Don't Miss!
- News
Breaking: ಸಹಾಯಕ ಸಬ್ ಇನ್ಸ್ಪೆಕ್ಟರ್ ಗುಂಡಿನ ದಾಳಿ: ಆಸ್ಪತ್ರೆಯಲ್ಲಿ ಓಡಿಶಾ ಆರೋಗ್ಯ ಸಚಿವ ಸಾವು
- Sports
U-19 Women's T20 World Cup Final 2023: ಇಂಗ್ಲೆಂಡ್ ಮಣಿಸಿ ಚಾಂಪಿಯನ್ ಪಟ್ಟಕ್ಕೇರಿದ ಭಾರತ ವನಿತೆಯರು
- Finance
ರಾಷ್ಟ್ರವ್ಯಾಪಿ ಬ್ಯಾಂಕ್ ಮುಷ್ಕರ ಮುಂದೂಡಿದ ಬ್ಯಾಂಕ್ ಯೂನಿಯನ್ಸ್: ಜ.31ಕ್ಕೆ ಮಹತ್ವದ ಸಭೆ
- Lifestyle
ಫೆಬ್ರವರಿ 2023: ಈ ಮಾಸದಲ್ಲಿರುವ ಪ್ರಮುಖ ಹಬ್ಬಗಳು ಹಾಗೂ ವ್ರತಗಳ ಪಟ್ಟಿ
- Technology
ಬಜೆಟ್ ಬೆಲೆಯಲ್ಲಿ ಈ ಸ್ಮಾರ್ಟ್ಫೋನ್ಗಳು ಬೆಸ್ಟ್ ಎನಿಸಿಲಿವೆ! ಜಬರ್ದಸ್ತ್ ಫೀಚರ್ಸ್!
- Automobiles
ಬೆಲೆ ಏರಿಕೆ ಪಡೆದುಕೊಂಡ ಪರ್ಫಾಮೆನ್ಸ್ ಕಾರು ಪ್ರಿಯರ ಮೆಚ್ಚಿನ ಹ್ಯುಂಡೈ ಐ20 ಎನ್ ಲೈನ್
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
'ಬಾಸ್': ದರ್ಶನ್ ಸ್ವಂತ ಬ್ರಾಂಡ್ ಗೆ 'ಟೈಟಲ್' ನೀಡಿದ್ದು ಈ ವ್ಯಕ್ತಿ
Recommended Video
ಸ್ಯಾಂಡಲ್ ವುಡ್ 'ಬಾಸ್' ಯಾರು..? ಎನ್ನುವ ಚರ್ಚೆ ವರ್ಷಗಳ ಹಿಂದೆ ದೊಡ್ಡ ವಿವಾದ ಹುಟ್ಟುಹಾಕಿತ್ತು. ಅದೇನೇ ಇರಲಿ, ನಟ ದರ್ಶನ್ ರಿಗೆ ಅವರ ಅಭಿಮಾನಿಗಳು ಪ್ರೀತಿಯಿಂದ ಕರೆಯುವ ಹೆಸರು 'ಡಿ ಬಾಸ್'.
ಚಿತ್ರರಂಗದಲ್ಲಿ 'ಡಿ ಬಾಸ್' ಎಂಬುದೇ ದೊಡ್ಡ ಬ್ರಾಂಡ್. ಅದು ದರ್ಶನ್ ಕಷ್ಟಪಟ್ಟು ಕಟ್ಟಿದ ಸ್ವಂತ ಬ್ರಾಂಡ್. ಆ ಬ್ರಾಂಡ್ ಗೆ ಇರುವ ಕ್ರೇಜ್ ಸಿಕ್ಕಾಪಟ್ಟೆ ದೊಡ್ಡದು. ಈಗ ಬೃಹತ್ ಆಗಿ ಬೆಳೆದು ನಿಂತಿರುವ ಡಿ ಬಾಸ್ ಬ್ರಾಂಡ್ ವರ್ಷಗಳ ಹಿಂದೆ ಹುಟ್ಟಿಕೊಂಡಿತ್ತು.
'ಬಾಸ್'
ಯಾರು?
ದರ್ಶನ್
ಫ್ಯಾನ್ಸ್
ಗಳಿಂದ
ಹೊಸ
ಅಭಿಯಾನ
ಇಂದು ಅಭಿಮಾನಿಗಳು 'ಡಿ ಬಾಸ್' ಎಂದು ಕರೆಯುವ ದರ್ಶನ್ ಗೆ ಅಂದು ಒರ್ವ ವ್ಯಕ್ತಿ 'ಬಾಸ್' ಎಂದು ಸಿನಿಮಾ ಮೂಲಕ ನಾಮಕರಣ ಮಾಡಿದ್ದರು. ಆ ವ್ಯಕ್ತಿಯನ್ನು ನಿಮ್ಮ 'ಫಿಲ್ಮಿಬೀಟ್ ಕನ್ನಡ' ರಿವೀಲ್ ಮಾಡುತ್ತಿದೆ.

ನಿರ್ಮಾಪಕ ರಮೇಶ್ ಯಾದವ್
ದರ್ಶನ್ ರಿಗೆ ಮೊದಲು ಸಿನಿಮಾ ಮೂಲಕ 'ಬಾಸ್' ಎಂದು ಕರೆದಿದ್ದು, ನಿರ್ಮಾಪಕ ರಮೇಶ್ ಯಾದವ್. ಚಿತ್ರರಂಗದಲ್ಲಿ ಸುಮಾರು 2 ದಶಕಗಳಿಂದ ಸಕ್ರಿಯರಾಗಿ ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ರಮೇಶ್ ಯಾದವ್, ದರ್ಶನ್ ಗೆ ಪ್ರೀತಿಯಿಂದ ಕರೆಯುವ ಹೆಸರು 'ಬಾಸ್'.

'ಬಾಸ್' ಎಂದೇ ಸಿನಿಮಾ ಮಾಡಿದ ರಮೇಶ್ ಯಾದವ್
ದರ್ಶನ್ ಸಿಕ್ಕಾಗೆಲ್ಲ 'ಬಾಸ್' ಅಂತ ಕರೆಯುತ್ತಿದ್ದ ರಮೇಶ್ ಯಾದವ್ ಅದೇ 'ಬಾಸ್' ಎಂಬ ಟೈಟಲ್ ಇಟ್ಟು ಸಿನಿಮಾ ನಿರ್ಮಾಣ ಮಾಡಿದರು. ಆರ್ ರಘುರಾಜ್ ನಿರ್ದೇಶನದಲ್ಲಿ, ರಮೇಶ್ ಯಾದವ್ ಮತ್ತು ದರ್ಶನ್ ಕಾಂಬಿನೇಶನ್ ನಲ್ಲಿ 2011 ರಲ್ಲಿ 'ಬಾಸ್' ಸಿನಿಮಾ ತೆರೆಗೆ ಬಂದಿತ್ತು.
ದರ್ಶನ್
'ಬಾಸ್'
ಎಂದು
ಬಾಯ್ತುಂಬ
ಕರೆದ
ಸುಮಲತಾ

ಆಕಸ್ಮಿಕವಾಗಿ ಹೊಳೆದ ಟೈಟಲ್
''ಬಾಸ್' ಚಿತ್ರಕ್ಕಾಗಿ ಟೈಟಲ್ ಹುಡುಕುತಿದ್ವಿ. ಕಥೆ ಓಕೆ ಆಗಿತ್ತು. ಟೈಟಲ್ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ಬಾಸ್ ಅಂತಲೇ ಇಟ್ಟುಬಿಡೋಣ ಎಂದೆ. ಡೈರೆಕ್ಟರ್ ಓಕೆ ಎಂದರು. ದರ್ಶನ್ ಗೂ ಇಷ್ಟ ಆಯ್ತು. ಈಗ ಅವರನ್ನು 'ಡಿ ಬಾಸ್' ಎಂದು ಕರೆಯುತ್ತಾರೆ. ನಾನು ಯಾವಾಗಲೂ 'ಬಾಸ್' ಅಂತಲೇ ಅವರನ್ನು ಮಾತನಾಡಿಸುವುದು. ಹೀಗಾಗಿ 'ಬಾಸ್' ಅಂತಲೇ ಟೈಟಲ್ ಕೊಟ್ಟೆ.'' ಎಂದು 'ಫಿಲ್ಮಿಬೀಟ್ ಕನ್ನಡ'ಗೆ ರಮೇಶ್ ಯಾದವ್ ಹೇಳಿದರು.

ಕ್ಲಾಸ್ ಗೂ ಮಾಸ್ ಗೂ ಬಾಸ್
''ಬಾಸ್' ಚಿತ್ರದಲ್ಲಿ ದರ್ಶನ್ ಡಬಲ್ ಆಕ್ಟಿಂಗ್ ಮಾಡಿದ್ದರು. ಮಾಸ್ ಎಲಿಮೆಂಟ್ ಇರುವ ಸಿನಿಮಾ ಅದಾಗಿತ್ತು. ಸಿನಿಮಾದಲ್ಲಿ 'ನಾನು ಕ್ಲಾಸ್ ಗೂ ಮಾಸ್ ಗೂ ಬಾಸ್..' ಅಂತ ಸಾಂಗ್ ಮಾಡಿದ್ವಿ. ಸಾಂಗ್ ಗೆ ತಕ್ಕ ಹಾಗೆ, ದರ್ಶನ್ ಕ್ಲಾಸ್ ಗೂ ಮಾಸ್ ಗೂ ಬಾಸ್.'' ಎಂದರು ರಮೇಶ್ ಯಾದವ್.

'ಬಾಸ್' ಟೈಟಲ್ ಜನಪ್ರಿಯತೆ
ಹಾಗೆ ನೋಡಿದರೆ, ದರ್ಶನ್ ರಿಗೆ ಅವರ ಆಪ್ತವಲಯದಲ್ಲಿ ಹೆಚ್ಚು ಜನರು ಅವರನ್ನು 'ಬಾಸ್' ಎಂದು ಕರೆಯುತ್ತಾರೆ. ಹೀಗಾಗಿ, ದರ್ಶನ್ ಗೆ ಮೊದಲು ಯಾರು 'ಬಾಸ್' ಅಂತ ಕರೆದರು ಎನ್ನುವುದಕ್ಕಿಂತ ಹೆಚ್ಚಾಗಿ, 'ಬಾಸ್' ಎಂದು ಟೈಟಲ್ ಇಟ್ಟು, ಸಿನಿಮಾ ಮಾಡಿ ದೊಡ್ಡ ಮಟ್ಟದಲ್ಲಿ ಜನಪ್ರಿಯತೆಗೊಳಿಸಿದ್ದು ರಮೇಶ್ ಯಾದವ್.