For Quick Alerts
  ALLOW NOTIFICATIONS  
  For Daily Alerts

  ಕುಟುಂಬದಿಂದ ವಿರೋಧ ಎದುರಿಸಿದ್ದ ಅಲ್ಲು ಅರ್ಜುನ್-ಸ್ನೇಹಾ ರೆಡ್ಡಿ ಲವ್‌ ಸ್ಟೋರಿ

  |

  ನಟ ಅಲ್ಲು ಅರ್ಜುನ್ ಗೆ ಈಗ 37 ವರ್ಷ ವಯಸ್ಸು. 2001 ರಲ್ಲಿ ಬಿಡುಗಡೆ ಆದ 'ಡ್ಯಾಡಿ' ಸಿನಿಮಾದಲ್ಲಿ ಪಾತ್ರ ಮಾಡಿದ್ದ ಸಣ್ಣ ಹುಡುಗ ಅಲ್ಲು ಅರ್ಜುನ್ ನಂತರ ಏರಿದ ಎತ್ತರ ಸಾಮಾನ್ಯದ್ದಲ್ಲ.

  ತೆಲುಗು ಸಿನಿಮಾಉದ್ಯಮದ ಪಕ್ಕಾ ಹಿಟ್ ನಟ ಎಂದೇ ಕರೆಸಿಕೊಳ್ಳುವ ಅಲ್ಲು ಅರ್ಜುನ್‌ ಸಿನಿಮಾ ಕುಟುಂಬದಿಂದ ಬಂದವರೇ ಆದರು, ಸಿನಿಮಾಕ್ಕಾಗಿ ಶ್ರಮ ಪಟ್ಟವರೇ. ವಿಶೇಷವಾಗಿ ಅಲ್ಲು ಅರ್ಜುನ್ ಆರಿಸಿಕೊಳ್ಳುವಷ್ಟು ಮುತುವರ್ಜಿಯಿಂದ ತೆಲುಗು ಸಿನಿಮಾಉದ್ಯಮದಲ್ಲಿ ಯಾರೂ ಕತೆ ಆಯ್ಕೆ ಮಾಡಿಕೊಳ್ಳುವುದಿಲ್ಲ ಎಂಬ ಮಾತಿದೆ. ಈ ಕತೆ ಆಯ್ಕೆಯ ಹಿಂದೆ ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಅರದ್ದೂ ಬೆಂಬಲವಿದೆ.

  ಮೆಗಾಸ್ಟಾರ್ ಚಿರಂಜೀವಿ ಅಭಿಮಾನಿಗಳ ಕ್ಷಮೆ ಕೇಳಿದ ಒಟಿಟಿ

  ಅಲ್ಲು ಅರ್ಜುನ್-ಸ್ನೇಹಾ ರೆಡ್ಡಿ ವಿವಾಹವಾಗಿ ಹತ್ತು ವರ್ಷವಾಗಿದೆ. ಈ ದಂಪತಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಭಿನ್ನ ಜಾತಿಯ-ಭಿನ್ನ ಕುಟುಂಬದ ಇವರಿಬ್ಬರ ಪ್ರೇಮ ಕತೆ ಸರಳವಾಗಿಯೇನೂ ಇರಲಿಲ್ಲ. ಕೆಲವು ಅಡೆ-ತಡೆಗಳ ಬಳಿಕವೇ ಈ ಜೋಡಿ ಮದುವೆ ಆಗಿದ್ದು.

  ಸುಂದರ ಉಡುಗೊರೆ ಕೊಟ್ಟ ಬ್ರಹ್ಮಾನಂದಂ: ಭಾವುಕರಾದ ಅಲ್ಲು ಅರ್ಜುನ್

  ಮೊದಲ ನೋಟದಲ್ಲೇ ಪ್ರೀತಿಗೆ ಬಿದ್ದ ಅಲ್ಲು

  ಮೊದಲ ನೋಟದಲ್ಲೇ ಪ್ರೀತಿಗೆ ಬಿದ್ದ ಅಲ್ಲು

  ಅಲ್ಲು ಅರ್ಜುನ್ ಸಿನಿಮಾ ರಂಗದಲ್ಲಿ ಒಂದು ಸ್ಥಾಯಿಗೆ ಬಂದ ಬಳಿಕ ಮದುವೆಯೊಂದರ ಪಾರ್ಟಿಯಲ್ಲಿ ಸ್ನೇಹ ರೆಡ್ಡಿಯನ್ನು ಮೊದಲ ಬಾರಿಗೆ ನೊಡಿದರಂತೆ ಅಲ್ಲುಅರ್ಜುನ್. ಆಗಷ್ಟೆ ವಿದೇಶದಲ್ಲಿ ಓದು ಮುಗಿಸಿ ವಾಪಸ್ಸಾಗಿದ್ದ ಸ್ನೇಹ ರೆಡ್ಡಿಯನ್ನು ನೋಡಿದ ಕೂಡಲೇ ಪ್ರೇಮವಾಗಿ ಬನ್ನಿ ಗೆ.

  ದೊಡ್ಡ ಉದ್ಯಮಿ ಕೆಪಿ ರೆಡ್ಡಿ ಮಗಳು ಸ್ನೇಹಾ ರೆಡ್ಡಿ

  ದೊಡ್ಡ ಉದ್ಯಮಿ ಕೆಪಿ ರೆಡ್ಡಿ ಮಗಳು ಸ್ನೇಹಾ ರೆಡ್ಡಿ

  ಇಬ್ಬರಿಗೂ ಕಾಮನ್ ಗೆಳೆಯರೊಬ್ಬರಿಂದ ಪರಿಚಯವಾಗಿದೆ, ಪರಿಚಯ, ಸ್ನೇಹವಾಗಿ ಸ್ನೇಹ ಪ್ರೀತಿಯಾಗಿ ಬದಲಾಗಿದೆ. ಇಬ್ಬರೂ ಪ್ರೀತಿಸುತ್ತಿರುವ ವಿಷಯ ಮೊದಲು ಅಲ್ಲು ಅರ್ಜುನ್ ಮನೆಯಲ್ಲಿ ಗೊತ್ತಾಯಿತಂತೆ. ನಂತರ ಸ್ನೇಹಾ ರೆಡ್ಡಿ ಮನೆಯಲ್ಲಿಯೂ ವಿಷಯ ಗೊತ್ತಾಗಿದೆ. ಭಾರಿ ದೊಡ್ಡ ಬ್ಯುಸಿನೆಸ್ ಮನ್ ಕೆಪಿ ರೆಡ್ಡಿ ಮಗಳು ಸ್ನೇಹ ರೆಡ್ಡಿ.

  ಸ್ನೇಹ ಮನೆಯಲ್ಲಿ ಮದುವೆಗೆ ಒಪ್ಪಿರಲಿಲ್ಲ

  ಸ್ನೇಹ ಮನೆಯಲ್ಲಿ ಮದುವೆಗೆ ಒಪ್ಪಿರಲಿಲ್ಲ

  ಅಲ್ಲು ಅರ್ಜುನ್ ಮನೆಯಲ್ಲಿ ಮದುವೆಗೆ ಒಪ್ಪಿಕೊಂಡರಾದರೂ, ಜಾತಿ ಕಾರಣ ಮುಂದಿಟ್ಟು ಸ್ನೇಹಾ ರೆಡ್ಡಿ ಮನೆಯಲ್ಲಿ ಮದುವೆಗೆ ನಿರಾಕರಿಸಿದ್ದರಂತೆ. ನಂತರ ಅಲ್ಲು ಅರ್ಜುನ್ ಅವರೇ ಸಾಕಷ್ಟು ಪ್ರಯತ್ನ ಪಟ್ಟು, ಹಲವು ಗಣ್ಯರಿಂದ ಸ್ನೇಹಾ ರೆಡ್ಡಿ ತಂದೆಯವರಿಗೆ ಹೇಳಿಸಿ ಕೊನೆಗೆ ಮದುವೆಗೆ ಒಪ್ಪಿಕೊಳ್ಳುವಂತೆ ಮಾಡಿದರಂತೆ. ಸ್ನೇಹಾ ರೆಡ್ಡಿ ಸಹ ಅಲ್ಲು ಅರ್ಜುನ್‌ ಅನ್ನೇ ಮದುವೆಯಾಗುವುದಾಗಿ ಮನೆಯಲ್ಲಿ ಹಠ ಮಾಡಿದ್ದರಂತೆ.

  6 ಮಾರ್ಚ್ , 2011 ರಂದು ಮದುವೆ

  6 ಮಾರ್ಚ್ , 2011 ರಂದು ಮದುವೆ

  ಕೊನೆಗೆ ಮಾರ್ಚ್ 6, 2011 ರಲ್ಲಿ ಸ್ನೇಹ ರೆಡ್ಡಿ-ಅಲ್ಲು ಅರ್ಜುನ್ ಅವರುಗಳ ಮದುವೆ ಗುರು ಹಿರಿಯರ ನಿಶ್ಚಯದೊಂದಿಗೆ ಅದ್ಧೂರಿಯಾಗಿ ನೆರವೇರಿತು. ನಟ ಪುನೀತ್ ರಾಜ್‌ಕುಮಾರ್, ಶಿವರಾಜ್ ಕುಮಾರ್ ಅವರುಗಳು ಅಲ್ಲು ಅರ್ಜುನ್ ವಿವಾಹಕ್ಕೆ ಹಾಜರಾಗಿದ್ದರು.

  English summary
  Allu Arjun and Sneha Reddy's love turned into marriage on March 6, 2011. They have two children.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X