು ಕಲಿಯಲು ಮಧ್ಯಪ್ರದೇಶದ ರತ್ಲಾಂ ತೆರಳಿದರು. ಅಲ್ಲಿ ಕಲಿತು ಬಂದ ನಂತರ 'ಶ್ರೀ ಫಾಲ್ಕೆ ಎನ್‌ಗ್ರೇವಿಂಗ್ ಆಂಡ್ ಫೊಟೊ ಪ್ರಿಂಟಿಂಗ್' ಹೆಸರಲ್ಲಿ ಸ್ಟುಡಿಯೋ ಕೆಲಸ ಆರಂಭಿಸಿದರು.

  ಗೋದ್ರಾಕ್ಕೆ ತೆರಳಿ ಹೆಂಡತಿ, ಮಗುವನ್ನು ಕಳೆದುಕೊಂಡ ಫಾಲ್ಕೆ

  ಗೋದ್ರಾಕ್ಕೆ ತೆರಳಿ ಹೆಂಡತಿ, ಮಗುವನ್ನು ಕಳೆದುಕೊಂಡ ಫಾಲ್ಕೆ

  ಆ ವೇಳೆಗಾಗಲೆ ಫಾಲ್ಕೆಗೆ ಮದುವೆಯಾಗಿತ್ತು. ಫಾಲ್ಕೆ ಜೀವನ ಬಹುತೇಕ ಬಡತನದಲ್ಲಿಯೇ ಸಾಗಿತು. ಮುಂಬೈನಲ್ಲಿ ಜೀವನ ಕಷ್ಟಕರವಾಗುತ್ತಿದೆ ಎನಿಸಿದಾಗ ಗೋಧ್ರಾಕ್ಕೆ ತೆರಳಿ ಅಲ್ಲಿ ಫೊಟೊ ಸ್ಟುಡಿಯೋ ಪ್ರಾರಂಭಿಸಿದರು. ಆದರೆ ಅಲ್ಲಿಯೂ ವ್ಯವಹಾರ ಕೈಹಿಡಿಯಲಿಲ್ಲ. ಜೊತೆಗೆ ಪ್ಲೇಗ್ ಮಹಾಮಾರಿಗೆ ಹೆಂಡತಿ ಹಾಗೂ ಮಗುವನ್ನು ಕಳೆದುಕೊಂಡು ಬರೋಡಾಕ್ಕೆ ವಾಪಸ್ಸಾದರು ಫಾಲ್ಕೆ. ಅಲ್ಲಿಯೂ ಅವರ ಫೊಟೊಗ್ರಫಿ ಉದ್ಯಮ ನಡೆಯಲಿಲ್ಲ ಕಾರಣ, 'ಕ್ಯಾಮೆರಾವು ವ್ಯಕ್ತಿಯ ಜೀವವನ್ನು ಹೀರಿಬಿಡುತ್ತದೆ' ಎಂಬ ಸುಳ್ಳು ಸುದ್ದಿ ಹರಡಿದ್ದರಿಂದ ಯಾರೂ ಫೊಟೊ ತೆಗೆಸಿಕೊಳ್ಳಲು ಬರುತ್ತಿರಲಿಲ್ಲ. ಬರೋಡ ಮಹಾರಾಜ ಸಹ ಇದೇ ಕಾರಣಕ್ಕೆ ಫಾಲ್ಕೆ ಅವರಿಂದ ಫೊಟೊ ತೆಗೆಸಿಕೊಂಡಿರಲಿಲ್ಲ. ಕೊನೆಗೆ ಸ್ಟುಡಿಯೋ ಬ್ಯುಸಿನೆಸ್‌ನಿಂದ ಜೀವನ ನಿರ್ವಹಣೆ ಕಷ್ಟವಾಗಿ, ನಾಟಕ ಕಂಪೆನಿಗಳ ಪರದೆಗೆ ಬಣ್ಣ ಬಳಿಯುವ, ಚಿತ್ರ ಬಿಡಿಸುವ ಕಾರ್ಯವನ್ನು ಫಾಲ್ಕೆ ಆರಂಭಿಸಿದರು. ಜೀವನ ನಡೆಸಲು ಅದು ಅವಶ್ಯಕವಾಗಿತ್ತು.

  ಜಾದೂ ಕಲಿತು ಪ್ರದರ್ಶನ ನೀಡಲು ಆರಂಭಿಸಿದ ಫಾಲ್ಕೆ

  ಜಾದೂ ಕಲಿತು ಪ್ರದರ್ಶನ ನೀಡಲು ಆರಂಭಿಸಿದ ಫಾಲ್ಕೆ

  ಅದೇ ಸಮಯದಲ್ಲಿ ಜರ್ಮನ್ ಜಾದೂಗಾರನೊಬ್ಬ ಫಾಲ್ಕೆಗೆ ಸಿಕ್ಕು ಅವರಿಂದ ಜಾದೂ ಕಲಿತ ಫಾಲ್ಕೆ ಜೀವನ ನಡೆಸಲು ಜಾದೂ ಪ್ರದರ್ಶನ ನೀಡಲು ಆರಂಭಿಸಿದರು. ನಂತರ ಅದನ್ನೂ ಬಿಟ್ಟ ಫಾಪ್ಲೆ. 1902ರಲ್ಲಿ ಸರಸ್ವತಿ ಎಂಬುವರನ್ನು ಮದುವೆಯಾದರು. ನಂತರ ಪ್ರಿಂಟಿಂಗ್ ಪ್ರೆಸ್ ವ್ಯವಹಾರ ಆರಂಭಿಸಿದರು. ಪ್ರಿಂಟಿಂಗ್ ಪ್ರೆಸ್ ಫಾಲ್ಕೆಯ ಕೈ ಹಿಡಿಯಿತು. ಒಳ್ಳೆಯ ವ್ಯಾಪಾರವೇ ಆಗುತ್ತಿತ್ತು. ಫಾಲ್ಕೆಗೆ ಪಾಲುದಾರರೂ ಒಬ್ಬರಿದ್ದರು. 1909 ರಲ್ಲಿ ಪ್ರಿಂಟಿಂಗ್ ಮಷಿನ್‌ಗೆ ಬೇಕಾದ ವಸ್ತುಗಳನ್ನು ಖರೀದಿಸಲು ಜರ್ಮನಿಗೆ ತೆರಳಿದ್ದರು ಫಾಲ್ಕೆ. ಅಲ್ಲಿಂದ ಸಾಕಷ್ಟು ಹೊಸ ಮಾದರಿ ಮಷಿನ್‌ಗಳನ್ನು, ಬಣ್ಣಗಳನ್ನು ಖರೀದಿಸಿ ತಂದು ಭಾರತದಲ್ಲಿ ಒಳ್ಳೆಯ ವ್ಯವಹಾರ ಮಾಡುತ್ತಿದ್ದರು. ಆದರೆ ಲಾಭ ಹೆಚ್ಚಾದಂತೆ ಪಾಲುದಾರನೊಂದಿಗೆ ಜಗಳ ಆರಂಭವಾಗಿ ಫಾಲ್ಕೆ ಪ್ರೆಸ್ ಕಾರ್ಯವನ್ನು ಬಿಟ್ಟು ಹೊರಗೆ ಬಂದುಬಿಟ್ಟರು. ಆ ನಂತರ ಹಲವು ಪ್ರೆಸ್‌ಗಳು ಅವಕಾಶ ನೀಡಿದವರಾದರೂ ಫಾಲ್ಕೆ ಯಾವುದನ್ನೂ ಒಪ್ಪಿಕೊಳ್ಳಲಿಲ್ಲ.

  ಎಲ್ಲವೂ ಬದಲಾಗಿದ್ದು ಏಪ್ರಿಲ್ 14, 1912ರಂದು

  ಎಲ್ಲವೂ ಬದಲಾಗಿದ್ದು ಏಪ್ರಿಲ್ 14, 1912ರಂದು

  ಜೀವನ ಮತ್ತೆ ಕಷ್ಟಕ್ಕೆ ಬಿದ್ದಿತು. ಎಲ್ಲವೂ ಬದಲಾಗಿದ್ದು ಏಪ್ರಿಲ್ 14, 1911 ರಂದು. ಅಂದು ತಮ್ಮ ಮಗನನ್ನು ಕರೆದುಕೊಂಡು ಬಾಂಬೆಯ ಗಿರ್‌ಗಾಂವ್ ಪ್ರದೇಶದಲ್ಲಿದ್ದ ಅಮೆರಿಕ ಇಂಡಿಯನ್ ಪಿಕ್ಚರ್ ಪ್ಯಾಲೇಸ್ ಎಂಬ ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಹೋದರು. ಅಲ್ಲಿ 'ಅಮೇಜಿಂಗ್ ಅನಿಮಲ್ಸ್' ಹೆಸರಿನ ಸಿನಿಮಾ ಪ್ರದರ್ಶಿತವಾಗುತ್ತಿತ್ತು. ಪ್ರಾಣಿಗಳನ್ನು ತೆರೆಯ ಮೇಲೆ ಕಂಡು ಫಾಲ್ಕೆ ಆಶ್ಚರ್ಯಚಕಿತರಾಗಿ ಹೋದರು. ಮನೆಗೆ ಬಂದು ಕುಟುಂಬದವರಿಗೆ ತಾವು ಕಂಡ ಅದ್ಭುತ ವರ್ಣಿಸಿದಾಗ ಯಾರೂ ನಂಬಲಿಲ್ಲ. ಮಾರನೇಯ ದಿನವೇ ಕುಟುಂಬದವರನ್ನೆಲ್ಲ ಸಿನಿಮಾಕ್ಕೆ ಕರೆದುಕೊಂಡು ಹೋದರು. ಆ ದಿನ ಈಸ್ಟರ್ ಆಗಿದ್ದ ಕಾರಣ ಚಿತ್ರಮಂದಿರದಲ್ಲಿ 'ದಿ ಲೈಫ್ ಆಫ್ ಕ್ರೈಸ್ಟ್' ಸಿನಿಮಾ ಪ್ರದರ್ಶನಗೊಳ್ಳುತ್ತಿತ್ತು. ಅಂದು ಜನರೆಲ್ಲ ಸಿನಿಮಾ ನೋಡುತ್ತಿದ್ದರೆ ಫಾಲ್ಕೆ ಮಾತ್ರ ಪ್ರೊಜೆಕ್ಟರ್ ನೋಡುತ್ತಾ ಕೂತಿದ್ದರಂತೆ.

  ಜೀವನವನ್ನೇ ಬದಲಾಯಿಸಿದ ಆ ಘಟನೆ

  ಜೀವನವನ್ನೇ ಬದಲಾಯಿಸಿದ ಆ ಘಟನೆ

  ಆ ಘಟನೆ ಬಳಿಕ ಸಿನಿಮಾ ಬಗ್ಗೆ ಅತೀವ ಕುತೂಹಲ ಬೆಳೆಸಿಕೊಂಡ ಫಾಲ್ಕೆ ಮುಂದಿನ ಒಂದು ವರ್ಷ ಸಿನಿಮಾಕ್ಕೆ ಸಂಭದಿಸಿದ ಪುಸ್ತಕಗಳು, ಫಿಲಂ ರೀಲ್‌ಗಳು, ಸ್ಟಿಲ್ ಕ್ಯಾಮೆರಾ ಎಲ್ಲವನ್ನೂ ಖರೀದಿಸಿದರು. ಮೇಣದ ಬತ್ತಿ ಬೆಳಕಿನ ಸಹಾಯದೊಂದಿಗೆ ಫಿಲಂ ರೀಲ್‌ನಲ್ಲಿರುವ ಚಿತ್ರಗಳು ಬಟ್ಟೆಯ ಮೇಲೆ ಮೂಡುವಂತೆ ಮಾಡಿ ಮನೆಯವರಿಗೆ ತೋರಿಸುತ್ತಿದ್ದರಂತೆ. ಪ್ರತಿದಿನ ಎಂಟು-ಹತ್ತು ಗಂಟೆ ಅವುಗಳನ್ನು ನೋಡುವುದೇ ಫಾಲ್ಕೆ ಕೆಲಸವಾಗಿಬಿಟ್ಟಿತ್ತು. ನಿದ್ರೆ, ಊಟ ಎಲ್ಲವನ್ನೂ ಫಾಲ್ಕೆ ಮರೆತುಬಿಟ್ಟರು. ಸತತವಾಗಿ ರೀಲ್‌ ವಿಡಿಯೋಗಳನ್ನು ನೋಡಿದ್ದರಿಂದ ಕಣ್ಣಿಗೆ ದೊಡ್ಡ ಹಾನಿಯೂ ಆಗಿತ್ತು. ನಂತರ ವೈದ್ಯರೊಬ್ಬರ ಸಹಾಯದಿಂದ ಕಣ್ಣಿನ ದೃಷ್ಟಿ ಸರಿಹೋಯಿತು.

  ಸಿನಿಮಾ ಕುರಿತು ಕಲಿಯಲು ಲಂಡನ್‌ಗೆ ಪ್ರಯಾಣ

  ಸಿನಿಮಾ ಕುರಿತು ಕಲಿಯಲು ಲಂಡನ್‌ಗೆ ಪ್ರಯಾಣ

  ಕೊನೆಗೊಂದು ದಿನ, ''ನಾನೂ ಒಂದು ಸಿನಿಮಾ ನಿರ್ಮಾಣ ಮಾಡಲೇ ಬೇಕು'' ಎಂಬ ಗಟ್ಟಿ ನಿರ್ಧಾರ ಮಾಡಿ 1912ರ ಫೆಬ್ರವರಿ 1 ರಂದು ಲಂಡನ್‌ಗೆ ತೆರಳೇ ಬಿಟ್ಟರು ಫಾಲ್ಕೆ. ಅಲ್ಲಿ 'ಭಯೋಸ್ಕೋಪ್ ಸಿನಿ ವೀಕ್ಲಿ' ಹೆಸರಿನ ಪತ್ರಿಕೆ ಪ್ರಕಟವಾಗುತ್ತಿತ್ತು. ಅದಕ್ಕೆ ಚಂದಾದಾರರಾದ ಫಾಲ್ಕೆ, ಆ ಪತ್ರಿಕೆಯ ಸಂಪಾದಕರನ್ನು ಭೇಟಿಯಾಗಿ ಸಿನಿಮಾ ನಿರ್ಮಾಣ ಮಾಡಬೇಕೆಂಬ ತಮ್ಮ ಮನದಾಸೆ ಹೇಳಿಕೊಂಡರು. ಸಂಪಾದಕ ಮೊದಲಿಗೆ, ''ಭಾರತದಲ್ಲಿ ಸಿನಿಮಾ ಮಾಡುವುದು ವ್ಯರ್ಥ'' ಎಂದು ನಿರುತ್ಸಾಹಗೊಳಿಸಿದರು. ಆದರೆ ಫಾಲ್ಕೆಯ ಉತ್ಸಾಹ, ಸಮರ್ಪಣೆ ನೋಡಿ ವಾಲ್ಟನ್ ಸ್ಟುಡಿಯೋಸ್‌ನ ಸೆಸಿಲ್ ಹೆಪ್‌ವರ್ತ್‌ಗೆ ಫಾಲ್ಕೆಯವರನ್ನು ಪರಿಚಯ ಮಾಡಿಸಿದರು. ಅವರಿಂದ ಸಿನಿಮಾ ನಿರ್ಮಾಣದ, ಚಿತ್ರೀಕರಣದ ಹಾಗೂ ಪ್ರದರ್ಶನದ ವಿಷಯಗಳನ್ನು ಫಾಲ್ಕೆ ಅರಿತುಕೊಂಡರು. ಲಂಡನ್‌ನಲ್ಲಿ ಎರಡು ತಿಂಗಳು ಕಳೆದ ಫಾಲ್ಕೆ ಅಲ್ಲಿಯೇ ಕೋಡ್ಯಾಕ್ ಫಿಲಂ ರೀಲ್‌ ಹಾಗೂ ಇತರೆ ವಸ್ತುಗಳಿಗೆ ಆರ್ಡರ್ ನೀಡಿ ಏಪ್ರಿಲ್ 1, 1912ರಂದು ವಾಪಸ್ ಬಂದರು. ಅದೇ ದಿನ 'ಫಾಲ್ಕೆ ಫಿಲಮ್ಸ್ ಕಂಪೆನಿ' ಆರಂಭಿಸಿದರು ಫಾಲ್ಕೆ.

  ನಿರ್ಮಾಪಕರನ್ನು ಹುಡುಕಲು ಐಡಿಯಾ ಮಾಡಿದ ಫಾಲ್ಕೆ

  ನಿರ್ಮಾಪಕರನ್ನು ಹುಡುಕಲು ಐಡಿಯಾ ಮಾಡಿದ ಫಾಲ್ಕೆ

  ಫಾಲ್ಕೆ, ಕೈಯಲ್ಲಿದ್ದ ಹಣವನ್ನೆಲ್ಲ ಖಾಲಿ ಮಾಡಿಕೊಂಡಿದ್ದರು ಆದರೆ ತಾವು ನಿರ್ಮಿಸಿರುವ ಸಿನಿಮಾವನ್ನು ಪ್ರೊಸೆಸಿಂಗ್ ಮಾಡಬೇಕೆಂದರೆ ದೊಡ್ಡ ಮನೆಗೆ ಸ್ಥಳಾಂತರವಾಗಲೇ ಬೇಕಿತ್ತು, ಸಾಲ-ಸೋಲ ಮಾಡಿ ದೊಡ್ಡ ಮನೆಗೆ ಸ್ಥಳಾಂತರವಾಗಿ ಅಲ್ಲಿ ಫಿಲಂ ರೀಲ್ ಪ್ರೊಸೆಸ್ ಮಾಡುವ ಲ್ಯಾಬ್ ಅನ್ನು ತಾವೇ ನಿರ್ಮಾಣ ಮಾಡಿದರು ಅದಕ್ಕೆಲ್ಲ ಸಾಕಷ್ಟು ಹಣ ವ್ಯಯ ಮಾಡಿದರು. ಮನೆಯಲ್ಲಿನ ಒಡವೆ, ಇತರೆ ವಸ್ತುಗಳನ್ನೆಲ್ಲ ಮಾರಿಯಾಗಿತ್ತು. ಅಷ್ಟರಲ್ಲಿ ಲಂಡನ್‌ನಿಂದ ತಾವು ಆರ್ಡರ್ ನೀಡಿದ್ದ ವಸ್ತುಗಳು ಬಂದವು. ಅದನ್ನು ಬಳಸಿ ಪ್ರಯೋಗಾತ್ಮಕವಾಗಿ ಮನೆಯ ಸುತ್ತ-ಮುತ್ತಲಿನ ಮಕ್ಕಳ ವಿಡಿಯೋ ಚಿತ್ರೀಕರಿಸಿದರು ಪ್ರೊಸೆಸ್ ಮಾಡಿ ಪ್ರದರ್ಶನ ಮಾಡಿದರು. ಹೆಂಡತಿಗೂ ಪ್ರೊಸೆಸಿಂಗ್ ಹೇಳಿಕೊಟ್ಟರು. ತಾನೀಗ ಸಿನಿಮಾ ಚಿತ್ರೀಕರಿಸಬಹುದು ಎಂಬ ಗಟ್ಟಿ ಆತ್ಮವಿಶ್ವಾಸ ಮೂಡುವ ವೇಳೆಗಾಗಲೆ ಫಾಲ್ಕೆ ಬರಿಗೈ ಆಗಿದ್ದರು. ಸಿನಿಮಾ ನಿರ್ಮಾಣಕ್ಕೆ ನಿರ್ಮಾಪಕರನ್ನು ಹುಡುಕಲು ಆರಂಭಿಸಿದರು ಆದರೆ ಯಾರೂ ಸಹ ಇವರನ್ನು ಮಾತುಗಳನ್ನು ನಂಬಲೇ ಇಲ್ಲ. ಆಗ ಫಾಲ್ಕೆ ಐಡಿಯಾ ಒಂದನ್ನು ಮಾಡಿದರು.

  English summary
  History Of Indian Cinema: Father of Indian Cinema Dadasaheb Phalke's life and difficulties he faced before he started filming India's first movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X